More

    ಗಣಿ ಅಗೆಯುತ್ತಿದ್ದ ಕಾರ್ಮಿಕ ರಾತ್ರೋರಾತ್ರಿ ಸಿರಿವಂತನಾದ: ಮೂರು ವಜ್ರದ ಕರಾಮತ್ತು !

    ಪನ್ನಾ: ಗಣಿ ಅಗೆಯುತ್ತಿದ್ದ ಕಾರ್ಮಿಕನೋರ್ವ ಒಂದು ಕ್ಷಣ ಶಾಕ್​ಗೆ ಒಳಗಾಗಿದ್ದಲ್ಲದೆ, ರಾತ್ರೋರಾತ್ರಿ ಶ್ರೀಮಂತನಾಗಿದ್ದಾನೆ.
    ಪನ್ನಾ ಜಿಲ್ಲೆಯಲ್ಲಿ ವಜ್ರದ ಗಣಿಯೊಂದರಲ್ಲಿ ಅಷ್ಟೇನೂ ಆಳವಿಲ್ಲದ ಕಡೆಯಲ್ಲಿ ಸುಬಾಲ್ ಎಂಬ ಕಾರ್ಮಿಕ ಅಗೆಯುತ್ತಿದ್ದರು. ಆಗ ಅವರಿಗೆ ಮೂರು ವಜ್ರದ ತುಂಡುಗಳು ಸಿಕ್ಕಿವೆ. ಅದನ್ನವರು ಸೀದಾ ಪನ್ನಾದ ವಜ್ರ ಮೌಲ್ಯಮಾಪನ ಅಧಿಕಾರಿ ಆರ್​.ಕೆ.ಪಾಂಡೆ ಅವರ ಬಳಿ ತೆಗೆದುಕೊಂಡು ಹೋಗಿ ಕೊಟ್ಟಿದ್ದಾರೆ. ಇದನ್ನೂ ಓದಿ: ‘ಆಗಸ್ಟ್​ 5’ ‘ಆಗಸ್ಟ್​ 15’- ಈ ಬಾರಿ ಪ್ರಧಾನಿ ನರೇಂದ್ರ ಮೋದಿಯನ್ನು ಪರೋಕ್ಷವಾಗಿ ವಿರೋಧಿಸಿದ ದೀದಿ

    ಪಾಂಡೆಯವರು ನೀಡಿರುವ ಮಾಹಿತಿಯ ಪ್ರಕಾರ ಇದು ಸುಮಾರು 30-35 ಲಕ್ಷ ರೂ.ಬೆಲೆಬಾಳುತ್ತವೆ. ಹಾಗೇ 7.5 ಕ್ಯಾರೆಟ್​ ತೂಕ ಹೊಂದಿವೆ.

    ಸರ್ಕಾರದ ನಿಯಮದಂತೆ ವಜ್ರದ ಹರಾಜು ಪ್ರಕ್ರಿಯೆ ನಡೆಯುತ್ತದೆ. ನಂತರ 12 ಪರ್ಸಂಟ್​ ತೆರಿಗೆ ಕಡಿತ ಮಾಡಿ, ಉಳಿದ 88 ಪರ್ಸಂಟ್​ ಸುಬಾಲ್​ ಅವರಿಗೆ ಸೇರುತ್ತದೆ ಎಂದು ಪಾಂಡೆ ಮಾಹಿತಿ ನೀಡಿದ್ದಾರೆ.  ಕಳೆದ ತಿಂಗಳು ಕಾರ್ಮಿಕನೋರ್ವನಿಗೆ 10.69 ಕ್ಯಾರೆಟ್​ ತೂಕದ ವಜ್ರ ಸಿಕ್ಕಿತ್ತು.(ಏಜೆನ್ಸೀಸ್​)

    ನದಿ ಪ್ರವಾಹದಲ್ಲಿ ಮುಳುಗುತ್ತಿದೆ ಪ್ರಸಿದ್ಧ ದೇವಾಲಯ; ಸ್ಥಳೀಯರೂ ಆತಂಕದಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts