More

  ವಿಶ್ವಕಪ್​ ಫಿನಾಲೆಯಲ್ಲಿ ಈ ತಂಡ ಪ್ರಶಸ್ತಿ ಗೆಲ್ಲುವುದು ಪಕ್ಕಾ; ಸಂಚಲನ ಸೃಷ್ಟಿಸಿದ ರವಿಶಾಸ್ತ್ರಿ ಹೇಳಿಕೆ

  ಚೆನ್ನೈ: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡ ತನ್ನ ಅತ್ಯುತ್ತಮ ಪ್ರದರ್ಶನದಿಂದಾಗಿ ಅಜೇಯವಾಗಿ ಫಿನಾಲೆ ಪ್ರವೇಶಿಸಿದ್ದು, ಭಾನುವಾರ (ನವೆಂಬರ್ 19) ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಡಲಿದೆ. ಉತ್ತಮ ಫಾರ್ಮ್​ನಲ್ಲಿರುವ ರೋಹಿತ್​ ಶರ್ಮಾ ಪಡೆ ಎದುರಾಳಿ ತಂಡವನ್ನು ಬಗ್ಗು ಬಡಿಯುವುದು ಖಚಿತ ಎಂದು ಹೇಳಲಾಗಿದೆ.

  ಇನ್ನು ಈ ಕುರಿತು ಮಾತನಾಡಿರುವ ಭಾರತ ಕ್ರಿಕೆಟ್​ ತಂಡದ ಮಾಜಿ ಕೋಚ್, ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಭಾನುವಾರ ನಡೆಯಲಿರುವ ಫಿನಾಲೆಯಲ್ಲಿ ಪ್ರಶಸ್ತಿ ಗೆಲ್ಲುವ ತಂಡಗಳ ಪೈಕಿ ಭಾರತವೇ ಎಲ್ಲರ ಹಾಟ್​ ಫೇವರಿಟ್​​ ಎಂದು ಹೇಳಿದ್ದಾರೆ.

  ಚೆನ್ನೈನಲ್ಲಿ ಈ ಕುರಿತು ಮಾತನಾಡಿದ ರವಿಶಾಸ್ರ್ತಿ, ಹಾಲಿ ವಿಶ್ವಕಪ್​ ಆವೃತ್ತಿಯಲ್ಲಿ ಭಾರತ ತಂಡ ನೀಡಿರುವ ಸ್ಥಿರ ಪ್ರದರ್ಶನವನ್ನೂ ಫಿನಾಲೆಯಲ್ಲಿ ಮುಂದುವರೆಸಬೇಕು. ಯಾವುದೇ ಕ್ಷಣದಲ್ಲೂ ವಿಚಲಿತರಾಗದೇ ತಮ್ಮ ಆಟವನ್ನು ಪ್ರದರ್ಶಿಬೇಕು. ಈ ಬಾರಿ ತವರಿನಲ್ಲಿ ಭಾರತ ಆಡುತ್ತಿರುವುದರಿಂದ ಅದರ ಲಾಭವನ್ನು ಪಡೆದಿದೆ ಮತ್ತು ಈ ಬಾರಿ ತಂಡದಲ್ಲಿ ಇರುವ ಬಹುತೇಕ ಆಟಗಾರರು ಅನುಭವಿಗಳಾಗಿದ್ದಾರೆ.

  ಇದನ್ನೂ ಓದಿ: ಕಮರಿಗೆ ಉರುಳಿದ ಪಿಕಪ್​ ವಾಹನ; ಎಂಟು ಮಂದಿ ಸಾವು

  ಈ ಬಾರಿಯ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತ ಕೂಡ ಒಂದಾಗಿದ್ದು, ಅವರು ಸಮರ್ಥವಾಗಿ ಎದುರಾಳಿ ತಂಡವನ್ನು ಎದುರಿಸಿರುವ ರೀತಿ ನೋಡಿದರೆ ಪ್ರಶಸ್ತಿ ಗೆಲ್ಲುವುದು ಖಚಿತ ಎನ್ನಿಸಿದೆ. ಲೀಗ್​ ಹಂತದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನವನ್ನು ನೀಡಿದ್ದು, ಫಿನಾಲೆಯಲ್ಲಿ ಎಚ್ಚರಿಕೆಯಿಂದ ಆಡಬೇಕಿದೆ.

  ಹಾಲಿ ಆವೃತ್ತಿಯಲ್ಲಿ ಮೊಹಮ್ಮದ್​ ಶಮಿ ಪ್ರದರ್ಶನ ಎಲ್ಲರ ಹುಬ್ಬೇರುವಂತೆ ಮಾಡಿದ್ದು, ಶಮಿ ಪ್ರತಿ ಬಾರಿ ಬೌಲಿಂಗ್​ ಮಾಡಿದಾಗಲೂ ನಾನು ಎದುರಾಳಿ ತಂಡದ ಬ್ಯಾಟ್ಸ್​ಮನ್​ಗಳಿಗೆ ಆಲ್​ ದಿ ಬೆಸ್ಟ್​ ಎಂದು ಹೇಳಿದ್ದೇನೆ. ಸೆಮಿಫಿನಾಲೆಯಲ್ಲೂ ಶಮಿ ಎದುರಾಳಿ ತಂಡದ ಬ್ಯಾಟ್ಸ್​ಮನ್​ಗಳಿಗೆ ಇನ್ನಿಲ್ಲದಂತೆ ಕಾಡಿದರು. ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ ಅತ್ಯುತ್ತಮವಾಗಿ ಆಡಿದೆ ಎಂದು ಭಾರತ ಕ್ರಿಕೆಟ್​ ತಂಡದ ಮಾಜಿ ಕೋಚ್, ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಹೇಳಿದ್ದಾರೆ.

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts