More

    ಮುಕ್ತ ವಿವಿಗೆ ನ್ಯಾಕ್ ‘ಎ ಪ್ಲಸ್’ ಗ್ರೇಡ್

    ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯಿಂದ (ನ್ಯಾಕ್) ‘ಎ ಪ್ಲಸ್ ಗ್ರೇಡ್’ ಪಡೆದುಕೊಂಡಿದ್ದು, ಈ ಗ್ರೇಡ್‌ನೊಂದಿಗೆ ವಿಶ್ವ ವಿದ್ಯಾಲಯಕ್ಕೆ ದೂರ ಶಿಕ್ಷಣದ ಜತೆಗೆ ಆನ್‌ಲೈನ್ ಶಿಕ್ಷಣವನ್ನೂ ಪ್ರಾರಂಭಿಸಲು ಅವಕಾಶ ದೊರೆತಂತಾಗಿದೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಹೇಳಿದರು.

    ಮುಕ್ತ ವಿವಿಗೆ ಈ ಹಿಂದೆ ನ್ಯಾಕ್ ಮಾನ್ಯತೆ ಕಡ್ಡಾಯಗೊಳಿಸಿರಲಿಲ್ಲ. ಯುಜಿಸಿ ನಿರ್ದೇಶನದ ನಂತರ ಇದೀಗ ಮೊದಲ ಪ್ರಯತ್ನದಲ್ಲಿಯೇ ವಿವಿ ‘ಎ ಪ್ಲಸ್’ ಗ್ರೇಡ್ ಪಡೆದುಕೊಂಡಿದೆ. ರಾಜ್ಯದ ಯಾವುದೇ ವಿಶ್ವ ವಿದ್ಯಾಲಯ ಪ್ರಸಕ್ತ ಸಾಲಿನಲ್ಲಿ ಇಷ್ಟೊಂದು ಗ್ರೇಡ್ ಪಡೆದುಕೊಂಡಿಲ್ಲ. ದೇಶದಲ್ಲಿ 16 ಮುಕ್ತ ವಿಶ್ವ ವಿದ್ಯಾಲಯಗಳು ಇದ್ದು, ಗುಜರಾತ್‌ನ ಅಂಬೇಡ್ಕರ್ ಮುಕ್ತ ವಿಶ್ವ ವಿದ್ಯಾಲಯ ‘ಎ ಪ್ಲಸ್ ಪ್ಲಸ್ ಗ್ರೇಡ್’ ಪಡೆದುಕೊಂಡಿದ್ದು, ನಂತರದ ಸ್ಥಾನವನ್ನು ಕೆಎಸ್‌ಒಯು ಪಡೆದುಕೊಂಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ನಾವು ‘ಎ ಪ್ಲಸ್ ಪ್ಲಸ್ ಗ್ರೇಡ್’ ಪಡೆಯಲು ಪ್ರಯತ್ನ ನಡೆಸಿದೆವು. ಆದರೆ, ‘ಎ ಪ್ಲಸ್ ಗ್ರೇಡ್’ ದೊರೆತ್ತಿದೆ. ಹೀಗಾಗಿ ಯುಜಿಸಿಯಿ ಂದ ಅನುಮತಿ ಪಡೆದು ಆನ್‌ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು. ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಪಡೆಯಲು ಇದರಿಂದ ಸಹಕಾರಿಯಾಗಿದೆ. ಒಟ್ಟು 100 ಕೋಟಿ ರೂ. ಅನುದಾನ ಪಡೆದು ವಿದ್ಯಾರ್ಥಿಗಳಿಗೆ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲು ಉದ್ದೇಶಿಸಲಾಗಿದೆ. ಇದರಿಂದ ಮುಕ್ತ ವಿವಿಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಏರಿಕೆಯಾಗುವ ನಿರೀಕ್ಷೆ ಇದೆ. ಪ್ರಸ್ತುತ 61 ಸಾವಿರ ವಿದ್ಯಾರ್ಥಿಗಳು ಇದ್ದು, ಈ ಸಂಖ್ಯೆಯನ್ನು 2 ಲಕ್ಷಕ್ಕೆ ಏರಿಕೆ ಮಾಡಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಅಧ್ಯಯನ ಕೇಂದ್ರಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ಪ್ರಸ್ತುತ 21 ಜಿಲ್ಲೆಗಳಲ್ಲಿ ಕೇಂದ್ರಗಳು ಇವೆ. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುವ ವಿಶ್ವಾಸ ಹೊಂದಿದ್ದೇವೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಡಾ.ಕೆ.ಎಲ್.ಎನ್. ಮೂರ್ತಿ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಹಣಕಾಸು ಅಧಿಕಾರಿ ಡಾ. ಎ. ಖಾದರ್ ಪಾಷ, ಅಕಾಡೆಮಿಕ್ ಡೀನ್ ಪ್ರೊ. ಎನ್. ಲಕ್ಷ್ಮೀ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts