More

    ಕಾರ್ವಿುಕ ಕಾಯ್ದೆ ತಿದ್ದುಪಡಿಗೆ ರಾಜ್ಯಪಾಲರ ಅಸ್ತು | ಕೈಗಾರಿಕೆಗಳಿಗೆ ಅನುಕೂಲ, ಹೂಡಿಕೆಗೆ ಉತ್ತೇಜನ

    ಬೆಂಗಳೂರು: ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ವಿುಕರ ಕೆಲಸಕ್ಕೆ ಅವಕಾಶ, ಯಾವುದೇ 3 ತಿಂಗಳ ಅಧಿಕಾರಾವಧಿ (ಒವರ್ ಟೈಮ್ ಕೆಲಸವನ್ನು 75 ರಿಂದ 125 ತಾಸುಗಳಿಗೆ ವಿಸ್ತರಣೆ ಒಳಗೊಂಡ ಕಾರ್ವಿುಕ ಕಾಯ್ದೆಗಳ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲ ವಜೂಭಾಯಿ ವಾಲಾ ಅಸ್ತು ಎಂದಿದ್ದಾರೆ.

    ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕೈಗಾರಿಕೆಗಳಿಗೆ ಅನುಕೂಲ, ಬಂಡವಾಳ ಹೂಡಿಕೆಗೆ ಉತ್ತೇಜನ ಹಾಗೂ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣ ಮಾಡುವುದು ತಿದ್ದುಪಡಿ ಉದ್ದೇಶ ಎಂದು ಸರ್ಕಾರ ವಿವರಿಸಿ, ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಸುಗ್ರೀವಾಜ್ಞೆ ಹೊರಡಿಸಿತ್ತು.
    ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿ ಕಾರ್ವಿುಕ ಕಾನೂನುಗಳಾದ ಕೈಗಾರಿಕಾ ವ್ಯಾಜ್ಯಗಳ ಅಧಿನಿಯಮ ಸೆಕ್ಷನ್ 25 (ಕೆ), ಕಾರ್ಖಾನೆಗಳ ಅಧಿನಿಯಮ 1948 ಸೆಕ್ಷನ್ 65(3) ಮತ್ತು ಗುತ್ತಿಗೆ ಕಾರ್ವಿುಕ ಹಾಗೂ ಕಾರ್ಖಾನೆಗಳ ಅಧಿನಿಯಮ 1970ಕ್ಕೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

    ಇದನ್ನೂ ಓದಿ: ಕರೊನಾ ಸೋಂಕಿಗೆ ಆಯುರ್ವೇದದಲ್ಲಿ ರಾಮಬಾಣ

    ತಿದ್ದುಪಡಿ ಪ್ರಯೋಜನ, ಪರಿಣಾಮ: ಕೈಗಾರಿಕಾ ವಿವಾದಗಳ ಕಾಯ್ದೆಗೆ ತಿದ್ದುಪಡಿಯಿಂದಾಗಿ ಕಾರ್ಖಾನೆ ಕಾರ್ವಿುಕರ ಮಿತಿಯನ್ನು 100ರಿಂದ 300ಕ್ಕೆ ಹೆಚ್ಚಿಸಲಾಗಿದೆ. ಇನ್ಮುಂದೆ ಕಾರ್ವಿುಕರ ಸಂಖ್ಯೆ 300 ಅಥವಾ ಅದಕ್ಕಿಂತ ಮೇಲ್ಪಟ್ಟಿರುವ ಕಾರ್ಖಾನೆಗಳ ವ್ಯಾಜ್ಯಗಳಲ್ಲಿ ಸರ್ಕಾರದ ಮಧ್ಯಪ್ರವೇಶವಾಗುತ್ತದೆ. ಈ ಹಿಂದೆ ಕಾರ್ವಿುಕರ ಸಂಖ್ಯೆ 100ಕ್ಕಿಂತ ಹೆಚ್ಚಿರುವ ಕಾರ್ಖಾನೆಗಳನ್ನು ಮುಚ್ಚಲು ಅಥವಾ ಕಾರ್ವಿುಕರನ್ನು ತೆಗೆದುಹಾಕಲು ಸರ್ಕಾರದ ಪರವಾನಗಿ ಪಡೆಯಬೇಕಾಗಿತ್ತು. ಕಾರ್ಖಾನೆಗಳ ಅಧಿನಿಯಮ 1948 ಸೆಕ್ಷನ್ 65 (3) ತಿದ್ದುಪಡಿಯಿಂದಾಗಿ ಯಾವುದೇ 3 ತಿಂಗಳ ಹೆಚ್ಚುವರಿ ಅವಧಿ (ಒಟಿ) ಕೆಲಸವನ್ನು 75ರಿಂದ 125 ಗಂಟೆಗಳಿಗೆ ಏರಿಸಲಾಗಿದೆ. ಜತೆಗೆ ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ವಿುಕರು ರಾತ್ರಿ 7 ರಿಂದ ಬೆಳಗ್ಗೆ 6ರವರೆಗೆ ಕೆಲಸ ಮಾಡಲು ಅವಕಾಶ ಲಭಿಸಿದೆ.

    ಇದನ್ನೂ ಓದಿ: ಶಿಶುಗಳಿಗೇಕೆ ಸ್ತನ್ಯಪಾನಮಾಡಿಸಬೇಕು- ಅದರ ಮಹತ್ವ ಏನು?

    ಗುತ್ತಿಗೆ ಕಾರ್ವಿುಕರ ಅಧಿನಿಯಮ 1970ರ ತಿದ್ದುಪಡಿಯಂತೆ ಹೊರಗುತ್ತಿಗೆ ಏಜೆನ್ಸಿಗಳು ಕಾರ್ಖಾನೆಗಳಿಗೆ ಒದಗಿಸುವ 30ಕ್ಕಿಂತ ಕಡಿಮೆ ಬಲದ ಕಾರ್ವಿುಕರಿಗೆ ಕಾನೂನುಬದ್ಧ ಸವಲತ್ತಿದ್ದಿಲ್ಲ. ಈ ಮಿತಿಯನ್ನೀಗ 50ಕ್ಕೆ ಹೆಚ್ಚಿಸಿದ್ದು, ಅಷ್ಟು ಸಂಖ್ಯೆಯ ಕಾರ್ವಿುಕರನ್ನು ಪೂರೈಸಿದರೆ ಕಾನೂನುರೀತ್ಯ ಸೌಲಭ್ಯ ಅನ್ವಯಿಸುವುದಿಲ್ಲ. ಹಾಗೇ ವಿದ್ಯುತ್ ಬಳಸುವ ಘಟಕಗಳ ಕಾರ್ವಿುಕರ ಮಿತಿಯನ್ನು 10ರಿಂದ 20 ಮತ್ತು ವಿದ್ಯುತ್ ಬಳಸದ ಕಾರ್ವಿುಕರ ಮಿತಿಯನ್ನು 20ರಿಂದ 40ಕ್ಕೆ ಏರಿಸಿದ್ದು, ನಿಗದಿತ ಮಿತಿಯೊಳಗೆ ಕಾರ್ವಿುಕರನ್ನು ನೇಮಿಸಿಕೊಂಡರೆ ಪಿಎಫ್, ಇಎಸ್​ಐ ಹಾಗೂ ಉದ್ಯೋಗ ಭದ್ರತೆ ಸವಲತ್ತು ಕೊಡಬೇಕಾಗಿಲ್ಲ.

    ಇದನ್ನೂ ಓದಿ: ತ್ರಿಪುರಾದಲ್ಲಿ ಮರುಸಂಘಟನೆಗೆ ಬಂಡುಕೋರರ ಪ್ರಯತ್ನ: ಮಾಣಿಕ್ ಸರ್ಕಾರ್ ಹೊಸ ರಾಜಕೀಯ ವರಸೆ

    ಸಂಘಟನೆಗಳು, ಪ್ರತಿಪಕ್ಷಗಳ ವಿರೋಧ: ಕೈಗಾರಿಕೋದ್ಯಮ ಬೆಳವಣಿಗೆ, ಬಂಡವಾಳ ಆಕರ್ಷಣೆ ಹೆಸರಿನಲ್ಲಿ ಕಾರ್ವಿುಕರ ಹಕ್ಕುಗಳನ್ನು ಸರ್ಕಾರ ಮೊಟುಕುಗೊಳಿಸಿದೆ. ನ್ಯಾಯಸಮ್ಮತ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಕಾರ್ವಿುಕ ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ಕಾರ್ಖಾನೆಗಳ ಮಾಲೀಕರಿಗೆ ಅನುಕೂಲ ಮಾಡಿಕೊಡುವುದಕ್ಕೆ ಸಾಕಷ್ಟು ದಾರಿಗಳಿವೆ. ಅದೇ ನೆಪವಿಟ್ಟುಕೊಂಡು ಸರ್ಕಾರ ಬಂಡವಾಳಶಾಹಿ ಪರ ಧೋರಣೆ ತಳಿದಿದ್ದು, ಈ ತಿದ್ದುಪಡಿಗಳ ವಿರುದ್ಧ ಚಳವಳಿಗೆ ಇಳಿಯುವುದಾಗಿ ಕಾರ್ವಿುಕ ಸಂಘಟನೆಗಳು ಎಚ್ಚರಿಸಿವೆ.

    ರಾಷ್ಟ್ರೀಯ ಶಿಕ್ಷಣ ನೀತಿಯ ತಿರಳು ಎಲ್​ಆರ್​ಐ : ಪ್ರಧಾನಿ ನರೇಂದ್ರ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts