More

    ಕೆಪಿಎಸ್​ಸಿಯ ಎಫ್‍ಡಿಎ ಪ್ರಶ್ನೆ ಪತ್ರಿಕೆ ವಿಜ್ಞಾನಮಯವಾಗಿದ್ದೇಕೆ? ನೆಟ್ಟಿಗರು ಕೊಟ್ಟ ಕಾರಣ ಹೀಗಿದೆ…

    ಪ್ರಥಮ ದರ್ಜೆ ಸಹಾಯಕ ಹುದ್ದೆಗೆ (ಎಫ್​ಡಿಎ) ಆಯ್ಕೆಯಾಗ ಬೇಕಾದರೆ ಕಾಲೇಜು ಹಂತದಲ್ಲಿ ವಿಜ್ಞಾನ ವಿಷಯವನ್ನೇ ಓದುವುದು ಕಡ್ಡಾಯವೇ? ಕಲಾ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಕಲಿತವರು ಎಫ್​ಡಿಎ ಆಗಬಾರದೇ? ಭಾನುವಾರ ಸ್ಪರ್ಧಾತ್ಮಕ ಪರೀಕ್ಷೆ ಬರೆದ ಅಭ್ಯರ್ಥಿಗಳನ್ನು ಕಾಡುತ್ತಿರುವ ಪ್ರಶ್ನೆ ಇದು. ಏಕೆಂದರೆ, ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ಶೇ. 45ರಿಂದ 50ರಷ್ಟು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳೇ ತುಂಬಿಹೋಗಿದ್ದವು. ವಿಜ್ಞಾನ ಕಲಿಯದ ಅಭ್ಯರ್ಥಿಗಳ ಪಾಲಿಗೆ ಈ ಪ್ರಶ್ನೆಪತ್ರಿಕೆ ಅಕ್ಷರಶಃ ಕಬ್ಬಿಣದ ಕಡಲೆಯಾಗಿತ್ತು.

    ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ) ಗಣಿತ, ವಿಜ್ಞಾನ, ಪ್ರಚಲಿತ ವಿದ್ಯಮಾನ, ಸಂವಿಧಾನ, ಕಂಪ್ಯೂಟರ್ ಸೈನ್ಸ್ ಈ ರೀತಿ ಎಲ್ಲ ವಿಷಯಗಳಿಗೂ ಸಮಾನ ಅವಕಾಶ ನೀಡಿ ಪ್ರಶ್ನೆ ಪತ್ರಿಕೆ ರೂಪಿಸಬೇಕಾಗಿತ್ತು. ಆದರೆ ವಿಜ್ಞಾನ ವಿಷಯದಲ್ಲೇ ಹೆಚ್ಚಿನ ಪ್ರಶ್ನೆಗಳನ್ನು ಕೇಳಿ, ಬೇರೆ ವಿಷಯಗಳ ಕನಿಷ್ಠ ಪ್ರಶ್ನೆಗಳನ್ನೂ ಕೇಳದೆ ಇರುವುದಕ್ಕೆ ಅಭ್ಯರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೂ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತು.

    ಹೀಗಾಗಿ ಕೆಪಿಎಸ್​ಸಿ ವಿರುದ್ಧ ಪರಿಕ್ಷಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಶ್ನೆ ಪತ್ರಿಕೆ ತಯಾರಿಸಲು ಕನಿಷ್ಠ ಜ್ಞಾನವೂ ಇಲ್ಲವೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪರಿಕ್ಷೇ ಬರೆದವರು ಸಾಮಾಜಿಕ ಜಾಲತಾಣದಲ್ಲಿಯೂ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು, ಪ್ರಶ್ನೆ ಪತ್ರಿಕೆಯನ್ನು ವಿಜ್ಞಾನಮಯ ಮಾಡಿದ್ದಕ್ಕೆ ಕಾರಣ ಹುಡುಕಿ ಟ್ರೋಲ್​ ಮಾಡುತ್ತಿದ್ದಾರೆ.

    ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಿಕೊಂಡಿತಾ ಕೆಪಿಎಸ್​ಸಿ?
    ಪರೀಕ್ಷೆಯ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಎಫ್‍ಡಿಎ ಎಕ್ಸಾಮ್ ಪೇಪರ್ ಅನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಎಫ್‍ಡಿಎ ಪರೀಕ್ಷೆ ನಡೆದ ಭಾನುವಾರ (ಫೆ.28) ರಾಷ್ಟ್ರೀಯ ವಿಜ್ಞಾನ ದಿನವೂ ಹೌದು. ಹೀಗಾಗಿ ಪ್ರಶ್ನೆ ಪ್ರತಿಕೆಯಲ್ಲೂ ಅದರ ಆಚರಣೆ ಮಾಡಿದ್ದಾರೆಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಕೆಪಿಎಸ್‍ಸಿ ಭರ್ಜರಿಯಾಗಿ ವಿಜ್ಞಾನ ದಿನವನ್ನು ಆಚರಿಸಿಕೊಂಡಿದೆ ಮತ್ತು ಇದು ಸಾಮಾನ್ಯ ಜ್ಞಾನ ಪತ್ರಿಕೆಯೇ? ಅಥವಾ ಸಾಮಾನ್ಯ ವಿಜ್ಞಾನ ಪತ್ರಿಕೆಯೇ ನಮಗೆ ತಿಳಿಯುತ್ತಿಲ್ಲ ಎಂದು ಕೆಪಿಎಸ್‍ಸಿ ಕಾಲೆಳೆದಿದ್ದಾರೆ. ಅಲ್ಲದೆ, ಅನೇಕರು ಟ್ವಿಟರ್​ನಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಕೆಪಿಎಸ್‍ಸಿಯನ್ನು ಟ್ರೋಲ್ ಮಾಡಿದ್ದಾರೆ.

    ವಿದ್ಯಾರ್ಥಿಗಳಿಗೆ ಹಿನ್ನಡೆ?: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದೇ ವಿಷಯದ ಮೇಲೆ ಶೇ.40ಕ್ಕೂ ಹೆಚ್ಚಿನ ಪ್ರಶ್ನೆಗಳು ಮೂಡಿಬಂದರೆ ಇತರ ವಿಷಯ ಅಧ್ಯಯನ ಮಾಡಿರುವವರಿಗೆ ಕಷ್ಟವಾಗುತ್ತದೆ. ಈ ಬಾರಿಯ ಪ್ರಶ್ನೆಪತ್ರಿಕೆಯಲ್ಲಿ ಸುಮಾರು 42 ಪ್ರಶ್ನೆಗಳು ವಿಜ್ಞಾನದ ಮೇಲೆಯೇ ಇದ್ದುದು ವಿಜ್ಞಾನ ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವಾದರೆ, ಕಲಾ, ವಾಣಿಜ್ಯ ಹಿನ್ನೆಲೆ ಅಭ್ಯರ್ಥಿಗಳ ಹಿನ್ನಡೆಗೆ ನೇರ ಕಾರಣವಾಗುವ ಸಾಧ್ಯತೆ ಇದೆ. ಈ ಬಗ್ಗೆ ಫೇಸ್​ಬುಕ್, ವಾಟ್ಸ್​ಆಪ್​ಗಳಲ್ಲಿ ಸ್ಟೇಟಸ್ ಹಾಕುವ ಮೂಲಕ ಅಭ್ಯರ್ಥಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    ಎಫ್​ಡಿಎ ವಿಜ್ಞಾನ ಪಕ್ಷಪಾತ: ಪ್ರಶ್ನೆಪತ್ರಿಕೆ ವಿಜ್ಞಾನಮಯ, ಪ್ರಚಲಿತ ವಿದ್ಯಮಾನ ಮಾಯ

    ಹೆಚ್ಚುತ್ತಿರುವ ಬೇಸಿಗೆ ಬೇಗೆ, ಹೀಟ್ ಸ್ಟ್ರೋಕ್ ಭೀತಿ: ಇರಲಿ ಆರೋಗ್ಯದ ಬಗ್ಗೆ ಕಾಳಜಿ, ಸೂಕ್ತ ಮುನ್ನೆಚ್ಚರಿಕೆ ವಹಿಸಿ ಅಪಾಯದಿಂದ ಪಾರಾಗಿ..

    Web Exclusive |ಶೇ. 90 ಆಟೋ-ಟ್ಯಾಕ್ಸಿ ಚಾಲಕರಿಗೆ ಕರೊನಾ ಪ್ಯಾಕೇಜ್: ಪರಿಹಾರ ವಿತರಣೆ ಪ್ರಕ್ರಿಯೆ ಆರಂಭ, 29 ಸಾವಿರ ಅರ್ಜಿ ಪರಿಹರಿಸಲು ಹೆಣಗಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts