More

    ಐಸಿಎಆರ್-ಡಿಪಿಆರ್ ಜತೆ ಕೆಪಿಎ್ಬಿಎ ಒಪ್ಪಂದ

    ಮಂಗಳೂರು: ಕರ್ನಾಟಕ ಪೌಲ್ಟ್ರಿ ಾರ್ಮರ್ಸ್ ಆ್ಯಂಡ್ ಬ್ರೀಡರ್ಸ್ ಅಸೋಸಿಯೇಶನ್(ಕೆಪಿಎ್ಬಿಎ) ಕುಕ್ಕುಟ ವಲಯದಲ್ಲಿ ಮತ್ತಷ್ಟು ಸಂಶೋಧನೆಗಾಗಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ – ಕೋಳಿ ಸಂಶೋಧನಾ ನಿರ್ದೇಶನಾಲಯದೊಂದಿಗೆ ತಿಳಿವಳಿಕೆ ಪತ್ರಕ್ಕೆ (ಎಂಒಯು) ಸಹಿ ಮಾಡಿದೆ. ಕೆಪಿಎ್ಬಿಎ ಅಧ್ಯಕ್ಷ ನವೀನ್ ಪಸುಪರ್ತಿ ಮತ್ತು ಹೈದರಾಬಾದ್‌ನ ಐಸಿಎಆರ್-ಡಿಪಿಆರ್ ನಿರ್ದೇಶಕ ಡಾ.ಆರ್.ಎನ್. ಚಟರ್ಜಿ ಸಹಿ ಹಾಕಿದ್ದಾರೆ.

    ಕೆಪಿಎ್ಬಿಎ ಅಧ್ಯಕ್ಷ ಪಸುಪರ್ತಿ ಮಾತನಾಡಿ, ಕೋಳಿ ಸಾಕಾಣಿಕೆಯು ವಾಣಿಜ್ಯ ಮತ್ತು ಹಿತ್ತಲು ಸಾಕಣೆ ಎರಡರಲ್ಲೂ ಅನೇಕ ಸವಾಲುಗಳನ್ನು ಹೊಂದಿದ್ದು, ಕೋಳಿ ಸಾಕಣೆಯನ್ನು ಸುಸ್ಥಿರವಾಗಿಸಲು ಮಾತ್ರವಲ್ಲದೆ ಲಾಭದಾಯಕವಾಗಿಯೂ ಮಾಡಲು ಆಳವಾದ ಸಂಶೋಧನೆ ಅಗತ್ಯವಿದೆ. ರೋಗಗಳ ಕುರಿತು ಸಂಶೋಧನೆಯನ್ನು ಉತ್ತೇಜಿಸಬೇಕಾಗಿದೆ. ಫೀಡ್ ಪರಿವರ್ತನೆ ಅನುಪಾತವನ್ನು ಸುಧಾರಿಸುವುದು ಅಗತ್ಯ. ಎರಡು ಸಂಸ್ಥೆಗಳು ಆವರ್ತಕ ತಾಂತ್ರಿಕ ಸೆಮಿನಾರ್‌ಗಳು, ವೆಬಿನಾರ್‌ಗಳು, ಕಾರ್ಯಾಗಾರಗಳು ಮತ್ತು ಜಂಟಿ ಪ್ರಕಟಣೆಗಳಿಗೆ ಈ ಎಂಒಯು ಸಹಕಾರಿಯಾಗಲಿದೆ ಎಂದರು.

    ಐಸಿಎಆರ್-ಡಿಪಿಆರ್ ನಿರ್ದೇಶಕ ಡಾ.ಆರ್.ಎನ್. ಚಟರ್ಜಿ ಅವರು ಸಹಯೋಗದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಈ ಸಂದರ್ಭ ವಿಜ್ಞಾನಿಗಳಾದ ಡಾ.ಎಂ.ಆರ್. ರೆಡ್ಡಿ,ಡಾ.ಎಂ.ವಿ.ಎಲ್.ಎನ್. ರಾಜು, ಮಾಜಿ ನಿರ್ದೇಶಕ ಡಾ.ಜೆ.ಎಂ.ಕಟಾರಿಯಾ, ಕೆಪಿಎ್ಬಿಎನ ನಿಕಟಪೂರ್ವ ಅಧ್ಯಕ್ಷ ಡಾ. ಸುಶಾಂತ್ ರೈ, ಬಿ, ಪ್ರಧಾನ ಕಾರ‌್ಯದರ್ಶಿ ಎಂ.ಎಸ್.ಆರ್.ಪ್ರಸಾದ್, ಖಜಾಂಚಿ ಎಚ್.ಎನ್..ರಾಜಶೇಖರ್, ವ್ಯವಸ್ಥಾಪಕ ಸಮಿತಿ ಸದಸ್ಯರಾದ ಡಾ.ರಾಜೇಶ್ ರೆಡ್ಡಿ, ಮತ್ತು ನವೀನ್ ಡಿ ಖೋಕ್ಲೆ, ಕಾರ‌್ಯಕಾರಿ ಕಾರ‌್ಯದರ್ಶಿ ಇನಾಯತ್ ಉಲ್ಲಾ ಖಾನ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts