More

    ಭೂಮಿ ಮಾರಿಕೊಳ್ಳಬೇಡಿ

    ಕಂಪ್ಲಿ: ಇನಾಂ ರದ್ಧತಿಗೊಂಡ ಭೂಮಿಯನ್ನು ಮಾರಿಕೊಳ್ಳದೆ ಆರ್ಥಿಕ ಪ್ರಗತಿಗೆ ಸದ್ಭಳಕೆ ಮಾಡಿಕೊಳ್ಳಿ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

    ಇದನ್ನೂ ಓದಿ: ಸ್ಮಶಾನ ಭೂಮಿ ಮಂಜೂರಿಗೆ ಮನವಿ

    ಇಲ್ಲಿನ ಮಾರುತಿನಗರದ ಸಮುದಾಯ ಭವನದಲ್ಲಿ ಮಂಗಳವಾರ ಇನಾಂ ರದ್ಧತಿ ಕಾಯ್ದೆಯಡಿ ಫಾರಂ-2ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ರೈತರ ಹಲವು ವರ್ಷಗಳ ಬೇಡಿಕೆಯಂತೆ ಇನಾಂ ರದ್ದುಗೊಳಿಸಿ ಪಟ್ಟಾ ನೀಡಿದೆ.

    ರಾಜ್ಯದಲ್ಲಿಯೇ ಕಂಪ್ಲಿ ತಾಲೂಕು ಇನಾಂ ಮುಕ್ತ ತಾಲೂಕು ಆಗಿದೆ ಎಂದರು. ಬಳ್ಳಾರಿ ಎಸಿ ಎನ್.ಹೇಮಂತ್ ಮಾತನಾಡಿ, ಇನಾಂ ಭೂಮಿಗಳ ಪರಾಭಾರೆ, ಭೂಮಿ ಬೆಳವಣಿಗೆ, ಸಾಲ ಸೌಲಭ್ಯ ಪಡೆದುಕೊಳ್ಳಲು ತೊಂದರೆಯಾಗಿತ್ತು. ಇನಾಂ ಮುಕ್ತತೆಯಿಂದ ರೈತರಿಗೆ ಅನುಕೂಲವಾಗಲಿದೆ.

    302ಅರ್ಜಿ ಸ್ವೀಕರಿಸಿದ್ದು, ವಿಚಾರಣಾ ಹಂತದಲ್ಲಿ 117ಅರ್ಜಿಗಳನ್ನು ವಿಲೇವಾರಿಗೊಳಿಸಿದ್ದು, 185ಇನಾಮು ಮುಕ್ತ ಪಟ್ಟಾ ನೀಡಲಾಗುತ್ತಿದೆ. 94ಸಿಯ 17ಮನೆ ಪಟ್ಟಾಗಳನ್ನು ವಿತರಿಸಲಾಗುತ್ತಿದೆ ಎಂದರು.

    ತಹಸೀಲ್ದಾರ್ ಶಿವರಾಜ, ಬಳ್ಳಾರಿ ಡಿಸಿ ಕಚೇರಿ ಪತ್ರಾಂಕಿತ ಅಧಿಕಾರಿ ಗೌಸಿಯಾಬೇಗಂ, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಡಿಟಿ ಬಿ.ರವೀಂದ್ರಕುಮಾರ್, ಆರ್‌ಒ ಜಗದೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts