More

    ತೆಲಂಗಾಣ ಚುನಾವಣೆ; ಮೊಹಮ್ಮದ್​ ಅಜರುದ್ದೀನ್​ ಜತೆ ಕ್ರಿಕೆಟ್​ ಆಡಿ ಆದರೆ, ಬಿಆರ್​ಎಸ್​ಗೆ ಮತ ಹಾಕಿ: ಕೆಟಿಆರ್​

    ಹೈದರಾಬಾದ್​: ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಬಿಆರ್​ಎಸ್​, ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

    ಹೈದರಾಬಾದಿನ ಜುಬಿಲಿ ಹಿಲ್ಸ್​ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಅಜರುದ್ದೀನ್​, ಅವರೊಂದಿಗೆ ಆಟವಾಡಿ ಆದರೆ, ಬಿಆರ್​ಎಸ್​ಗೆ ಮತ ಹಾಕಿ ಎಂದು ಸಚಿವ ಕೆ.ಟಿ. ರಾಮರಾವ್​ ಹೇಳಿದ್ದಾರೆ.

    ಜುಬಿಲಿ ಹಿಲ್ಸ್ ಕ್ಷೇತ್ರದ ಬಿಆರ್​ಎಸ್​​ ಶಾಸಕ ಮಗಂತಿ ಗೋಪಿನಾಥ್​ ಅವರ ಪರ ಮತಯಾಚಿಸಿ ಮಾತನಾಡಿದ ಕೆಟಿಆರ್ ಚುನಾವಣೆಗೂ ಮುನ್ನ ಅವರು ಇಲ್ಲಿ ಎಲ್ಲಿಯಾದರೂ ಕಾಣಿಡಿಕೊಂಡಿದ್ದರ ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಒಳ್ಳೆಯ ಕೆಲಸಗಳಿಗಾಗಿ ಭಿಕ್ಷೆ ಬೇಡಲು ಎಂದಿಗೂ ಹಿಂಜರಿಯುವುದಿಲ್ಲ: ಮೋಹನ್ ಭಾಗವತ್

    ಅಜರುದ್ದೀನ್​ ಮತಯಾಚಿಸಿ ನಿಮ್ಮ ಮನೆ ಬಳಿ ಬಂದಾಗ ಅವರ ಜತೆ ನಿಮ್ಮ ಮಕ್ಕಳನ್ನು ಕ್ರಿಕೆಟ್​ ಆಡಲು ಬಿಡಿ. ಆದರೆ, ದಯವಿಟ್ಟು ನಿಮ್ಮ ಮತವನ್ನು ಗೋಪಿನಾಥ್​ಗೆ ಹಾಕಿ. ಚುನಾವಣೆ ಮುಗಿಯುತ್ತಿದ್ದಂತೆ ಅಜರುದ್ದೀನ್​ ಕ್ಷೇತ್ರದಿಂದ ಕಣ್ಮರೆಯಾಗುತ್ತಾರೆ. ಇಲ್ಲಿನ ಕಾಲೋನಿಗಳ ಹೆಸರು ಅಥವಾ ಕ್ಷೇತ್ರಗಳ ಸಮಸ್ಯೆ ಬಗ್ಗೆ ಅವರಿಗೆ ಕೊಂಚವಾದರೂ ಅರಿವಿದೆಯೇ ಎಂದು ಪ್ರಶ್ನಿಸಿದ್ದಾರೆ.

    ಅಲ್ಪಸಂಖ್ಯಾತರು ಬಡವರಾಗಿಯೇ ಉಳಿದಿರುವುದಕ್ಕೆ ಮುಖ್ಯ ಕಾರಣ ಎಂದರೆ ಕಾಂಗ್ರೆಸ್​ ಪಕ್ಷ. ಏಕೆಂದರೆ ಅವರಿಗೆ 11 ಅವಕಾಶಗಳನ್ನು ನೀಡಲಾಗಿತ್ತು. ಆದರೆ, ಕಾಂಗ್ರೆಸ್​ ಪಕ್ಷ ಕೆಲಸಗಳನ್ನು ಮಾಡುವ ಬದಲು ಜನರ ನಂಬಿಕೆಗಳಿಗೆ ದ್ರೋಹ ಎಸಗಿದೆ. ಕೆಸಿಆರ್ ನೇತೃತ್ವದಲ್ಲಿ ಬಿಆರ್​ಎಸ್​ ಪಕ್ಷ ತೆಲಂಗಾಣದಲ್ಲಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದ ಚಿತ್ರಣ ಬದಲಾಗಿದ್ದು, ಜನರು ಇದನ್ನು ನೋಡಿಯಾದರೂ ನಮಗೆ ಮತ ಹಾಕಿ ಎಂದು ಕೆಟಿಆರ್​ ವಿನಂತಿಸಿದ್ದಾರೆ.

    ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂದಬರು ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 119 ಸದಸ್ಯಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts