More

    ಕೋಚಿಂಗ್​ಗೆ ಹೊರಟಿದ್ದ ವಿದ್ಯಾರ್ಥಿನಿಗೆ ಕಾದಿತ್ತು ಶಾಕ್​: ಮಗಳ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ತಂದೆ!

    ಜೈಪುರ: ರಾಜಸ್ಥಾನದ ಕೋಟಾದಿಂದ ಮತ್ತೊಂದು ಆಘಾತಕಾರಿ ಸುದ್ದಿ ಹೊರ ಬಿದ್ದಿದೆ. ‘ಕೋಟಾ ಫ್ಯಾಕ್ಟರಿ’ ಎಂದೇ ವೆಬ್ ಸಿರೀಸ್‌ಗಳಲ್ಲಿ ಕುಖ್ಯಾತವಾದ ನಗರ, ರಾಜಸ್ಥಾನದ ಕೋಟಾ.. ಸ್ಪರ್ಧಾತ್ಮಕ ಪರೀಕ್ಷೆಗೆ ತಾಲೀಮು ಕೊಡುವ ನೂರೆಂಟು ಕೋಚಿಂಗ್ ಸೆಂಟರ್‌ಗಳು ಇರುವ ಈ ನಗರದಲ್ಲಿ ಇದೀಗ ಮತ್ತೊಬ್ಬ ವಿದ್ಯಾರ್ಥಿನಿಯ ಕಿಡ್ನ್ಯಾಪ್ ಸಂಚಲನ ಮೂಡಿಸಿದೆ.

    ಇದನ್ನೂ ಓದಿ:  ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಶಾರುಖ್-ಸಲ್ಮಾನ್ ಕಿತ್ತಾಟ: ಅಮೀರ್ ಖಾನ್ ಬಿಚ್ಚಿಟ್ಟ ರಹಸ್ಯ

    ಮಧ್ಯಪ್ರದೇಶದ ಶಿವಪುರಿ ಮೂಲದ ವಿದ್ಯಾರ್ಥಿನಿ ರಾಜಸ್ಥಾನದ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾಳೆ. ಭಾನುವಾರ ಕೋಚಿಂಗ್ ಸೆಂಟರ್‌ಗೆ ತೆರಳಿದ ಬಳಿಕ ಕೊನೆ ಬಾರಿ ವಿದ್ಯಾರ್ಥಿನಿ ತನ್ನ ತಂದೆಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾಳೆ. ಆದರೆ ಸೋಮವಾರ ಅಪಹರಣಕಾರರು ಮಗಳ ಫೋಟೋಗಳನ್ನು ತಂದೆಯ ಫೋನ್‌ಗೆ ಕಳುಹಿಸಿದ್ದಾರೆ. ಆಕೆಯನ್ನು ಬಿಡುಗಡೆ ಮಾಡಲು 30 ಲಕ್ಷ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

    ಭಯಭೀತಿಗೊಂಡ ವಿದ್ಯಾರ್ಥಿನಿ ಪೋಷಕರು ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಈ ವಿಷಯವನ್ನು ವಿದ್ಯಾರ್ಥಿಯ ತಂದೆ ಬಹಿರಂಗಪಡಿಸಿದ್ದಾರೆ. ಕೋಟಾದ ವಿಜ್ಞಾನನಗರದಲ್ಲಿರುವ ಕೋಚಿಂಗ್ ಸೆಂಟರ್‌ನಲ್ಲಿ ತನ್ನ ಮಗಳು ತರಬೇತಿ ಪಡೆಯುತ್ತಿದ್ದು, ಕೋಚಿಂಗ್ ಇನ್ಸ್‌ಟಿಟ್ಯೂಟ್‌ ಬಳಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದಾಳೆ. ಕೊನೆ ಬಾರಿ ಭಾನುವಾರ ರಾತ್ರಿ ಕೋಚಿಂಗ್ ಸೆಂಟರ್‌ಗೆ ತೆರಳಿದ ಬಳಿಕ ಫೋನ್‌ನಲ್ಲಿ ಮಾತನಾಡಿದ್ದೇನೆ ಎಂದು ವಿದ್ಯಾರ್ಥಿನಿಯ ತಂದೆ ಆತಂಕ ವ್ಯಕ್ತಪಡಿಸಿದ್ದಾರೆ.

    ಸೋಮವಾರ ಬೆಳಗ್ಗೆ ನನ್ನ ಮೊಬೈಲ್​​ಗೆ ಕೆಲವು ಫೋಟೋಗಳು ಬಂದಿದ್ದು, ಅದರಲ್ಲಿ ತಮ್ಮ ಮಗಳನ್ನು ಹಗ್ಗದಿಂದ ಕಟ್ಟಲಾಗಿರುವ ಚಿತ್ರಗಳು ಬಂದಿವೆ. ಬ್ಯಾಂಕ್ ಖಾತೆ ನಂಬರ್ ಕಳುಹಿಸಿ 30 ಲಕ್ಷ ರೂ.ಗಳನ್ನು ಖಾತೆಗೆ ಜಮಾ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಈ ಕುರಿತು ರಾಜಸ್ಥಾನ ಕೋಟಾದ ಪೊಲೀಸ್​ ವರಿಷ್ಠಾಧಿಕಾರಿ ಅಮೃತಾ ದುಹಾನ್ ಕೋಚಿಂಗ್​ ವಿದ್ಯಾರ್ಥಿಯ ಅಪಹರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
    ಈ ಪ್ರಕರಣವನ್ನು ಭೇದಿಸಲು ಎಸ್ಪಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಅಪಹರಣ ನಡೆದಿರುವುದನ್ನು ಪೊಲೀಸರು ದೃಢಪಡಿಸಿದ್ದರೂ, ವಿದ್ಯಾರ್ಥಿನಿ ಎಲ್ಲಿದ್ದಾಳೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಕೋಟಾದ ಪೊಲೀಸ್​ ವರಿಷ್ಠಾಧಿಕಾರಿ ಅಮೃತಾ ದುಹಾನ್ ತಿಳಿಸಿದ್ದಾರೆ.

    ಕಳೆದ ತಿಂಗಳು 16 ವರ್ಷದ ವಿದ್ಯಾರ್ಥಿ ನಾಪತ್ತೆ: ರಾಜಸ್ಥಾನದಲ್ಲಿ ಕೋಟಾದಲ್ಲಿ ಕಳೆದ ಫೆಬ್ರವರಿಯಲ್ಲಿ 16 ವರ್ಷದ ಕೋಚಿಂಗ್​ ವಿದ್ಯಾರ್ಥಿ ಓರ್ವ ಹಾಸ್ಟೆಲ್​ನಿಂದ ನಾಪತ್ತೆಯಾಗಿದ್ದ. ಮಧ್ಯಪ್ರದೇಶದ ಬೈವ್ರಾ ಮೂಲದ ವಿದ್ಯಾರ್ಥಿ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಕೋಚಿಂಗ್​ಗಾಗಿ ಹಾಸ್ಟೆಲ್​ನಿಂದ ತೆರಳಿದ್ದ ವಿದ್ಯಾರ್ಥಿ ವಾಪಸ್​ ಬಾರದ ಕಾರಣ ಆತನ ಪೋಷಕರು ಜವಾಹರ್​ನಗರ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲು ಮಾಡಿದ್ದರು. ನಂತರ ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳೊಂದಿಗೆ ಪೊಲೀಸರು ವಿದ್ಯಾರ್ಥಿಯ ಪತ್ತೆಗ ಹುಡುಕಾಟ ಆರಂಭಿಸಿದ್ದರು.

    ಕೋಟಾದಲ್ಲಿ ಕಳೆದ ವರ್ಷದಲ್ಲಿ ವಿವಿಧ ಕಾರಣಗಳಿಂದ ಸುಮಾರು 30ಕ್ಕೂ ಹೆಚ್ಚೂ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

    ಮುಕೇಶ್ ಅಂಬಾನಿ ಮಗನ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಶಾರುಖ್-ಸಲ್ಮಾನ್ ಕಿತ್ತಾಟ: ಅಮೀರ್ ಖಾನ್ ಬಿಚ್ಚಿಟ್ಟ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts