More

    ಈ ನಗರದಲ್ಲಿ ಇನ್ನು ಸೂರ್ಯ ಹುಟ್ಟೋದು 2021ರಲ್ಲಿಯೇ!

    ವಾಷಿಂಗ್ಟನ್​: ನಮ್ಮ ದೇಶದಲ್ಲಿ ಬೆಳಗ್ಗೆ ಸೂರ್ಯೋದಯವಾದರೆ ಸಂಜೆ ಸೂರ್ಯಾಸ್ತಮಾನವಾಗುತ್ತದೆ. ಇದೇ ರೀತಿ ಪ್ರತಿ ದೇಶದಲ್ಲೂ ಇರುತ್ತದೆ ಎಂದುಕೊಂಡರೆ ಅದು ನಿಮ್ಮ ಭ್ರಮೆಯಷ್ಟೇ. ಕೆಲವು ಸ್ಥಳಗಳಲ್ಲಿ ಸೂರ್ಯ ಎರಡೆರೆಡು ತಿಂಗಳುಗಳ ಕಾಲ ಬರೋದೇ ಇಲ್ಲ. ಬಂದರೆ ಎರೆಡೆರೆಡು ತಿಂಗಳು ಹೋಗೋದೇ ಇಲ್ಲ.

    ಇದನ್ನೂ ಓದಿ: ಎರಡು ತಿಂಗಳ ಬಳಿಕ ಹೆಚ್ಚಾಯಿತು ಪೆಟ್ರೋಲ್, ಡೀಸೆಲ್ ಬೆಲೆ

    ಹೌದು ಇಂತದ್ದೊಂದು ವಿಸ್ಮಯ ನಡೆಯುವುದು ಅಮೆರಿಕದ ಅಲಾಸ್ಕಾದ ಉಟ್ಕಿಯಾವಿಕ್ಗಾಗಿಯಲ್ಲಿ. ಈ ನಗರದ ಈ ವರ್ಷದ ಕೊನೆಯ ಸೂರ್ಯಾಸ್ತಮಾನ ನವೆಂಬರ್​ 19ರಂದು ಅಂದರೆ ನಿನ್ನೆ ಆಗಿದೆ. ಇನ್ನು ಅಲ್ಲಿ ಸೂರ್ಯೋದಯವಾಗುವುದು 2021ರ ಜನವರಿ 22ರಂದೇ. ಅಲ್ಲಿಯವರೆಗೆ ನಗರದಲ್ಲಿ ಬರೀ ಕತ್ತಲೇ.

    ನಿಮಗೆ ಗೊತ್ತಿರುವಂತೆ ಭೂಮಿ ಪೂರ್ತಿ ವೃತ್ತಾಕಾರದಲ್ಲಿಲ್ಲ, ಮೇಲ್ಭಾಗದಲ್ಲಿ ಸ್ವಲ್ಪ ಚಪ್ಪಟೆಯಾಗಿದೆ. ಈ ಭೂಮಿ ಸುತ್ತುವಾಗ ಇಂತಹ ಭೌಗೋಳಿಕ ಅಚ್ಚರಿಗಳು ನಡೆಯುತ್ತವೆ. ಉಟ್ಕಿಯಾವಿಕ್ಗಾಗಿ ಪ್ರತಿ ವರ್ಷ ಪೋಲಾರ್​ ನೈಟ್​ ಮತ್ತು ಪೋಲಾರ್​ ಡೇ ಉಂಟಾಗುತ್ತದೆ. ಪೋಲಾರ್​ ನೈಟ್​ ಸಮಯದಲ್ಲಿ ಇಲ್ಲಿ ಎರಡು ತಿಂಗಳ ಕಾಲ ಸೂರ್ಯೋದಯವಾಗುವುದೇ ಇಲ್ಲ. ಪೋಲಾರ್​ ಡೇ ಸಮಯದಲ್ಲಿ ಎರಡು ತಿಂಗಳು ಸೂರ್ಯಾಸ್ತಮಾನವೇ ಆಗುವುದಿಲ್ಲ. ನಿನ್ನೆ ರಾತ್ರಿಯಿಂದ ಬರೋಬ್ಬರಿ ಎರಡು ತಿಂಗಳಿಗೂ ಹೆಚ್ಚು ಕಾಲ ನಗರ ಸಂಪೂರ್ಣವಾಗಿ ಕತ್ತಲೆಯಲ್ಲಿರಲಿದೆ. ಪ್ರತಿ ದಿನ ಕೆಲ ಗಂಟೆಗಳ ಕಾಲ ಸ್ವಲ್ಪ ಬೆಳಕು ಕಾಣಿಸುತ್ತದೆಯಾದರೂ ಸೂರ್ಯ ಮಾತ್ರ ಕಾಣಿಸಿಕೊಳ್ಳುವುದಿಲ್ಲ.

    ಇದನ್ನೂ ಓದಿ: 26/11 ಮುಂಬೈ ದಾಳಿ ದಿನವೇ ಮತ್ತೊಂದು ದಾಳಿಗೆ ಯೋಜನೆ !

    ಯಾರಿಗಾದರೂ ಸೂರ್ಯನ ಬೆಳಕಿನ ಬಗ್ಗೆ ಅಸಮಾಧಾನವಿದ್ದರೆ, ಅಂತವರು ಈಗ ಉಟ್ಕಿಯಾವಿಕ್ಗಾಗಿ ನಗರಕ್ಕೆ ಹೋಗಿ ನೆಮ್ಮದಿಯಾಗಿ ಇದ್ದು ಬರಬಹುದು. (ಏಜೆನ್ಸೀಸ್​)

    ಹುಡುಗನೊಂದಿಗೆ ಚಾಟ್​ ಮಾಡುತ್ತಿದ್ದ ತಂಗಿಗೆ ಗುಂಡಿಕ್ಕಿದ ಅಣ್ಣ; ಜೈಲು ಪಾಲಾದ ಅಪ್ರಾಪ್ತ

    ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts