More

    ಉಪನಗರ ರೈಲು ಮಾರ್ಗದ ಬದಿಯ ಜಾಗಕ್ಕೆ ಬಂಗಾರದ ಬೆಲೆ; ಭೂಮಿ ಮೌಲ್ಯಮಾಪನಕ್ಕೆ ಮುಂದಾದ ಕೆ-ರೈಡ್

    ಬೆಂಗಳೂರು: ಉಪನಗರ ರೈಲು ಮಾರ್ಗ ಸಾಗುವಲ್ಲಿನ ಭೂಮಿಗಳಿಗೆ ಇದೀಗ ಬಂಗಾರದ ಬೆಲೆ ಸಿಗಲಿದೆ. ಅದಕ್ಕಾಗಿ ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಕೆ-ರೈಡ್ ಸಂಸ್ಥೆ ಭೂಮಿಯ ಮೌಲ್ಯಮಾಪನ ಮಾಡಲು ಮುಂದಾಗಿದೆ. ನಗರದ ಸಂಚಾರ ದಟ್ಟಣೆ ನಿವಾರಣೆ ಮತ್ತು ಸಮೂಹ ಸಾರಿಗೆ ವ್ಯವಸ್ಥೆ ಗಟ್ಟಿಗೊಳಿಸುವ ಸಲುವಾಗಿ 148 ಕಿ.ಮೀ. ಉದ್ದದ ಉಪನಗರ ರೈಲು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಗೆ ಸಂಬಂಧಿಸಿದಂತೆ ಮಾರ್ಗ ನಿರ್ಮಾಣ ಸೇರಿ ಇನ್ನಿತರ ಕಾರ್ಯಗಳಿಗೆ ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗಿದೆ. ಅದಕ್ಕೂ ಮುನ್ನ ಯೋಜನೆಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದ್ದು, ಆ ಭೂಮಿ ಮತ್ತು ಅದರಲ್ಲಿರುವ ಕಟ್ಟಡಗಳ ಮೌಲ್ಯವನ್ನು ತಿಳಿಯುವ ಕಾರ್ಯ ಆರಂಭಿಸಲಾಗುತ್ತಿದೆ.

    583 ಎಕರೆ ಬೇಕು: ಯೋಜನೆಗಾಗಿ 583 ಎಕರೆ ಭೂಮಿಯ ಅವಶ್ಯಕತೆ ಇದೆ. ಅದರಲ್ಲಿ 153 ಎಕರೆ ರಾಜ್ಯ ಸರ್ಕಾರ, 327 ಎಕರೆ ರೈಲ್ವೆ ಇಲಾಖೆ, 103 ಎಕರೆ ಖಾಸಗಿಯವರಿಗೆ ಸೇರಿದ್ದಾಗಿದೆ. ಅದರಲ್ಲಿ ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆಗೆ ಸೇರಿದ 480 ಎಕರೆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲಾಗುತ್ತದೆ. ಖಾಸಗಿ ಭೂಮಿಗೆ ಪರಿಹಾರ ನೀಡಿ ಸ್ವಾಧೀನಪಡಿಸಿಕೊಳ್ಳಬೇಕಿದೆ.

    ಭೂಮಿ, ಕಟ್ಟಡ ಮೌಲ್ಯ ಹಾಕಲು ನಿರ್ಧಾರ: ವಶಪಡಿಸಿಕೊಳ್ಳಲಿರುವ ಖಾಸಗಿ ಭೂಮಿಯ ಮೌಲ್ಯಮಾಪನ ಮಾಡಲು ಕೆ-ರೈಡ್ ಸಂಸ್ಥೆ ಮುಂದಾಗಿದೆ. ಅದರಂತೆ ಭೂಮಿಯ ಮಾರುಕಟ್ಟೆ ದರ, ಅದರಲ್ಲಿನ ಕಟ್ಟಡಗಳು ಹಾಗೂ ಅದರ ಮೌಲ್ಯವನ್ನು ಲೆಕ್ಕ ಹಾಕಲು ಖಾಸಗಿ ಸಂಸ್ಥೆ ನೇಮಿಸಲಾಗುತ್ತದೆ. ಅದಕ್ಕಾಗಿ ಟೆಂಡರ್ ಕರೆಯಲಾಗಿದ್ದು, ಪ್ರಕ್ರಿಯೆ ಪೂರ್ಣಗೊಂಡ ನಂತರ ಭೂಸ್ವಾಧೀನ ಪ್ರಕ್ರಿಯೆಗೆ ಪೂರ್ವಸಿದ್ಧತೆಗೆ ಚಾಲನೆ ನೀಡಲಾಗುತ್ತದೆ.

    ಇದನ್ನೂ ನೋಡಿ: ಮಾರ್ಚ್ 15, 16 ರಂದು ದೇಶವ್ಯಾಪಿ ಬ್ಯಾಂಕ್​ ಮುಷ್ಕರಕ್ಕೆ ಕರೆ; ಕೆಲಸವಿದ್ದರೆ ಶುಕ್ರವಾರವೇ ಮುಗಿಸಿಕೊಳ್ಳಿ 

    ಎಕರೆಗೆ ಕೇವಲ 1 ರೂ.: ಯೋಜನೆಗೆ ಬೇಕಾದ ಭೂಮಿಯಲ್ಲಿ ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಭೂಮಿಯನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳದೆ, ಗುತ್ತಿಗೆ ಆಧಾರದಲ್ಲಿ ಪಡೆಯಲು ಕೆ-ರೈಡ್ ನಿರ್ಧರಿಸಿದೆ. ಗುತ್ತಿಗೆ ಆಧಾರದಲ್ಲಿ ಪಡೆಯಲಾಗುವ ಭೂಮಿಗೆ ಪ್ರತಿ ಎಕರೆಗೆ 1 ರೂ. ನೀಡುವ ಕುರಿತು ಈಗಾಗಲೆ ನಿರ್ಧರಿಸಲಾಗಿದೆ. ಆ ಕುರಿತು ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಜತೆಗೂ ಮಾತುಕತೆ ನಡೆಸಲಾಗಿದೆ.

    15,767 ಕೋಟಿ ರೂ. ಯೋಜನೆ: ಯೋಜನೆಗಾಗಿ ಒಟ್ಟು 15,767 ಕೋಟಿ ರೂ. ವೆಚ್ಚವಾಗಲಿದೆ ಎಂದು ನಿರ್ಧರಿಸಲಾಗಿದೆ. ಅದರಲ್ಲಿ 12,396 ಕೋಟಿ ರೂ.ಗಳನ್ನು ಸಿವಿಲ್ ಕಾಮಗಾರಿ ಸೇರಿ ಇನ್ನಿತರ ಕಾರ್ಯಗಳಿಗೆ ಖರ್ಚು ಮಾಡಿದರೆ, 3,371 ಕೋಟಿ ರೂ.ಗಳನ್ನು ಭೂಸ್ವಾಧೀನ, ಪುನರ್ವಸತಿಗೆ ವ್ಯಯಿಸಲಾಗುತ್ತದೆ.

    ‘ನಾನು ಹೊಡೆದೇ ಇಲ್ಲ, ಅವಳೇ ಚಪ್ಪಲಿಯಲ್ಲಿ ಹೊಡೆದಿದ್ದು.. ಹಿಂದಿಯಲ್ಲಿ ಬೈದಿದ್ದು..’ ಕಥೆಯನ್ನು ಬಿಚ್ಚಿಟ್ಟ ಡೆಲಿವರಿ ಬಾಯ್​

    ಅನುಮಾನಾಸ್ಪದವಾಗಿ ನಾಪತ್ತೆಯಾದ ಏಕೈಕ ಪುತ್ರ; ಮಗ ಕಾಣಿಸದ್ದರಿಂದ ಮಾನಸಿಕವಾಗಿ ಅಸ್ವಸ್ಥಗೊಂಡ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts