More

    ನ್ಯಾಕ್ ಮೌಲ್ಯಮಾಪನಕ್ಕೆ ಕೈ ಜೋಡಿಸಿ

    ಗೊಳಸಂಗಿ: ನ್ಯಾಕ್ ತಂಡದವರು ಜ. 19 ಮತ್ತು 20 ರಂದು ಕಾಲೇಜಿನ ಮೌಲ್ಯಮಾಪನಕ್ಕೆ ಆಗಮಿಸಲಿದ್ದು, ಗ್ರಾಮದ ಪ್ರಮುಖರು, ಪಾಲಕರು, ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಪ್ರಾಚಾರ್ಯ ಎಸ್.ಎಸ್. ರಾಜಮಾನ್ಯ ಹೇಳಿದರು.

    ಸ್ಥಳೀಯ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಹಳೆಯ ವಿದ್ಯಾರ್ಥಿಗಳ ಮತ್ತು ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕಾಲೇಜಿನ ಅಭಿವೃದ್ಧಿ ಮತ್ತು ನ್ಯಾಕ್ ಪ್ರಗತಿಯ ಕುರಿತು ಪ್ರೊ. ರುದ್ರೇಶ ಅಳ್ಳೊಳ್ಳಿ, ಪ್ರೊ. ಸಿ.ಎಂ. ನಾಯಕ ಮಾತನಾಡಿ, ಮೌಲ್ಯಮಾಪನದ ಬಗ್ಗೆ ಮಾಹಿತಿ ನೀಡಿದರು.

    ಹಳೆಯ ವಿದ್ಯಾರ್ಥಿ ಬಳಗದ ಅಧ್ಯಕ್ಷ ಅಮೃತ ಯಾದವ, ಪಾಲಕ ಪ್ರತಿನಿಧಿ ಡಿ.ಬಿ. ಕುಪ್ಪಸ್ತ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯಪುರ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿ ಗೊಳಸಂಗಿಯಲ್ಲಿ ಸ್ಥಾಪಿತಗೊಂಡಿರುವುದು ನಮ್ಮ ಹೆಮ್ಮೆ.

    ಅದಕ್ಕೋಸ್ಕರ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

    ಶಿಕ್ಷಕ ಬಿ.ಐ. ಚಲ್ಮಿ, ಪಾಲಕರಾದ ಸಂಗಪ್ಪ ಕೋಲಾರ, ಹಳೆಯ ವಿದ್ಯಾರ್ಥಿಗಳಾದ ಜಗದೀಶ ಕಮತಗಿ, ಶಿವು ಚವ್ಹಾಣ, ಷಣ್ಮುಖ ಹಡಪದ, ಶಿವು ಉಪ್ಪಲದಿನ್ನಿ, ರಸೂಲ ಡೋಲಚಿ, ತ್ರಿವೇಣಿ ಬಳಬಟ್ಟಿ, ಶ್ರೀದೇವಿ ಕುಪ್ಪಸ್ತ, ಯಾಸ್ಮಿನ್ ಸುತಾರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts