More

    ಕೃಷ್ಣಾಪುರ ಮತಗಟ್ಟೆ ಅಮ್ಮನಲ್ಲೂರು ಗ್ರಾಮಕ್ಕೆ ವರ್ಗ

    ಕೋಲಾರ: ತಾಲೂಕಿನ ಕೃಷ್ಣಾಪುರ ಮತಗಟ್ಟೆಯನ್ನು ಸಮೀಪದ ಅಮ್ಮನಲ್ಲೂರು ಗ್ರಾಮಕ್ಕೆ ಸ್ಥಳಾಂತರ ಮಾಡಿರುವುದನ್ನು ಖಂಡಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

    ಕೃಷ್ಣಾಪುರ ಗ್ರಾಮದಲ್ಲಿ 356 ಮತದಾರರಿದ್ದಾರೆ. ಆ ಪೈಕಿ ವೃದ್ಧರು, ಅಂಗವಿಕಲರು ಇದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಕೃಷ್ಣಾಪುರ ಮತಗಟ್ಟೆಯಲ್ಲಿ ಮತ ಚಲಾಯಿಸುತ್ತಿದ್ದೆವು. ಆದರೆ ಅಧಿಕಾರಿಗಳು ಗ್ರಾಮಸ್ಥರಿಗೆ ಯಾವುದೇ ರೀತಿ ಮುನ್ಸೂಚನೆ ನೀಡದೆ ಏಕಾಏಕಿಯಾಗಿ ಸ್ಥಳಾಂತರ ಮಾಡಿದ್ದಾರೆ. 4 ಕಿಮೀ ತೆರಳಿ ಮತ ಹಾಕಲು ಹೇಗೆ ಸಾಧ್ಯ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

    ಕೃಷ್ಣಾಪುರದಲ್ಲಿ ಮತಗಟ್ಟೆಯನ್ನು ಎಂದಿನಂತೆ ಮುಂದುವರಿಸಬೇಕು. ಇಲ್ಲವಾದಲ್ಲಿ ಲೋಕಸಭೆ ಚುನಾವಣೆಯ ಮತದಾನ ಬಹಿಷ್ಕರಿಸಲಾಗುತ್ತದೆ. ಜತೆಗೆ ಚುನಾವಣೆ ಅಭ್ಯರ್ಥಿಗಳನ್ನು ಪ್ರಚಾರಕ್ಕಾಗಿ ಗ್ರಾಮದೊಳಗೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

    ಹಾಲು ಉತ್ಪಾದಕರು ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್​ ಮಾತನಾಡಿ, ಸುಮಾರು ವರ್ಷಗಳಿಂದ ಗ್ರಾಮಸ್ಥರೆಲ್ಲ ಇಲ್ಲೆ ಮತ ಚಲಾವಣೆ ಮಾಡುತ್ತಿದ್ದೆವು, ಆದರೆ ಲೋಕಸಭೆ ಚುನಾವಣೆಗೆ ಅಮ್ಮನಲ್ಲೂರು ಗ್ರಾಮಕ್ಕೆ ಮತಗಟ್ಟೆ ವಿಲೀನಗೊಳಿಸಿದ್ದಾರೆ. 25 ವರ್ಷದಿಂದ ಇಲ್ಲೆ ಮತಗಟ್ಟೆ ಸ್ಥಾಪನೆ ಮಾಡಲಾಗುತ್ತಿತ್ತು. ಇದೀಗ ಅಮ್ಮನಲ್ಲೂರು ಗ್ರಾಮದ ಮತಗಟ್ಟೆಯೊಂದಿಗೆ ವಿಲೀನ ಮಾಡಿರುವುದನ್ನು ಖಂಡಿಸಿ ಮತದಾನ ಬಹಿಷ್ಕರಿಸುತ್ತಿದ್ದೇವೆ ಎಂದರು.

    ಪ್ರಗತಿಪರ ರೈತ ಕೆ.ರಾಜಣ್ಣ ಮಾತನಾಡಿ, ಕೃಷ್ಣಾಪುರ ಮತಗಟ್ಟೆಯನ್ನು ಅಮ್ಮನಲ್ಲೂರು ಮತಗಟ್ಟೆಯೊಂದಿಗೆ ವಿಲೀನಗೊಳಿಸುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ತೀರ್ಮಾನಕ್ಕೂ ಮೊದಲು ಗ್ರಾಮಸ್ಥರೊಂದಿಗೆ ಚರ್ಚಿಸಿಲ್ಲ, ಕಡಿಮೆ ಮತದಾರರು ಇದ್ದಾರೆ ಎಂದು ನೆಪವೊಡ್ಡಿ ಕ್ರಮಕೈಗೊಂಡಿದ್ದಾರೆ. ಡಿಸಿ ಚುನಾವಣಾಧಿಕಾರಿಯಾಗಿದ್ದು ಅವರನ್ನು ಕೇಳಿ ಎಂದು ಹೇಳುತ್ತಾರೆ, ಇಲ್ಲಿನ ಅಧಿಕಾರಿಗಳು ಏನು ಮಾಡಕ್ಕಾಗದೆ ಕೈಕಟ್ಟಿ ಕುಳಿತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts