More

    ಚಾಟ್ ಜಿಪಿಟಿ ಬಳಸಿ ಕೆಸ್‌ಒಯು ಪರೀಕ್ಷೆಯಲ್ಲಿ ಸಾಮಾಹಿಕ ನಕಲು

    ಬೆಂಗಳೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಸ್ನಾತಕೋತ್ತರ ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅದರಲ್ಲಿ ವಿದ್ಯಾರ್ಥಿಯೊಬ್ಬ ಅತ್ಯಾಧುನಿಕ ತಂತ್ರಜ್ಞಾನವಾದ ಕೇತಕ ಬುದ್ಧಿಮತ್ತೆಯ ಚಾಟ್ ಜಿಪಿಟಿ ಬಳಸಿ ನಕಲು ಮಾಡಿರುವ ಕೃತ್ಯ ನಡೆದಿದೆ.

    ಏ.16ರಿಂದ 22ರವರೆಗೆ ಕಲಾ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯ ಮೊದಲ ದಿನದಿಂದ ಕೊನೆಯ ದಿನದವರೆಗೂ ಸಂಪೂರ್ಣವಾಗಿ ಪರೀಕ್ಷೆಯನ್ನು ಬೇಕಾಬಿಟ್ಟಿ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಾಮೂಹಿಕ ನಕಲು ನಡೆದಿದ್ದು ಹೇಗೆ?

    ಬೆಂಗಳೂರಿನ ಲಗ್ಗೆರೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಸಮೂಹ ಸಂವಹನ ಸೇರಿ ಇತರೆ ವಿಷಯಗಳಿಗೆ ಪರೀಕ್ಷೆ ಕೇಂದ್ರ ಮಾಡಲಾಗಿತ್ತು. ಪರೀಕ್ಷೆಯಲ್ಲಿ ಕೊಠಡಿ ಮೇಲ್ವಿಚಾರಕರು ಪ್ರಶ್ನೆಪತ್ರಿಕೆ ನೀಡಿ ಹೊರಗೆ ಹೋದರೆ, ಕೊನೆಯ 10 ನಿಮಿಷ ಇರುವ ವೇಲೆ ಬಂದು ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ.
    ಪರೀಕ್ಷಾ ಕೊಠಡಿಯಲ್ಲಿ ಅಭ್ಯರ್ಥಿಗಳು ಇತರೆ ಪರೀಕ್ಷಾರ್ಥಿ ಜತೆಗೆ ಪರಸ್ಪರ ಮಾತನಾಡಿಕೊಂಡು ಉತ್ತರಗಳನ್ನು ಮಾಡಿದ್ದಾರೆ. ಗುಂಪು ಗುಂಪಾಗಿ ಸಾಮೂಹಿಕವಾಗಿ ನಕಲು ಮಾಡಲಾಗಿದೆ. ಆದರೂ ಯಾವೊಬ್ಬ ಕೊಠಡಿ ಮೇಲ್ವಿಚಾರಕರು ಕೂಡ ಇದನ್ನು ಪ್ರಶ್ನಿಸುವ ಗೋಜಿಗೆ ಹೋಗಿಲ್ಲ ಎಂದು ಅಲ್ಲಿನ ವಿದ್ಯಾರ್ಥಿಗಳು ತಿಳಿಸಿದ್ದಾರೆ.

    ಚಾಟ್ ಜಿಪಿಟಿ ಬಳಸಿ ನಕಲು:

    ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಅವರ ಮೊಬೈಲ್ ೆನ್ ಬಳಕೆಗೆ ಅವಕಾಶ ಮಾಡಿಕೊಡುವ ಜತೆಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ಬರೆಯಲು ಅನುಮತಿ ನೀಡಲಾಗಿತ್ತು. ಈ ವಿದ್ಯಾರ್ಥಿಗೆ ಯಾವುದೇ ಮೇಲ್ವಿಚಾರಣೆ ಮಾಡುತ್ತಿರಲಿಲ್ಲ. ಆ ವಿದ್ಯಾರ್ಥಿಯು ಮೊಬೈಲ್‌ನಿಂದ ಕೃತಕ ಬುದ್ಧಿಮತ್ತೆಯ ಚಾಟ್ ಜಿಪಿಟಿ ಮೂಲಕ ಉತ್ತರಗಳನ್ನು ಬರೆಯುತ್ತಿದ್ದರು. ಇದನ್ನು ಇತರೆ ವಿದ್ಯಾರ್ಥಿಗಳು ಪ್ರಶ್ನಿಸಿದ ಸಂದರ್ಭದಲ್ಲಿ ಸಂಬಂಧಪಟ್ಟ ವಿದ್ಯಾರ್ಥಿಯು ಚುನಾವಣೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಫ್ಲೈಯಿಂಗ್ ಸ್ಕ್ವಾಡ್ ಆಗಿರುವುದರಿಂದ ಮೊಬೈಲ್ ಬಳಕೆಗೆ ಅನುಮತಿ ನೀಡಲಾಗಿದೆ ಎಂಬ ಹಾರಿಕೆ ಉತ್ತರಗಳನ್ನು ಅಲ್ಲಿನ ಸಿಬ್ಬಂದಿ ನೀಡಿ ವಿದ್ಯಾರ್ಥಿಗಳ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts