More

    ಜಾತಿಪಟ್ಟಿಗೆ ಸೇರಿಸಿದ್ದು ಸ್ವಾಗತಾರ್ಹ

    ಸಿರಗುಪ್ಪ: ಲಾಳಗೊಂಡ ಸಮಾಜವನ್ನು ಜಾತಿಪಟ್ಟಿಗೆ ಸೇರ್ಪಡೆ ಮಾಡುವಂತೆ ಸುಮಾರು 30 ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದಿದ್ದರೂ ಯಾವುದೇ ಸರ್ಕಾರ ಸಕರಾತ್ಮಕವಾಗಿ ಸ್ಪಂದನೆ ನೀಡಿರಲಿಲ್ಲ, ಆದರೆ ಕಳೆದ ಒಂದು ತಿಂಗಳಲ್ಲಿ ಸಿರಗುಪ್ಪ ತಾಲೂಕು ಹಾಗೂ ರಾಯಚೂರು ಜಿಲ್ಲೆಯ ಪದಾಧಿಕಾರಿಗಳ ನಿರಂತರ ಸಂಪರ್ಕದೊಂದಿಗೆ ಸರ್ಕಾರ ಸ್ಪಂದಿಸಿ ಲಾಳಗೊಂಡವನ್ನು ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದು ಸಂತಸ ತಂದಿದೆ ಎಂದು ಲಾಳಗೊಂಡ ಸಂಘದ ಮಾಜಿ ತಾಲೂಕು ಅಧ್ಯಕ್ಷ ಆರ್.ಸಿ.ಪಂಪನಗೌಡ ತಿಳಿಸಿದರು.

    ಲಾಳಗೊಂಡ ಸಮಾಜವನ್ನು 2ಡಿ ಜಾತಿಪಟ್ಟಿಗೆ ಸೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರಿಗೆ, ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಎಲ್ಲರ ಸಹಕಾರದಿಂದ ಸ್ವಾತಂತ್ರೃ ನಂತರ ಲಾಳಗೊಂಡ ಸಮಾಜವನ್ನು ಜಾತಿ ಪಟ್ಟಿಗೆ ಸೇರ್ಪಡೆ ಮಾಡಿರುವುದು ನಮ್ಮ ಹೋರಾಟಕ್ಕೆ ಸಂದ ಗೌರವ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಕೊಪ್ಪಳ ಸಂಸದ ಕರಡಿ ಸಂಗಣ್ಣ, ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್, ಶಾಸಕ ಎಂ.ಎಸ್.ಸೋಮಲಿಂಗಪ್ಪ, ಸಿಂಧನೂರು ಶಾಸಕ ವೆಂಕಟರಾವ್‌ನಾಡಗೌಡ, ಕನಕಗಿರಿ ಶಾಸಕ ದಢೇಸುಗೂರು ಬಸವರಾಜ ಅವರನ್ನೊಳಗೊಂಡ ನಿಯೋಗದೊಂದಿಗೆ ತೆರಳಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಡಾ.ಜಯಪ್ರಕಾಶ ಹೆಗಡೆ ಅವರಿಗೆ ಮಾಡಿದ ಮನವಿಗೆ ತಕ್ಷಣವೇ ಸ್ಪಂದನೆ ದೊರೆತಿದೆ. ಹಿಂದುಳಿದ ವರ್ಗ 2ಡಿಗೆ ಲಾಳಗೊಂಡ ಸಮುದಾಯ ಸೇರ್ಪಡೆ ಮಾಡಿರುವುದು ಸಂತಸ ತಂದಿದೆ ಎಂದರು.
    ಅಧ್ಯಕ್ಷ ಜೆ.ಬಸವನಗೌಡ, ಪ್ರಧಾನ ಕಾರ್ಯದರ್ಶಿ ಪಂಪಾಪತಿ ಓತೂರು. ಖಜಾಂಚಿ ರವಿಕುಮಾರ, ಮುಖಂಡರಾದ ದೊಡ್ಡವೀರನಗೌಡ, ಎಂ.ಆರ್.ಬಸವನಗೌಡ, ಎನ್.ಲಿಂಗನಗೌಡ, ಬಿ.ಸುರೇಶಗೌಡ, ಮರೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts