More

    ಮುಕ್ತ ವಿವಿ ಮಾನ್ಯತೆ ಪ್ರಶ್ನಿಸಿ ಉದ್ಯೋಗ ನಿರಾಕರಿಸಿದರೆ ಪ್ರಕರಣ ದಾಖಲಿಸುವ ಎಚ್ಚರಿಕೆ..!

    ಮೈಸೂರು: ಮುಕ್ತ ವಿವಿ ನೀಡುವ ಪದವಿಗೆ ಮಾನ್ಯತೆ ಇದ್ದು, ಯಾವುದೇ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ‘ಮುಕ್ತ ವಿವಿ ಪದವಿಗೆ ಮಾನ್ಯತೆ ಇಲ್ಲ’ ಎಂದು ಉದ್ಯೋಗ ನಿರಾಕರಿಸಲು ಅವಕಾಶ ಇಲ್ಲ. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಹೇಳಿದರು.

    ನಮ್ಮಲ್ಲಿ ಶೇ.90 ರಷ್ಟು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವ ಉದ್ದೇಶದಿಂದಲೇ ದಾಖಲಾಗುತ್ತಾರೆ. ನಾವು ಸಹ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ. ನಮಲ್ಲಿ ವಿದ್ಯಾಭ್ಯಾಸ ಪಡೆದ ಹಲವಾರು ಮಂದಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    2013 ರಿಂದ 2015ರ ಅವಧಿಯಲ್ಲಿ ಮುಕ್ತ ವಿವಿ ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ನೀಡಿದ ಪದವಿಯನ್ನು ಅಮಾನ್ಯಗೊಳಿಸಲಾಗಿದೆ. ಇದರಿಂದ ಒಟ್ಟು 3.85 ಲಕ್ಷ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಪದವಿ ಪ್ರಮಾಣ ಪತ್ರ ನೀಡಲು ಯುಜಿಸಿಯ ಮಾನದಂಡಗಳನ್ನು ಪೂರೈಸಬೇಕಾಗಿದೆ. ಆದರೆ, ಯುಜಿಸಿ ವಿಧಿಸಿರುವ ಮಾನದಂಡಗಳನ್ನು ಪೂರೈಸುವುದು ಕಷ್ಟಕರವಾಗಿದೆ. ಆದರೂ ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಲಾಗಿದೆ ಎಂದರು.

    ಮುಕ್ತ ವಿವಿಯು ಪ್ರಸ್ತುತ ಒಟ್ಟು 64 ಕೋರ್ಸ್‌ಗಳನ್ನು ನಡೆಸುತ್ತಿದ್ದು, ಮತ್ತೆ ಹೊಸದಾಗಿ 51 ಕೋರ್ಸ್‌ಗಳ ಪ್ರಾರಂಭಕ್ಕೆ ಅನುಮತಿ ಕೋರಿ ಯುಜಿಸಿಗೆ ಅರ್ಜಿ ಸಲ್ಲಿಸಲಾಗಿದೆ. ಮುಕ್ತ ವಿವಿಯಲ್ಲಿ ಎನ್‌ಇಪಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಭೋಪಾಲ್‌ನಲ್ಲಿ ದೇಶದ 16 ಮುಕ್ತ ವಿವಿಗಳ ಕುಲಪತಿಗಳ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts