More

    ಕೇರಳದ ಮುನ್ನಾರ್​ನಲ್ಲಿ ಭಾರಿ ಭೂಕುಸಿತ; 12 ಜನರ ಸಾವು

    ಇಡುಕ್ಕಿ: ಜಿಲ್ಲೆಯ ಮುನ್ನಾರ್​ನ ರಾಜಮಾಲಾ ಬಳಿಯ ಪೆಟ್ಟಿಮುಡಿ ಬೆಟ್ಟದಲ್ಲಿ ಭಾರಿ ಭೂಕುಸಿತ ಉಂಟಾಗಿದ್ದ ನೂರಾರು ಎಸ್ಟೇಟ್​ ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಎಸ್ಟೇಟ್​ ಕಾರ್ಮಿಕರ ನಾಲ್ಕು ಸಾಲು ವಸತಿ ಸಮುಚ್ಚಯಗಳು ಹಾಗೂ ಒಂದು ಚರ್ಚ್​ ಮಣ್ಣಿನ ಅವಶೇಷದಡಿ ಮುಚ್ಚಿ ಹೋಗಿವೆ.

    ಅಂದಾಜು 80ಕ್ಕೂ ಹೆಚ್ಚು ಜನರು ಅವಶೇಷದಡಿ ಸಿಲುಕಿರಬಹುದು ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವವರು ಶಂಕೆ ವ್ಯಕ್ತಪಡಿಸಿದ್ದಾರೆ.
    ಅವಶೇಷದಡಿಯಿಂದ ಇದುವರೆಗೆ 12 ಶವಗಳನ್ನು ಹೊರತೆಗೆಯಲಾಗಿದೆ. 10 ಜನರನ್ನು ರಕ್ಷಿಸಲಾಗಿದ್ದು, ಅವರೆಲ್ಲರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳನ್ನು ತೆರವುಗೊಳಿಸಲು ಸತತವಾಗಿ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ.

    ಶುಕ್ರವಾರ ಬೆಳಗಿನ ಜಾವದಲ್ಲಿ ಪೆಟ್ಟಿಮುಡಿ ಬೆಟ್ಟ ಭಾರಿ ಸದ್ದಿನೊಂದಿಗೆ ಕಾರ್ಮಿಕರ ಕಾಲನಿ ಮೇಲೆ ಕುಸಿಯಿತು. ಆ ಸಂದರ್ಭದಲ್ಲಿ ಜನರು ಸವಿ ನಿದ್ದೆಯಲ್ಲಿದ್ದ ಕಾರಣ, ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜತೆಗೆ ಪೆರಿಯಾವರ ಸೇತುವೆ ಕೂಡ ಕೊಚ್ಚಿಕೊಂಡು ಹೋಗಿರುವುದರಿಂದ, ರಕ್ಷಣಾ ಕಾರ್ಯಾಚರಣೆಗೆ ಭಾರಿ ಅಡ್ಡಿಯುಂಟಾಗಿದೆ.

    ಕೇರಳದ ಮುನ್ನಾರ್​ನಲ್ಲಿ ಭಾರಿ ಭೂಕುಸಿತ; 12 ಜನರ ಸಾವು

    ಸದ್ಯ ಪರಿಯಾವರದಲ್ಲಿ 2 ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 2018 ಮತ್ತು 2019ರಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಸೇತುವೆ ಸಂಪೂರ್ಣ ಹಾಳಾಗಿತ್ತು ಎನ್ನಲಾಗಿದೆ. ಕನ್ನಿಮಾಲಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಈ ಬಾರಿ ಕೂಡ ಪೆರಿಯಾವರ ಸೇತುವೆ ಮತ್ತೊಮ್ಮೆ ಹಾಳಾಗಿದೆ. ಗುರುವಾರದಂದು ಸೇತುವೆಗೆ ಹಾನಿಯಾಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಧಾರವಾಡಕ್ಕೆ ಬಂದು ಡಾನ್‌ ಆದ- ಮಗನ ಮದುವೆ ಮುಗಿಸಿ ಗುಂಡೇಟಿಗೆ ಬಲಿಯಾದ!

    ಇದರಿಂದಾಗಿ ಭೂಕುಸಿತ ಉಂಟಾಗಿರುವ ಪ್ರದೇಶಕ್ಕೆ ತಲುಪಲು ಅಗ್ನಿಶಾಮಕ ದಳ ಮತ್ತು ರಕ್ಷಣಾ ಕಾರ್ಯಾಚರಣೆಯ ಸಿಬ್ಬಂದಿ, ಎನ್​ಡಿಆರ್​ಎಫ್​, ಕಂದಾಯ ಇಲಾಖೆ ಅಧಿಕಾರಿಗಳು, ಎಸ್ಟೇಟ್​ ಕಾರ್ಮಿಕರು ಮತ್ತು ಪೊಲೀಸರು ಪರದಾಡುತ್ತಿದ್ದಾರೆ.

    ಇಡುಕ್ಕಿಗೆ ವಿಶೇಷ ಮೊಬೈಲ್​ ಮೆಡಿಕಲ್​ ಟೀಂ ಅನ್ನು ಕಳುಹಿಸಲಾಗಿದೆ. ಅಂದಾಜು 15ಕ್ಕೂ ಹೆಚ್ಚು ಆಂಬುಲೆನ್ಸ್​ಗಳನ್ನು ಕೂಡ ಅಲ್ಲಿಗೆ ರವಾನಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

    ಇಡುಕ್ಕಿಯಲ್ಲಿನ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚುವರಿ ವೈದ್ಯಕೀಯ ನೆರವು ಅಗತ್ಯವಾದಲ್ಲಿ ಅಲ್ಲಿಗೆ ರವಾನಿಸಲು ವಿಶೇಷ ವೈದ್ಯಕೀಯ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

    ಶಬನಂ ಡೆವಲಪರ್ಸ್ ಮೇಲೆ ಶೂಟೌಟ್​: ಭೂಗತ ಪಾತಕಿ ರವಿ ಪೂಜಾರಿ ಸಹಚರ ಅರೆಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts