More

    ದುಬಾರಿ ಆಗಲಿವೆ ಲ್ಯಾಪ್​ಟಾಪ್​, ಕ್ಯಾಮರಾ; ಚೀನಾದ ಜವಳಿ ಮೇಲೂ ಕರ ಹೆಚ್ಚಳಕ್ಕೆ ಚಿಂತನೆ

    ನವದೆಹಲಿ: ಚೀನಾದಿಂದ ಆಮದನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲ್ಯಾಪ್​ಟಾಪ್​, ಕ್ಯಾಮರಾಗಳು, ಜವಳಿ ಮತ್ತು ಅಲ್ಯುಮೀನಿಯಂ ಉತ್ಪನ್ನಗಳು ಸೇರಿ 20ಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ಕರವನ್ನು ಹೆಚ್ಚಿಸಲು ಚಿಂತನೆ ನಡೆಸಿದೆ. ಇದರಿಂದಾಗಿ ಈ ಎಲ್ಲ ವಸ್ತುಗಳ ಬೆಲೆ ದುಬಾರಿಯಾಗುವುದು ನಿಶ್ಚಿತವಾಗಿದೆ.

    ಸದ್ಯ ಕರ ಹೆಚ್ಚಳದ vಆಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಪ್ರಸ್ತಾವನೆ ವಿತ್ತ ಸಚಿವಾಲಯದ ಎದುರಿನಲ್ಲಿದೆ. ಈ ಬಗ್ಗೆ ಅದಿನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೂ ಈ ಹಿಂದೆ ಇದೇ ಪ್ರಸ್ತಾವನೆಯನ್ನು ಅದು ತಿರಸ್ಕರಿಸಿತ್ತು ಎನ್ನಲಾಗಿದೆ.

    ಚೀನಾವನ್ನು ಗಮನದಲ್ಲಿಟ್ಟುಕೊಂಡು ಕರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದರೂ ಒಟ್ಟಾರೆ ಸೀಮಾ ಸುಂಕ ಹೆಚ್ಚಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಹೇಳುವ ಮೂಲಕ ಲ್ಯಾಪ್​ಟಾಪ್​ ಮತ್ತು ಕ್ಯಮರಾಗಳು ಸೇರಿ ವಿವಿಧ ಉತ್ಪನ್ನಗಳ ಬೆಲೆ ಹೆಚ್ಚಳವಾಗುವುದು ನಿಶ್ಚಿತ ಎಂಬ ಸುಳಿವು ಬಿಟ್ಟುಕೊಟ್ಟಿದ್ದಾರೆ.

    ಇದನ್ನೂ ಓದಿ: ಟ್ರಂಪ್ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ವೈಟ್​ಹೌಸ್ ಹೊರಗೆ ಶೂಟೌಟ್​

    ಇತ್ತೀಚಿನ ದಿನಗಳಲ್ಲಿ ಭಾರತ ತಾನು ಮುಕ್ತ ವ್ಯಾಪಾರ ಒಪ್ಪಂದಗಳನ್ನು ಹೊಂದಿರುವ ವಿಯೆಟ್ನಾಂ ಅಥವಾ ಥಾಯ್ಲೆಂಡ್​ನಂಥ ರಾಷ್ಟ್ರಗಳಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಮುಂದಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ವಸ್ತುಗಳ ಮೇಲಿನ ಕರ ಹೆಚ್ಚಳ ಮಾಡುವ ವಿಷಯವಾಗಿ ಹಿಂದುಮುಂದು ಆಲೋಚಿಸುತ್ತಿದೆ.

    ಕಂದಾಯ ಇಲಾಖೆಯ ಯಾವುದೇ ಕ್ರಮ ಕೈಗೊಳ್ಳದೇ ಹೋಗಿದ್ದರಿಂದ, ವಾಣಿಜ್ಯ ಇಲಾಖೆಯು ಟೈರ್​ಗಳು ಮತ್ತು ಟಿವಿಗಳು ಸೇರಿ ವಿವಿಧ ವಸ್ತುಗಳ ಮೇಲಿನ ಆಮದು ಪರವಾನಗಿಯನ್ನು ಮರುಪರಿಶೀಲಿಸಲು ಮುಂದಾಗಿತ್ತು. ಇದರಿಂದಾಗಿ ದೇಶ ಐದಾರು ದಶಕಗಳಷ್ಟು ಹಿಂದಕ್ಕೆ ಹೋಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.

    ಪತ್ನಿಯ ಪುತ್ಥಳಿ ನಿರ್ವಿುಸಿ ಗೃಹಪ್ರವೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts