More

    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೀತಿ ಸಂಹಿತೆ ಅಡ್ಡಿಯಾಗಲ್ಲ: ಪರೀಕ್ಷಾ ಪ್ರಾಧಿಕಾರಗಳ ಸ್ಪಷ್ಟನೆ

    ಬೆಂಗಳೂರು ಲೋಕಸಭೆ ಚುನಾವಣೆ ನೀತಿ ಸಂಹಿತೆಯು ಈಗಾಗಲೇ ೋಷಣೆಯಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಡ್ಡಿಯಾವುದಿಲ್ಲ. ಎಲ್ಲ ಪರೀಕ್ಷೆಗಳು ಅಧಿಸೂಚನೆಯಲ್ಲಿರುವಂತೆ ನಿಗದಿತ ದಿನಾಂಕಗಳಲ್ಲಿಯೇ ನಡೆಯಲಿವೆ ಎಂದು ಕೆಪಿಎಸ್ಸಿ ಮತ್ತು ಕೆಇಎ ಸ್ಪಷ್ಪಪಡಿಸಿವೆ.

    ರಾಜ್ಯದಲ್ಲಿ ಕೆಇಎ ಮತ್ತು ಕೆಪಿಎಸ್ಸಿ ಯಲ್ಲಿ ಮಾ.24ರಿಂದ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿವೆ. ಈ ಸಂಬಂಧ ಸ್ಪಧಾರ್ಥಿಗಳಲ್ಲಿರುವ ಅನುಮಾನಗಳನ್ನು ಹೋಗಲಾಡಿಸಿವೆ.

    ಕರ್ನಾಟಕ ವಿಧಾಣ ಪರಿಷತ್ತಿನ ಸಚಿವಾಲಯದ ಪರೀಕ್ಷೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಡಿಸಿ), ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬಿಎಂಟಿಸಿ ಸೇರಿ ಹಲವು ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದಲೇ ಅಧಿಸೂಚನೆಗಳನ್ನು ಈಗಾಗಲೇ ಪ್ರಕಟಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.

    ಹಾಗೆಯೇ ಕರ್ನಾಟಕ ಲೋಕಸೇವಾ ಆಯೋಗವು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಆಯುಷ್ ಇಲಾಖೆ, ಪೌರಾಡಳಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಸೇರಿ ಹಲವು ಅಧಿಸೂಚನೆಗಳನ್ನು ಹೊರಡಿಸಿದೆ. ಕೆಲವು ಪರೀಕ್ಷೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದರೆ, ಕೆಲವು ಪರೀಕ್ಷೆಗಳಿಗೆ ಇನ್ನಷ್ಟೇ ಆರಂಭವಾಗಬೇಕಿದೆ. ಹೀಗಾಗಿ, ಯಾವುದೇ ಅಡ್ಡಿಗಳಿಲ್ಲವೆಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

    ಈಗಾಗಲೇ ಅಧಿಸೂಚನೆ ಪ್ರಕಟವಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳು ವೇಳಾಪಟ್ಟಿ ಪ್ರಕಾರ ನಡೆಯಲಿವೆ. ಒಂದು ವೇಳೆ ಪರೀಕ್ಷೆ ದಿನಾಂಕ ಬದಲಾವಣೆ ಮಾಡಬೇಕಾದಲ್ಲಿ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ಮುಂಚಿತವಾಗಿ ತಿಳಿಸುತ್ತೇವೆ. ಅಭ್ಯರ್ಥಿಗಳು ವ್ಯಾಸಂಗದ ಕಡೆ ಗಮನ ಕೊಡಿ, ಆತಂಕ ಬೇಡ.
    – ರಾಕೇಶ್ ಕುಮಾರ್, ಕೆಪಿಎಸ್ಸಿ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts