More

    ಕುಷ್ಟಗಿ ತಾಲೂಕು ಕೇಸೂರು ಗ್ರಾಮದ ಯುವಕನಿಗೆ ಕರೊನಾ ಸೋಂಕು, ಗ್ರಾಮವನ್ನು ಸೀಲ್ ಡೌನ್ ಮಾಡಿದ ತಾಲೂಕು ಆಡಳಿತ

    ಕುಷ್ಟಗಿ: ಕೇಸೂರು ಗ್ರಾಮದ ಯುವಕನಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದ್ದು, ತಾಲೂಕಿನಲ್ಲಿ ಪ್ರಕರಣಗಳ ಸಂಖ್ಯೆ ಎರಡಕ್ಕೇರಿದೆ. ಯುವಕನಿಗೆ ಕೊಪ್ಪಳದ ಕೋವಿಡ್ 19ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಮಹಾರಾಷ್ಟ್ರದಿಂದ ಸೋಂಕು ಅಂಟಿಸಿಕೊಂಡು ಬಂದಿದ್ದ ಮಾಲಗಿತ್ತಿ ಗ್ರಾಮದ ವ್ಯಕ್ತಿ(ಪಿ1173) ಹನುಮಸಾಗರ ಹೋಬಳಿ ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಗೆ ಕಾರಣನಾಗಿದ್ದ. ಕೇಸೂರು ಗ್ರಾಮದ ಸೋಂಕಿತ(ಪಿ2254)ನೀಗ ಕುಷ್ಟಗಿ ಹೋಬಳಿ ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಗೆ ಕಾರಣನಾಗಿದ್ದಾನೆ. ಸದ್ಯ ಕೇಸೂರು ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ. ಮಸ್ಕಿಯಿಂದ ಭಾನುವಾರ ಸ್ವಗ್ರಾಮಕ್ಕೆ ಬಂದಿರುವ ಯುವಕ ಕುಷ್ಟಗಿಯ ತಾಲೂಕು ಆಸ್ಪತ್ರೆಯಲ್ಲಿ ಜ್ವರಕ್ಕಾಗಿ ಚಿಕಿತ್ಸೆ ಪಡೆದಿದ್ದಾನೆ. ಅದೇ ವೇಳೆ ಆತನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸೋಂಕಿತ ಯುವಕ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಚಿಕಿತ್ಸೆ ಪಡೆದಿದ್ದಾಗಿ ಹೇಳಲಾಗುತ್ತಿದ್ದು, ಅವಳಿ ಗ್ರಾಮಗಳಾದ ದೋಟಿಹಾಳ-ಕೇಸೂರು ಗ್ರಾಮವಲ್ಲದೆ ಕುಷ್ಟಗಿಯಲ್ಲೂ ಈತ ಓಡಾಡಿದ್ದಾಗಿ ಹೇಳಲಾಗುತ್ತಿದೆ.

    ಭೇಟಿ: ಯುವಕನಿಗೆ ಸೋಂಕು ಇರುವುದು ಗೊತ್ತಾಗುತ್ತಿದ್ದಂತೆ ತಹಸೀಲ್ದಾರ್ ಎಂ.ಸಿದ್ದೇಶ, ತಾಪಂ ಇಒ ಕೆ.ತಿಮ್ಮಪ್ಪ, ಜಿಲ್ಲಾ ವೈದ್ಯಾಧಿಕಾರಿ ಲಿಂಗರಾಜ್, ತಾಲೂಕು ವೈದ್ಯಾಧಿಕಾರಿ ಆನಂದ ಗೋಟೂರು ಇತರ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸೋಂಕಿತ ಯುವಕನ ಸಂಬಂಧಿಗಳಿಂದ ಮಾಹಿತಿ ಸಂಗ್ರಹಿಸಿದರು. ಸೋಂಕಿತ ಯುವಕ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಹಿನ್ನೆಲೆಯಲ್ಲಿ ಲ್ಯಾಬ್ ತಂತ್ರಜ್ಞ, ಸ್ಟಾಫ್ ನರ್ಸ್ ಸೇರಿ ಮೂವರನ್ನು ಹಾಗೂ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ಹಿನ್ನೆಲೆಯಲ್ಲಿ ಅಲ್ಲಿನ ಎಂಬಿಬಿಎಸ್ ವೈದ್ಯ, ಸ್ಟಾಫ್ ನರ್ಸ್ ಸೇರಿ ಐವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತನ ಕುಟುಂಬ ಸದಸ್ಯರು ಸೇರಿ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts