More

    5,178 ಯುವ ಮತದಾರರ ನೋಂದಣಿ

    ಸೊರಬ: ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ರಾಜೇಶ್ ತಿಳಿಸಿದರು.

    ಪಟ್ಟಣದ ತಾಲೂಕು ಕಚೇರಿಯಲ್ಲಿರುವ ಸಹಾಯಕ ಚುನಾವಣಾ ಅಧಿಕಾರಿಗಳ ಬುಧವಾರ ಮಾಹಿತಿ ನೀಡಿದ ಅವರು, ಸಾಗರ ಕ್ಷೇತ್ರದ ತಾಳಗುಪ್ಪ ಹೋಬಳಿ ಸೇರಿ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 239 ಬೂತ್‌ಗಳಿದ್ದು, 1,97,702 ಮತದಾರರು ಇದ್ದಾರೆ. ಇದರಲ್ಲಿ 99,153 ಪುರುಷರು, 98,549 ಮಹಿಳಾ ಮತದಾರರು ಇದ್ದಾರೆ. ಇದರಲ್ಲಿ 5,178 ಯುವ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
    26 ಸೂಕ್ಷ್ಮ, 6 ಅತಿ ಸೂಕ್ಷ್ಮ ಬೂತ್‌ಗಳೆಂದು ಗುರುತಿಸಲಾಗಿದೆ. ನೆಟ್‌ವರ್ಕ್ ಸಂಪರ್ಕ ಕಡಿತಗೊಂಡ 6 ಕೇಂದ್ರಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. ತಾಲೂಕಿನಲ್ಲಿ 4 ಚೆಕ್‌ಪೋಸ್ಟ್ ತೆರಯಲಾಗಿದೆ. ಅಗಸನಹಳ್ಳಿ, ಶಕುನವಳ್ಳಿ, ಭಾರಂಗಿ, ಹರೀಶಿ ಇವುಗಳು ಕ್ರಮವಾಗಿ ಹಾವೇರಿ, ಉತ್ತರಕನ್ನಡ ಜಿಲ್ಲೆ ಜತೆಗೆ ಗಡಿ ಭಾಗ ಹಂಚಿಕೊಂಡಿವೆ ಎಂದು ತಿಳಿಸಿದರು.
    ಏ.25ರಿಂದ 30ರವರೆಗೆ 85 ವರ್ಷ ದಾಟಿದ ಮತದಾರರಿಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಅಂಗವಿಕಲ ಮತದಾರರು 242 ಹಾಗೂ 140 ಹಿರಿಯ ಮತದಾರರು ಒಟ್ಟು 382 ಮತದಾರರು ಮನೆಯಲ್ಲೇ ಹಕ್ಕು ಚಲಾಯಿಸಲಿದ್ದಾರೆ ಎಂದು ಹೇಳಿದರು.
    ಚುನಾವಣಾ ಸಿಬ್ಬಂದಿಗೆ ಮೊದಲ ಹಂತದ ತರಬೇತಿ ನೀಡಲಾಗಿದೆ. ಪಟ್ಟಣದ ಪಿಯು ಕಾಲೇಜಿನಲ್ಲಿ 21 ಸೆಕ್ಟರ್‌ನಲ್ಲಿ ಮೇ 1ರಿಂದ ಎರಡನೇ ಹಂತದ ತರಬೇತಿ ನೀಡಲಾಗುವುದು. ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗಿದ್ದು, 39 ಬಸ್ ರೂಟ್, 14 ಜೀಪ್ ರೂಟ್ ಗುರುತಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎನ್ನುವುದು ಹಬ್ಬ. ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ನೋಡಲ್ ಅಧಿಕಾರಿ ಎಚ್.ಬಿ.ಗಣೇಶ್, ತಹಸೀಲ್ದಾರ್ ಹುಸೇನ್ ಸರಕಾವಸ್, ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts