More

    ಕೆಎಸ್​​​​ನ ಸಾಹಿತ್ಯ, ಕಾವ್ಯಗಾಯನ ಪ್ರಶಸ್ತಿಗಳಿಗೆ ನಾಲ್ವರ ಆಯ್ಕೆ

    ಬೆಂಗಳೂರು: ಕರ್ನಾಟಕ ಸರ್ಕಾರದ ಕೆ. ಎಸ್ ನರಸಿಂಹ ಸ್ವಾಮಿ ಟ್ರಸ್ಟ್ ವತಿಯಿಂದ ನೀಡಲಾಗುವ ಕೆಎಸ್​​ನ​​​ ಸಾಹಿತ್ಯ ಹಾಗೂ ಕಾವ್ಯಗಾಯನ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2021-22ನೇ ಹಾಗೂ 2022-23ನೇ ಸಾಲಿನ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಸವಿತಾ ನಾಗಭೂಷಣ, ಹಿರಿಯ ಸಾಹಿತಿ, ಪತ್ರಕರ್ತ ಸರಜೂ ಕಾಟ್ಕರ್, ಹಿರಿಯ ಗಾಯಕರಾದ ಎಂ. ಕೆ. ಜಯಶ್ರೀ ಹಾಗೂ ಗರ್ತಿಕೆರೆ ರಾಘಣ್ಣ ಅವರಿಗೆ ನೀಡಲಾಗುತ್ತದೆ.

    ಮಂಡ್ಯದ ಡಾ. ಬಿ. ಆರ್​​. ಅಂಬೇಡ್ಕರ್​​ ಭವನದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಜನವರಿ 5ರ ಗುರುವಾರ ಸಂಜೆ ಐದು ಗಂಟೆಗೆ ಆರಂಭವಾಗಲಿದೆ. ಜ್ಯೋತಿ ಪುರಾಣಿಕ್, ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಶ್ರೀನಿವಾಸ ಉಡುಪ ಜೋಗಿಸುನಿತಾ, ಡೇವಿಡ್, ವಿದ್ಯಾ ಶಂಕರ್, ಶ್ರೀಧರ್- ಮುಂತಾದ ಕಲಾವಿದರಿಂದ ಕೆ. ಎಸ್. ನರಸಿಂಹ ಸ್ವಾಮಿ ಅವರ ಗೀತ ಗಾಯನದ ಮೂಲಕ ಪ್ರಾರಂಭವಾಗಲಿದ್ದು, ಕೆಎಸ್​​​ಎನ್ ಗೀತೆಗಳಿಗೆ ನೃತ್ಯ ಪ್ರದರ್ಶನ ನಡೆಯಲಿದೆ.

    ಸಮಾರಂಭವನ್ನು ಹಿರಿಯ ಕವಿಗಳಾದ ಬಿ. ಆರ್. ಲಕ್ಷ್ಮಣ ರಾವ್ ಉದ್ಘಾಟನೆ ಮಾಡಲಿದ್ದಾರೆ. ಪ್ರಶಸ್ತಿ ಪ್ರದಾನವನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ರೇಷ್ಮೆ ಯುವಜನ ಸಬಲೀಕರಣ ಸಚಿವರಾದ ಕೆ. ಸಿ. ನಾರಾಯಣಗೌಡ ನಡೆಸಿಕೊಡಲಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶ ಗೌಡ, ಹಿರಿಯ ಸಾಹಿತಿಗಳಾದ ಡಾ. ಪ್ರದೀಪ್ ಕುಮಾರ್ ಹೆಬ್ರಿ, ಪ್ರೊ. ಜಿ. ಟಿ. ವೀರಪ್ಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts