More

    ಕಾಲೇಜ್ ಗ್ರೂಪ್‌ನಲ್ಲಿ ಸಿಕ್ಕ ಹುಡುಗಿಯರ ನಂಬರ್‌ಗೆ ವಿದ್ಯಾರ್ಥಿಗಳ ವೈಯಕ್ತಿಕ ಮೆಸೇಜ್!

    ಬೆಂಗಳೂರು: ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾಡಿದ ಗ್ರೂಪ್ ಇದೀಗ ವಿದ್ಯಾರ್ಥಿಗಳಿಗೆ ತೊಂದರೆ ತಂದೊಡ್ಡಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಕೆಎಸ್‌ಒಯು ಟೆಲಿಗ್ರಾಂನಲ್ಲಿ ಗ್ರೂಪ್ ಸೃಷ್ಟಿಸಿದೆ. ಅಧ್ಯಯನ ಸಂಬಂಧಿತ ನೋಟ್ಸ್ ಮತ್ತು ಹೊಸ ಸುತ್ತೋಲೆಗಳಿದ್ದಲ್ಲಿ ಅದರಲ್ಲಿ ಅಪ್‌ಲೋಡ್ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಬಹಳ ವೇಗವಾಗಿ ಸುದ್ದಿ ತಲುಪಿಸುವ ಉದ್ದೇಶದಿಂದ ಈ ಗ್ರೂಪ್ ಮಾಡಲಾಗಿದೆ.

    ಇದನ್ನೂ ಓದಿ: ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

    ಆದರೆ, ಇತ್ತೀಚಿನ ದಿನಗಳಲ್ಲಿ ಆ ಗ್ರೂಪ್‌ನಲ್ಲಿರುವ ವಿದ್ಯಾರ್ಥಿಗಳು ಅದೇ ಗ್ರೂಪ್‌ನಲ್ಲಿರುವ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಸಂದೇಶ ಕಳುಹಿಸಲು ಮುಂದಾಗಿದ್ದಾರೆ! ಗುಡ್ ಮಾರ್ನಿಂಗ್, ಗುಡ್ ನೈಟ್ ಮತ್ತು ಹಬ್ಬದ ಸಂದೇಶಗಳನ್ನು ಹಾಕಿ ನಾವಿಬ್ಬರೂ ಸ್ನೇಹಿತರಾಗೋಣವೇ..? ಎಂದೆಲ್ಲಾ ಸಂದೇಶಗಳನ್ನು ಕಳುಹಿಸಿತ್ತಿದ್ದಾರೆ. ಇದರಿಂದ ಸದುದ್ದೇಶಕ್ಕಾಗಿ ಸೃಷ್ಟಿಯಾದ ಗ್ರೂಪ್ ದುರುದ್ದೇಶಕ್ಕಾಗಿ ಬಳಕೆಯಾಗುತ್ತಿರುವುದು ಮೇಲುನೋಟಕ್ಕೆ ಕಂಡು ಬಂದಿದೆ. ಈ ರೀತಿಯ ಸಂದೇಶಗಳಿಂದ ಬೇಸತ್ತ ವಿದ್ಯಾರ್ಥಿನಿಯರು ಕೆಎಸ್‌ಒಯುಗೆ ದೂರು ನೀಡಿದ್ದಾರೆ.

    ಕೋರ್ಸ್ ವಿಚಾರಗಳು, ಪರೀಕ್ಷಾ ದಿನಾಂಕ, ಆಂತರಿಕ ಮೌಲ್ಯಾಂಕನ ಸಲ್ಲಿಸಲು ನಿಗದಿ ಪಡಿಸಿದ ವೇಳಾಪಟ್ಟಿ ಈ ಎಲ್ಲ ವಿಚಾರಗಳನ್ನು ತಿಳಿಸುವ ಉದ್ದೇಶದಿಂದ ನಾವು ಗ್ರೂಪ್ ಮಾಡಲಾಗಿದೆ. ಇದರಿಂದ ಸಾವಿರಾರೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಆದರೆ, ಯಾರೋ ಕೆಲವು ವಿದ್ಯಾರ್ಥಿಗಳು ಈ ರೀತಿ ವಿದ್ಯಾರ್ಥಿನಿಯರಿಗೆ ಸಂದೇಶ ರವಾನಿಸಲು ಮುಂದಾಗಿರುವುದು ಬೇಸರದ ಸಂಗತಿಯಾಗಿದೆ.

    ಇದನ್ನೂ ಓದಿ: ಹಂಪನಾ ಮೊದಲಿಗರಲ್ಲ; ಕುವೆಂಪುಗೆ ನೋಟಿಸ್ ನೀಡಿತ್ತು ಆಗಿನ ಕಾಂಗ್ರೆಸ್ ಸರ್ಕಾರ!

    ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಮೆಸೇಜ್‌ನಲ್ಲಿ ನೀಡಲಾಗಿರುವ ಸೆಕ್ಯೂರಿಟಿ ಸೆಟಿಂಗ್ಸ್ ಬದಲು ಮಾಡಿಕೊಳ್ಳಲು ಸೂಚಿಸಲಾಗಿದೆ. ಈ ರೀತಿ ಮಾಡುವುದರಿಂದ ಬೇರೊಬ್ಬರಿಗೆ ನಂಬರ್ ಕಾಣುವುದಿಲ್ಲ. ಅಲ್ಲದೆ, ಮೆಸೇಜ್ ಮಾಡುವುದಕ್ಕೂ ಆಗುವುದಿಲ್ಲ ಎನ್ನುತ್ತಾರೆ ವಿವಿಯ ಅಧಿಕಾರಿಗಳು. ವಿದ್ಯಾರ್ಥಿನಿಯರಿಗೆ ಕೇವಲ ಗ್ರೂಪ್‌ನಲ್ಲಿರುವ ವಿದ್ಯಾರ್ಥಿಗಳು ಮಾತ್ರವಲ್ಲದೇ, ಹೊರಗಿನ ವ್ಯಕ್ತಿಗಳು ಪದೇ ಪದೇ ಕೆಟ್ಟ ರೀತಿಯ ಸಂದೇಶಗಳನ್ನು ಕಳುಹಿಸುತ್ತಿರುವುದು ವಿದ್ಯಾರ್ಥಿನಿಯರ ನೆಮ್ಮದಿ ಹಾಳು ಮಾಡುತ್ತಿದೆ. ಇದರಿಂದ ವಿದ್ಯಾರ್ಥಿನಿಯರು ಬೇಸತ್ತಿದ್ದಾರೆ. ಕೆಲವು ನಂಬರ್‌ಗಳನ್ನು ಬ್ಲಾಕ್ ಸಹ ಮಾಡಿದ್ದೇವೆ ಎನ್ನುತ್ತಾರೆ ಬೇಸರಗೊಂಡ ವಿದ್ಯಾರ್ಥಿನಿಯರು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಎಸ್‌ಒಯು ಕುಲಪತಿ ಎಸ್.ವಿದ್ಯಾಶಂಕರ್, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಗ್ರೂಪ್ ಮಾಡಲಾಗಿದೆ. ಸಮಸ್ಯೆ ಇದ್ದರೆ, ಗ್ರೂಪ್ ಬಿಟ್ಟು ನಮ್ಮ ಮೊಬೈಲ್ ಆ್ಯಪ್ ಅಥವಾ ವೆಬ್‌ಸೈಟ್ ನೋಡುವುದು ಉತ್ತಮ. ಇದರಲ್ಲಿ ಎಲ್ಲ ಮಾಹಿತಿಯೂ ಲಭ್ಯವಾಗಲಿದೆ ಎಂದಿದ್ದಾರೆ.

    ಬಿಎಸ್ಸಿ ವಿದ್ಯಾರ್ಥಿನಿಗೆ ಮುಖ್ಯಮಂತ್ರಿ ಪಟ್ಟ! ಹಳ್ಳಿ ಹುಡುಗಿಯ ರಾಜಕೀಯ ದರ್ಬಾರ ನೋಡಲು ಸಜ್ಜಾದ ರಾಜ್ಯ

    ಕೇಂದ್ರ ಸರ್ಕಾರದಿಂದ ಕೃಷಿಕರಿಗೆ ಶೀಘ್ರವೇ ಗುಡ್‌ನ್ಯೂಸ್‌: ಸಿಗಲಿದೆ 10 ಸಾವಿರ ರೂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts