More

    ಸಿಂಗಲ್ಸ್ ಬಳಿಕ ಡಬಲ್ಸ್‌ನಲ್ಲೂ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಕ್ರೆಜ್‌ಸಿಕೋವಾ

    ಪ್ಯಾರಿಸ್: ಜೆಕ್ ಗಣರಾಜ್ಯದ ಬಾರ್ಬರಾ ಕ್ರೆಜ್‌ಸಿಕೋವಾ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆಲುವಿನ ಬೆನ್ನಲ್ಲೇ ಮಹಿಳಾ ಡಬಲ್ಸ್ ವಿಭಾಗದಲ್ಲೂ ಪ್ರಶಸ್ತಿ ಜಯಿಸುವ ಇತಿಹಾಸ ನಿರ್ಮಿಸಿದ್ದಾರೆ. 25 ವರ್ಷದ ಕ್ರೆಜ್‌ಸಿಕೋವಾ ಫ್ರಾನ್ಸ್‌ನ ಮೇರಿ ಪಿಯರ್ಸ್‌ (2000) ಬಳಿಕ ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ಪ್ರಶಸ್ತಿ ಡಬಲ್ ಸಾಧಿಸಿದ ಮೊದಲ ಆಟಗಾರ್ತಿ ಎನಿಸಿದ್ದಾರೆ. ಒಟ್ಟಾರೆಯಾಗಿ ಈ ಸಾಧನೆ ಮಾಡಿದ 7ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    ಸಿಂಗಲ್ಸ್‌ನಲ್ಲಿ ಚೊಚ್ಚಲ ಗ್ರಾಂಡ್ ಸ್ಲಾಂ ಒಲಿಸಿಕೊಂಡ ಮರುದಿನ ದೇಶಬಾಂಧವೆ ಕ್ಯಾತರಿನಾ ಸಿನಿಯಾಕೋವಾ ಜತೆಗೂಡಿ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಆಡಿದ ಕ್ರೆಜ್‌ಸಿಕೋವಾ, ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಮತ್ತು ಅಮೆರಿಕದ ಬೆಥಾನಿ ಮ್ಯಾಟೆಕ್ ಸ್ಯಾಂಡ್ಸ್ ಜೋಡಿಯ ವಿರುದ್ಧ 6-4, 6-2 ನೇರಸೆಟ್‌ಗಳಿಂದ ಗೆಲುವು ದಾಖಲಿಸಿದರು. ಸಿಂಗಲ್ಸ್‌ನಲ್ಲಿ 15ನೇ ರ‌್ಯಾಂಕ್‌ಗೆ ಏರಲಿರುವ ಕ್ರೆಜ್‌ಸಿಕೋವಾ ಡಬಲ್ಸ್ ರ‌್ಯಾಂಕಿಂಗ್‌ನಲ್ಲಿ ಸೋಮವಾರ ಮತ್ತೊಮ್ಮೆ ವಿಶ್ವ ನಂ.1 ಪಟ್ಟಕ್ಕೇರಲಿದ್ದಾರೆ.

    ಇದನ್ನೂ ಓದಿ: ಕ್ರೆಜ್‌ಸಿಕೋವಾಗೆ ಫ್ರೆಂಚ್ ಓಪನ್ ಕಿರೀಟ, ಜೆಕ್ ಆಟಗಾರ್ತಿಗೆ ಚೊಚ್ಚಲ ಗ್ರಾಂಡ್ ಸ್ಲಾಂ ಗರಿ

    ಕ್ರೆಜ್‌ಸಿಕೋವಾ-ಸಿನಿಯಾಕೋವಾ ಜೋಡಿ 2018ರಲ್ಲೂ ಇಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿತ್ತು. ನಂತರ 2019ರಲ್ಲಿ ವಿಂಬಲ್ಡ್‌ನಲ್ಲೂ ಡಬಲ್ಸ್ ಪ್ರಶಸ್ತಿ ಗೆದ್ದಿತ್ತು. ಕ್ರೆಜ್‌ಸಿಕೋವಾ ಗ್ರಾಂಡ್ ಸ್ಲಾಂನಲ್ಲಿ ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಪ್ರಶಸ್ತಿ ಜಯಿಸಿದ 4ನೇ ಹಾಲಿ ಆಟಗಾರ್ತಿ ಎನಿಸಿದ್ದಾರೆ. ಸೆರೇನಾ, ವೀನಸ್ ವಿಲಿಯಮ್ಸ್ ಮತ್ತು ಸಮಂತಾ ಸ್ಟೋಸರ್ ಇತರ ಮೂವರು.

    ಕರ್ನಾಟಕದ ಮನೀಷ್ ಪಾಂಡೆ ಲಂಕಾ ಪ್ರವಾಸಕ್ಕೆ ನಾಯಕನಾಗಬೇಕಿತ್ತು ಎಂದ ಭಾರತ ತಂಡದ ಮಾಜಿ ವೇಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts