More

    ಟ್ರಂಪ್ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ವೈಟ್​ಹೌಸ್ ಹೊರಗೆ ಶೂಟೌಟ್​

    ವಾಷಿಂಗ್ಟನ್: ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲೇ ವೈಟ್​ಹೌಸ್ ಹೊರಗೆ ಶೂಟೌಟ್ ನಡೆದಿದೆ. ತತ್​ಕ್ಷಣವೇ ಸುದ್ದಿಗೋಷ್ಠಿ ಸ್ಥಗಿತಗೊಳಿಸಿದ ಅಧ್ಯಕ್ಷ ಟ್ರಂಪ್​ ಶ್ವೇತಭವನದೊಳಕ್ಕೆ ಹೋದರು. ಅಮೆರಿಕದ ಸೀಕ್ರೆಟ್ ಸರ್ವೀಸ್​ ಏಜೆಂಟ್ಸ್ ಬಂದೂಕುಧಾರಿ ವ್ಯಕ್ತಿಯನ್ನು ಹೊಡೆದುರುಳಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ಟ್ರಂಪ್ ಅವರು, ಶ್ವೇತ ಭವನದ ಹೊರಗೆ ಶೂಟ್​ ಔಟ್ ಆಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸೀಕ್ರೆಟ್ ಸರ್ವೀಸ್ ಏಜೆಂಟ್ಸ್​ಗೆ ಧನ್ಯವಾದ ಹೇಳುತ್ತೇನೆ. ದೊಡ್ಡ ಅನಾಹುತವನ್ನು ಅವರು ಕ್ಷಿಪ್ರವಾಗಿ ತಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ಧಾರೆ. ಯಾರನ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಹುಶಃ ಸೀಕ್ರೆಟ್ ಸರ್ವೀಸ್ ಏಜೆಂಟ್ಸ್​ ಹೊಡೆದುರುಳಿಸಿದ ಬಂದೂಕುಧಾರಿ ವ್ಯಕ್ತಿಯೇ ಇರಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ:  ವಿಶೇಷ ಆರ್ಥಿಕ ನೆರೆವಿಗೆ ಕೇಂದ್ರಕ್ಕೆ ಮನವಿ; ಪ್ರಧಾನಿ ಜತೆ ಅಶೋಕ್​-ಬೊಮ್ಮಾಯಿ ವಿಡಿಯೋ ಸಂವಾದ, 4 ಸಾವಿರ ಕೋಟಿ ರೂ. ನೀಡಲು ಮನವಿ

    ಶ್ವೇತಭವನದ ಆವರಣದಿಂದ ಹೊರಗೆ ನಡೆದ ಘಟನೆ ಇದಾಗಿದ್ದು, ಇದು ನನ್ನನ್ನು ಗುರಿಯಾಗಿಸಿದ್ದಲ್ಲ ಎಂದು ಭಾವಿಸಿದ್ದೇನೆ. ಯಾವುದೇ ರೀತಿಯಲ್ಲೂ ವೈಟ್​ಹೌಸ್​ನ ಭದ್ರತಾ ಲೋಪವಾಗಿಲ್ಲ ಎಂದು ನಂಬಿದ್ದೇನೆ ಎಂದು ಟ್ರಂಪ್​ ಹೇಳಿಕೊಂಡಿದ್ದಾರೆ.

    ಸೀಕ್ರೆಟ್​ ಸರ್ವೀಸ್​ ನೀಡಿರುವ ಮಾಹಿತಿ ಪ್ರಕಾರ, ಹದಿನೇಳನೇ ರಸ್ತೆ ಮತ್ತು ಪೆನ್ಸಿಲ್ವೇನಿಯಾ ಏವ್​ ನಡುವೆ ಈ ಶೂಟೌಟ್ ಆಗಿದ್ದು. ಅದರಲ್ಲಿ ಭಾಗಿಯಾದ ಅಧಿಕಾರಿ ಮಾಹಿತಿ ನೀಡಿದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ. ಬಂದೂಕುಧಾರಿ ವ್ಯಕ್ತಿ ಮತ್ತು ಸೀಕ್ರೆಟ್ ಸರ್ವೀಸ್ ಆಫೀಸರ್ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭಾಗದ ರಸ್ತೆಯನ್ನು ಬಂದ್ ಮಾಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. (ಏಜೆನ್ಸೀಸ್)

    ಕಂಗಳ ತೆರೆಯೆ ಕಾಣುವುದೆಲ್ಲ ಕೃಷ್ಣಾ ನಿನ್ನ ರೂಪಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts