More

    ಕರಣ್​ ಜೋಹರ್​ ಹೆಸರು ಹೇಳಿದರೆ ಬಿಟ್ಟುಬಿಡ್ತೀವಿ ಎಂದರಂತೆ ಎನ್​ಸಿಬಿ ಅಧಿಕಾರಿಗಳು …

    ಮುಂಬೈ: ಡ್ರಗ್ಸ್​ ಜಾಲದಲ್ಲಿ ಸಿಕ್ಕಿಬಿದ್ದಿರುವ ಧರ್ಮ ಎಂಟರ್​ಟೈನ್​ಮೆಂಟ್​ ಸಂಸ್ಥೆಯ ಮಾಜಿ ಉದ್ಯೋಗಿ ಕ್ಷಿತಿಜ್​ ಪ್ರಸಾದ್​ ಹೊಸ ಬಾಂಬ್​ ಸಿಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಡ್ರಗ್ಸ್​ ಜಾಲದಲ್ಲಿ ಕರಣ್​ ಜೋಹರ್​ ಅವರ ಹೆಸರನ್ನು ಹೇಳಿದರೆ, ಬಿಟ್ಟುಬಿಡ್ತೀವಿ ಎಂದು ಎನ್​ಸಿಬಿ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ನ್ಯಾಯ​ ಸಿಕ್ಕಿಲ್ಲ ಅಂತ ನಟ ಸುಶಾಂತ್​ ಗೆಳೆಯರ ಗಾಂಧಿಗಿರಿ, ಅ. 2ರಂದೇ ಹಿಡಿಯಲಿದ್ದಾರೆ ಆ ದಾರಿ…

    ಡ್ರಗ್ಸ್​ ಜಾಲದ ಸಂಬಂಧ ಎನ್​ಸಿಬಿ ಅಧಿಕಾರಿಗಳು, ಕರಣ್​ ಜೋಹರ್​ ಒಡೆತನದ ಧರ್ಮ ಎಂಟರ್​ಟೈನ್​ಮೆಂಟ್​ ಸಂಸ್ಥೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಕ್ಷಿತಿಜ್​ ಪ್ರಸಾದ್​ ಮತ್ತು ಅನುಭವ್​ ಚೋಪ್ರಾ ಎಂಬುವವರನ್ನು ಅರೆಸ್ಟ್​ ಮಾಡಿದ್ದರು. ಅವರಿಬ್ಬರನ್ನು ಒಮ್ಮೆ ವಿಚಾರಣೆಗೂ ಒಳಪಡಿಸಿದ್ದರು.

    ಈ ವಿಷಯವಾಗಿ ಮಾತನಾಡಿದ್ದ ಕರಣ್​ ಜೋಹರ್​, ತಮ್ಮ ಸಂಸ್ಥೆಗೂ ಮತ್ತು ಬಂಧಿತರಾಗಿರುವ ಕ್ಷಿತಿಜ್​ ಮತ್ತು ಅನುಭವ್​ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು. ಬಹಳ ವರ್ಷಗಳ ಹಿಂದೆಯೇ ಅವರಿಬ್ಬರೂ ತಮ್ಮ ಸಂಸ್ಥೆಯನ್ನು ಬಿಟ್ಟು ಹೋಗಿದ್ದು, ಆ ನಂತರ ಅವರೇನೇ ಮಾಡಿದರೂ ಸಂಸ್ಥೆ ಅದಕ್ಕೆ ಜವಾಬ್ದಾರಿಯಲ್ಲ ಎಂದು ಹೇಳಿದ್ದರು.

    ಈ ಕುರಿತು ಮುಂಬೈ ಕೋರ್ಟ್​ಗೆ ವರದಿ ಸಲ್ಲಿಸಿರುವ ಕ್ಷಿತಿಜ್​ ಪ್ರಸಾದ್​ ಅವರ ವಕೀಲರಾದ ಸತೀಶ್​ ಮಾನೆಶಿಂಧೆ, ಎನ್​ಸಿಬಿ ಅಧಿಕಾರಿಗಳು ತಮ್ಮ ಕಕ್ಷಿದಾರನ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಕೇಸ್​ನಲ್ಲಿ ಕರಣ್​ ಜೋಹರ್​, ಸೋಮೆಲ್​ ಮಿಶ್ರ, ರಾಖಿ, ಅಪೂರ್ವ ಮೆಹ್ತಾ, ನೀರಜ್​ ಮುಂತಾದವರ ಹೆಸರನ್ನು ಹೇಳಿದರೆ, ನನ್ನ ಕಕ್ಷಿದಾರರನ್ನು ಬಿಟ್ಟುಬಿಡುವುದಾಗಿ ಒತ್ತಡ ತಂದಿದ್ದು, ಕ್ಷಿತಿಜ್​ ಈ ಒತ್ತಡಕ್ಕೆ ಮಣಿಯಲಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ‘ಡ್ರಗ್ಸ್​’ ನಟಿಯರ ನಿರೀಕ್ಷೆ ಹುಸಿ; ಅಳುತ್ತ, ಜೈಲು ಅಧಿಕಾರಿಗಳಿಗೆ ಕೈಮುಗಿಯುತ್ತಿರುವ ರಾಗಿಣಿ, ಸಂಜನಾ

    ಇನ್ನು, ಕಳೆದ ವರ್ಷ ಜುಲೈ 28ರಂದು ಕರಣ್​ ಜೋಹರ್​ ನೀಡಿದ ಪಾರ್ಟಿಯಲ್ಲಿ ಬಾಲಿವುಡ್​ ನಟ-ನಟಿಯರು ಡ್ರಗ್ಸ್​ ತೆಗೆದುಕೊಂಡಿದ್ದರು ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಈ ಕುರಿತು ಮಾತನಾಡಿರುವ ಕರಣ್ ಜೋಹರ್​, ‘ಮಾಧ್ಯಮಗಳಲ್ಲಿ ಸುಳ್ಳುಸುದ್ದಿ ಪ್ರಸಾರಾಗುತ್ತಿರುವುದರಿಂದ ನನ್ನ ಬಗ್ಗೆ, ನನ್ನ ಪ್ರೊಡಕ್ಷನ್​ ಕಂಪೆನಿಯ ಬಗ್ಗೆ ಜನರಲ್ಲಿ ಅಸಹನೆ ಹೆಚ್ಚುತ್ತಿದೆ. ಈ ಕುರಿತಾಗಿ ಒಂದು ವಿಷಯವನ್ನು ಸ್ಪಷ್ಟಪಡಿಸುವುದಕ್ಕೆ ಬಯಸುತ್ತೇನೆ. ನಾನು ಯಾವತ್ತೂ ಡ್ರಗ್ಸ್​ ತೆಗೆದುಕೊಂಡಿಲ್ಲ ಮತ್ತು ಡ್ರಗ್ಸ್​ ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸುವುದೂ ಇಲ್ಲ’ ಎಂದು ಅವರು ಹೇಳಿದ್ದಾರೆ.

    ಜ್ಯೋತಿಷ್ಯಕ್ಕಿಂತ ನಿಮ್ಮನ್ನು ನೀವು ನಂಬಿ … ಜಗ್ಗೇಶ್​ ಹಾಗೆ ಹೇಳಿದ್ದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts