More

    ಲಾ ಚೇಂಬರ್ ನಿರ್ಮಾಣಕ್ಕೆ ಅನುದಾನ

    ಬೈಲಹೊಂಗಲ: ಪಟ್ಟಣದ ನ್ಯಾಯವಾದಿಗಳ ಸಂಘದ ವಾರ್ಷಿಕ ಮಹಾಸಭೆ, ಸಂಘಕ್ಕೆ ನೂತವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ, ಸಾಧಕ ನ್ಯಾಯವಾದಿಗಳ ಸನ್ಮಾನ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.

    ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಆರ್.ಮೆಳವಂಕಿ, ಪ್ರಧಾನ ಕಾರ್ಯದರ್ಶಿ ದುಂಡೇಶ ಗರಗದ ಮಾತನಾಡಿ, ಕರೊನಾ ಮಧ್ಯೆ ಸಂಘದ ಸದಸ್ಯರ ಸಮಸ್ಯೆಗೆ ಸ್ಪಂದಿಸಿ, ನ್ಯಾಯವಾದಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ನ್ಯಾಯಾಲಯದ ಸಂಘಕ್ಕೆ ‘ಲಾ ಚೇಂಬರ್’ ನಿರ್ಮಿಸಲು ನ್ಯಾಯಾಂಗ ಇಲಾಖೆಯನ್ನು ಒತ್ತಾಯಿಸಿದ್ದರಿಂದ ಸರ್ಕಾರದಿಂದ 10 ಕೋಟಿ ರೂ. ಅನುದಾನಕ್ಕೆ ಅನುಮೋದನೆ ಸಿಕ್ಕಿದೆ ಎಂದರು. ನಂತರ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿ ಅನುಮೊದನೆ ಪಡೆಯಲಾಯಿತು. ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಬಿ.ಆನಿಗೋಳ, ಉಪಾಧ್ಯಕ್ಷ ಮಂಜುನಾಥ ಸೋಮಣ್ಣವರ, ಪ್ರಧಾನ ಕಾರ್ಯದರ್ಶಿ ಸಂತೋಷ ಬಾವಿ, ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಅವಧಿಗೆ ನೇಮಕಗೊಂಡ ಐ.ಎ್.ತಡಸಲ, ಸಹ ಕಾರ್ಯದರ್ಶಿ ಎಂ.ಎಂ.ಅಲ್ಲಯ್ಯನವರಮಠ, ಖಜಾಂಚಿ ಜೆ.ಎಸ್.ಹುಕ್ಕೇರಿಮಠ, ಸದಸ್ಯರಾದ ಜಯಶ್ರೀ ಬೂದಿಹಾಳ, ಸುಜಾತಾ ಮಾಳಗಿ, ಶಾಂತಾ ಸಿದ್ರಾಮಣ್ಣವರ, ವಿಶ್ವನಾಥ ಪೂಜೇರ, ಈರಣ್ಣ ಹುಣಶೀಕಟ್ಟಿ, ಬಿ.ಎನ್.ಲಕ್ಕನಗೌಡರ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿರಸ್ತೆದಾರ ಡಿ.ಎ್.ಬಡಿಗೇರ, ಡಿ.ಎಸ್.ಹೊಗರ್ತಿ, ಎಂ.ಎಂ.ಸೋಪಿನ, ಸಿ.ಎಚ್.ಹೊಸಮನಿ, ಎಸ್.ಬಿ.ರೊಟ್ಟಿ
    ಹಾಗೂ ಪರ್ತಕರ್ತರನ್ನು ಗೌರವಿಸಲಾಯಿತು.

    ಎಸ್.ಬಿ ಆನಿಗೋಳ ಮಾತನಾಡಿ, ಸಂಘವನ್ನು ಅಭಿವೃದ್ಧಿ ಪಥದತ್ತ ಕರೆದುಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ನ್ಯಾಯವಾದಿಗಳ ಸಹಕಾರಿ ಸಂಘದ ಅಧ್ಯಕ್ಷ ಶ್ರೀಶೈಲ ಅಬ್ಬಾಯಿ, ಎ.ಐ.ಅಥಣಿ, ಎಸ್.ಎಸ್.ಮಠದ, ಸಿ.ಎಸ್.ಚಿಕ್ಕನಗೌಡರ, ಬಿ.ಎಂ.ಮೂಲಿಮನಿ, ಎಸ್.ಜಿ.ಬೂದಯ್ಯನವರಮಠ, ಬಿ.ಬಿ. ಹುಲಮನಿ, ಆರ್.ಜಿ.ಮೇಲಿನಮನಿ, ಅರುಣ ಯಲಿಗಾರ, ಗಿರಿಜಾ ಆಲಕಟ್ಟಿ, ಪ್ರೇಮಾ ಬಡಿಗೇರ, ವಿಜಯಲಕ್ಷ್ಮೀ ಹಿರೇಮಠ, ದೀಪಕ ಸಂಗೊಳ್ಳಿ, ರಮೇಶ ಪತ್ತಾರ, ರಮೇಶ ಕುರಬರ, ಎಸ್.ಸಿ.ಕರೀಕಟ್ಟಿ, ಆರ್.ಎಸ್.ಪಟ್ಟಣಶೆಟ್ಟಿ, ಅನಿಲ ಕರಬಣ್ಣವರ, ಬಿ.ಆರ್.ಹರಿದಾಸ, ಅನಿಲ ಕರಬಣ್ಣವರ, ವಿ.ಸಿ.ಸಂಗೊಳ್ಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts