More

    ಅಕ್ಷರ ರೂಪದಲ್ಲಿ ಬರಲಿದೆ ‘ಅಮ್ಮನ ನೆನಪು’: ಕುವೆಂಪು ಪುತ್ರಿ ತಾರಿಣಿ

    ಮೈಸೂರು: ತಂದೆ ಕುವೆಂಪು ಅವರಿಂದ ಪ್ರಭಾವಿತರಾಗಿ ಸಾಹಿತ್ಯದಲ್ಲಿ ಕೃಷಿ ಮಾಡಿದ್ದ ಪೂರ್ಣಚಂದ್ರ ತೇಜಸ್ವಿ ಮತ್ತು ತಾರಿಣಿ ಅವರು ಕುವೆಂಪು ಕುರಿತು ತಮ್ಮ ಅನುಭವವನ್ನು ಪುಸ್ತಕದಲ್ಲಿ ಹಿಡಿದಿಟ್ಟಿರುವುದು ಕನ್ನಡ ಸಾಹಿತ್ಯ ರಸಿಕರಿಗೆ ಗೊತ್ತಿರುವ ಸಂಗತಿ.

    ತೇಜಸ್ವಿ ಅವರು ‘ಅಣ್ಣನ ನೆನಪು’ ಮೂಲಕ, ತಾರಿಣಿ ಅವರು ‘ಮಗಳು ಕಂಡ ಕುವೆಂಪು’ ಪುಸ್ತಕದ ಮೂಲಕ ತಂದೆಯೊಂದಿಗಿನ ಒಡನಾಟ, ಬಾಲ್ಯ, ಅವರ ಗುಣ, ಸ್ವಭಾವದ ಜತೆಗೆ, ಹಲವು ಘಟನೆಗಳ ನೆನಪು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ ಸಚಿನ್ ಹೊಗಳಿಕೆಯಿಂದ ಪುಳಕಗೊಂಡ ನಟಿ

    ಇದೀಗ ಕುವೆಂಪು ಅವರಿಗೆ ಸರಿಸಮನಾಗಿ ಕುಟುಂಬ ನಿರ್ವಹಣೆ ಮಾಡಿ, ಮಕ್ಕಳ ಲಾಲನೆ-ಪಾಲನೆ, ಬಾಲ್ಯ, ಹಲವು ಘಟನೆಗಳಿಗೆ ಸಾಕ್ಷಿಯಾದ ತಾಯಿ ಹೇಮಾವತಿ ಅವರ ಬಗ್ಗೆ ತಾರಿಣಿ ಅವರು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ‘ತಂದೆಯ ಬಗ್ಗೆ ಎಲ್ಲ ಬರೆದಿದ್ದೇವೆ. ತಾಯಿಯ ಬಗ್ಗೆ ನೀನು ಬರೆಯಬೇಕು’ ಎಂದು ಪೂರ್ಣಚಂದ್ರ ತೇಜಸ್ವಿ ಅವರು ಸಹೋದರಿ ತಾರಿಣಿಗೆ ಸಲಹೆ ನೀಡಿದ್ದರಂತೆ. ಮತ್ತೊಬ್ಬ ಸಹೋದರ ಆಸ್ಟ್ರೇಲಿಯಾದಲ್ಲಿ ಇಂಜಿನಿಯರ್ ಆಗಿರುವ ಕೋಕಿಲೋದಯ ಚೈತ್ರ ಕೂಡ ತಾಯಿಯ ಕುರಿತು ಬರೆಯುವಂತೆ ಇತ್ತೀಚೆಗೆ ಹೇಳಿದ್ದರು. ಹೀಗಾಗಿ, ತಾರಿಣಿ ಅವರು ತಾಯಿಯ ಕುರಿತು ಪುಸ್ತಕ ಬರೆಯಲು ಆರಂಭಿಸಿದ್ದಾರೆ. ಶೀಘ್ರವೇ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಕುವೆಂಪು ಅವರ ಅಳಿಯ ಡಾ.ಚಿದಾನಂದಗೌಡ ಮಾಹಿತಿ ನೀಡಿದರು.

    ದೇಶವನ್ನು ಸರಿದಾರಿಯತ್ತ ಕೊಂಡೊಯ್ಯುತ್ತಿರುವ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts