More

    ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಪ್ರಶಸ್ತಿ ಪ್ರಕಟ…

    ಬೆಂಗಳೂರು: ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿಯು 2022ನೇ ಸಾಲಿನ ಜೀವಮಾನ ಸಾಧನೆಯ ಗೌರವಪ್ರಶಸ್ತಿ ಹಾಗೂ ವಿವಿಧ ಕಲಾಪ್ರಕಾರಗಳ ಪ್ರಶಸ್ತಿಗಳನ್ನು ಪ್ರಕಟಿಸಿದೆ.

    ಈ ಬಾರಿ ಜೀವಮಾನ ಸಾಧನೆ ಪ್ರಶಸ್ತಿಗೆ 5 ಜನರು ಭಾಜನರಾಗಿದ್ದರೆ ವಿವಿಧ ಕಲಾಪ್ರಕಾರಗಳ ಪ್ರಶಸ್ತಿಗೆ 9 ಜನರು ಭಾಜನರಾಗಿದ್ದಾರೆ. ಪ್ರಶಸ್ತಿಗಳಿಗೆ ಭಾಜನರಾದವರ ಪಟ್ಟಿ ಹೀಗಿದೆ:

    ಜೀವಮಾನ ಸಾಧನೆ ಪ್ರಶಸ್ತಿ:
    1. ಪ್ರೊ. ಎಂ. ಶಕುಂತಲಾ ಹನುಮಂತಪ್ಪ (ಚಿಕ್ಕಮಗಳೂರು)
    2. ಡಾ. ಪಿ.ಕೆ. ಖಂಡೋಬಾ (ಬಾಗಲಕೋಟೆ)
    3. ಬಿ. ಹೀರಾನಾಯಕ (ದಾವಣಗೆರೆ)
    4. ಪ್ರೊ. ಡಿ.ಬಿ. ನಾಯಕ (ಕಲಬುರಗಿ)
    5. ಗಂಗಪ್ಪ ಖೇಮಪ್ಪ ಲಮಾಣಿ (ಬೆಳಗಾವಿ)
    ಈ ಐದು ಜನರು 2022ನೇ ಸಾಲಿನ ಜೀವಮಾನ ಸಾಧನೆ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ವಿವಿಧ ಕಲಾಪ್ರಕಾರಗಳ ಪ್ರಶಸ್ತಿ:
    1. ವಿಜಯಪುರದ ಗುಲಾಬ್ ಸಿಂಗ ಮೇಗು ಪತ್ತಾರ (ಆಭರಣ ಕಲೆ)
    2. ವಿಜಯನಗರದ ಕೋಟ್ರೇಶ ನಾಯ್ಕ (ಹಲಗೆ ವಾದನ)
    3. ದಾವಣಗೆರೆಯ ಉಮ್ಮಾನಾಯ್ಕ (ಸಾರಂಗಿ ಕಥನ ಗೀತೆ)
    3. ದಾವಣಗೆರೆಯ ಗುಂಡಾ ಚಂದ್ರಾ ನಾಯ್ಕ (ಕಥನ ಗೀತೆ)
    4. ಬಳ್ಳಾರಿಯ ಶಾಂತಬಾಯಿ ಕಾಶ್ಯಾನಾಯ್ಕ (ಕಸೂತಿಕಲೆ)
    5. ಗದಗದ ಸಾವಿತ್ರಿ ಮಾಂತೇಶ ಲಮಾಣಿ (ಜಾನಪದ ಹಾಡು)
    6. ಬೀದರ್‌ನ ಸೋಪನರಾವ ರೂಪ್ಲಾ (ಹೋಳಿ ಹಾಡು)
    7. ಚಿತ್ರದುರ್ಗದ ಪುಟ್ಟಿಬಾಯಿ ಮಿಟ್ಯಾನಾಯ್ಕ (ವಳಂಗ ಗೀತೆ)
    8. ಹಾವೇರಿಯ ದೇವಲಪ್ಪ ಟೀಕಪ್ಪ ಲಮಾಣಿ (ಡೋ ಡೋ ನಂಗಾರಾ ಗೀತೆ)
    9. ಕೊಪ್ಪಳದ ಮಂಜುನಾಥ ಚಂದ್ರಗಿರಿ (ಧಾರ್ಮಿಕ ವೃತ್ತಿಕಲೆ)
    ಈ ಒಭತ್ತು ಜನರು ವಿವಿಧ ಕಲಾಪ್ರಕಾರಗಳ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts