ನಟಿ ತುನಿಷಾ- ಶೀಜಾನ್​ ಬ್ರೇಕಪ್​ ಬಗ್ಗೆ ಶೀಜಾನ್ ಸೋದರಿ ಫಲಕ್​ ನಾಜ್ ಹೇಳೋದೇನು?

blank

ಮುಂಬೈ: ಕಿರುತೆರೆ ನಟಿ ತುನಿಷಾ ಶರ್ಮಾಗೆ ಮತಾಂತರವಾಗುವಂತೆ ಬಲವಂತ ಮಾಡಲಾಗಿತ್ತು ಎಂದು ಆಕೆಯ ತಾಯಿ ವನಿತಾ ಶರ್ಮಾ ಆರೋಪ ಮಾಡಿದ್ದರು. ಇದಕ್ಕೆ ಶೀಜಾನ್​​​ ಖಾನ್​​ ಕುಟುಂಬ ಪತ್ರಿಕಾ ಗೋಷ್ಠಿ ನಡೆಸಿ ಪ್ರತ್ಯಾರೋಪ ಮಾಡಿದ್ದಾರೆ.

ಸಹನಟ ಶೀಜಾನ್​​ ಖಾನ್​​​​ ಸಹೋದರಿ ಫಲಕ್​​ ನಾಜ್​​​​, ‘ಪರಸ್ಪರ ಹೊಂದಾಣಿಕೆಯಿಂದಲೇ ಇಬ್ಬರ ನಡುವೆ ಬ್ರೇಕಪ್​ ಆಗಿತ್ತು, ಕೆರಿಯರ್​​​ ಬಗ್ಗೆ ಗಮನ ಕೋಡೋಣ ಎಂಬ ಕಾರಣಕ್ಕೆ ಹೀಗೆ ಮಾಡಿದ್ರು. ಇಬ್ಬರ ನಡುವಿನ ವಾಟ್ಸಪ್​ ಚಾಟ್​ಗಳು ಕೂಡ ಪೊಲೀಸರ ಬಳಿ ಇವೆ. ಯಾವುದೇ ರೀತಿಯ ಜಗಳ, ಮನಸ್ತಾಪಗಳು ಇಬ್ಬರ ನಡುವೆ ಇರಲಿಲ್ಲ. ಪರಸ್ಪರ ಹೊಂದಾಣಿಕೆ, ಒಪ್ಪಿಗೆಯಿಂದಲೇ ಬ್ರೇಕಪ್​​ ಆಗಿದೆ…’ ಎಂದು ಹೇಳಿಕೆ ನೀಡಿದ್ದಾರೆ.

‘ಶೀಜಾನ್ ಖಾನ್​ ವಿರುದ್ಧದ ಎಲ್ಲ ಆರೋಪಗಳನ್ನೂ ತುನಿಷಾ ಚಿಕ್ಕಪ್ಪ ಪವನ್ ಶರ್ಮಾ ಮಾಡಿದ್ದಾರೆ. ಪ್ರತಿಯೊಂದಕ್ಕೂ ತುನಿಷಾ ಚಿಕ್ಕಪ್ಪನ ಹಸ್ತಕ್ಷೇಪದಿಂದ ಆಕೆ ರೋಸಿಹೋಗಿದ್ದರು…’ ಎಂದು ಶೀಜಾನ್​​ ಕುಟುಂಬ ದೂರಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಹಿಜಾಬ್​ ಧರಿಸಿರುವ ತುನಿಷಾ ಫೋಟೊ ಸಿನಿಮಾದ ಶೂಟಿಂಗ್​​​ಗೆ ಸಂಬಂಧಪಟ್ಟಿದ್ದಷ್ಟೆ. ಹಿಜಾಬ್​, ಲವ್​​ಜಿಹಾದ್​​, ದರ್ಗಾ ವಿಷಯಗಳೆಲ್ಲವೂ ಸುಳ್ಳು ಮತ್ತು ಆಧಾರರಹಿತವಾದದ್ದು ಎಂದೂ ಹೇಳಿದ್ದಾರೆ.

Share This Article

ಉಡುಗೆಗೆ ಮ್ಯಾಚ್​ ಆಗುವ ಲಿಪ್​ಸ್ಟಿಕ್​​​ ಆಯ್ಕೆ ಮಾಡುವುದೇಗೆ?; ಇಲ್ಲಿದೆ ಸಿಂಪಲ್​ ಟಿಪ್ಸ್​​ | Beauty Tips

ನಾವು ಮದುವೆಗೆ ಚೆಂದದ ಬಟ್ಟೆಗಳನ್ನು ಆಯ್ಕೆ ಮಾಡುತ್ತೇವೆ. ಆದ್ದರಿಂದ ಯಾರೂ ನಮಗಿಂತ ಹೆಚ್ಚು ಸುಂದರವಾಗಿ ಕಾಣುವುದಿಲ್ಲ.…

ಚಳಿಗಾಲದಲ್ಲಿ ವಿಟಮಿನ್​​ ಡಿ ಕೊರತೆಯೇ?; ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ | Health Tips

ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಆದರೆ ಈ ಪೋಷಕಾಂಶವು ಅನೇಕ…

Mushrooms for Cancer: ಅಣಬೆ ತಿಂದರೆ ಯಾವುದೇ ಕ್ಯಾನ್ಸರ್ ಇದ್ರು ಕಂಟ್ರೋಲ್…!

Mushrooms for Cancer : ಕ್ಯಾನ್ಸರ್ ರೋಗ ಅಪಾಯಕಾರಿ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ. ಕ್ಯಾನ್ಸರ್​​ನಲ್ಲಿ…