More

    ಸ್ವತಂತ್ರ ಬಂದಾಗ ಅಕ್ಕಿ 2 ರೂ. ಇತ್ತು.. ಇವತ್ತು ಎಷ್ಟಿದೆ?: ಬೆಲೆ ಏರಿಕೆ ಪ್ರಶ್ನೆಗೆ ಸಚಿವ ಈಶ್ವರಪ್ಪ ಉತ್ತರ

    ಶಿವಮೊಗ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆಯು ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

    ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಂತ್ರ ಬಂದಾಗ ಅಕ್ಕಿ ಎರಡು ರೂ. ಇತ್ತು. ಇವತ್ತು ಎಷ್ಟಿದೆ? ಅಕ್ಕಿ ಮತ್ತು ಬೆಳೆ ಸೇರಿದಂತೆ ಎಲ್ಲ ವಸ್ತುಗಳ ದರ ಏರಿಕೆ ಸ್ವಾಭಾವಿಕವಾಗಿ ಜಾಸ್ತಿ ಆಗುತ್ತಿರುತ್ತದೆ ಎಂದು ಸಮರ್ಥನೆ ನೀಡಿದರು.

    ದರ ಜಾಸ್ತಿ ಅಗೋದು ಸರ್ಕಾರದ ಮೇಲೆ ಪರಿಣಾಮ ಬೀರಲ್ಲ. ಕೋವಿಡ್ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದೇವೆ. ಒಂದು ಕಡೆ ಉಚಿತವಾಗಿ ವ್ಯಾಕ್ಸಿನ್, ಇನ್ನೊಂದೆಡೆ ಬಡವರಿಗೆ ರೇಶನ್ ನೀಡಲಾಗುತ್ತಿದೆ. ಸುಮಾರು 80 ಕೋಟಿ ಜನರಿಗೆ ಎರಡನ್ನು ಉಚಿತವಾಗಿ ನೀಡುತ್ತಿರುವ ಪ್ರಧಾನಿ ಮೋದಿ ಓರ್ವ ಸೂಪರ್ ಲೀಡರ್. ಇದೇ ಕಾರಣಕ್ಕಾಗಿ ದೇಶದ ಜನರು ಅವರನ್ನು ಮೆಚ್ಚಿಕೊಂಡಿದ್ದಾರೆಂದು ತಿಳಿಸಿದರು.

    ಕೋವಿಡ್​ಗೂ ಚುನಾವಣೆಗೂ ಯಾವುದೇ ಸಂಬಂಧ ತರಬೇಡಿ ಎಂದು ವಿಪಕ್ಷಗಳಿಗೆ ಈಶ್ವರಪ್ಪ ಇದೇ ವೇಳೆ ಮನವಿ ಮಾಡಿದರು. ಅಲ್ಲದೆ, ಅವರೂ ತಂದರೇ, ನಾವು ಜನರಿಗೆ ವಾಸ್ತವ ತಿಳಿಸುತ್ತೇವೆ ಎಂದರು. (ದಿಗ್ವಿಜಯ ನ್ಯೂಸ್​)

    ನೀರವ್, ಮಲ್ಯ, ಚೋಕ್ಸಿಯಿಂದ ವಶಕ್ಕೆ ಪಡೆದ ಆಸ್ತಿಯಲ್ಲಿ 9,371 ಕೋಟಿ ರೂ.ಗಳನ್ನು ಬ್ಯಾಂಕ್​ಗಳಿಗೆ ವರ್ಗಾಯಿಸಿದ ಇಡಿ

    2 ದಿನದ ಅಂತರದಲ್ಲಿ ಮೂವರು ಯುವತಿಯರ ದುರಂತ ಸಾವು: ಸಾಕ್ಷರತಾ ರಾಜ್ಯ ಕೇರಳಕ್ಕೆ ಕಪ್ಪುಚುಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts