More

    ಟಾಟಾ ಕಂಪನಿ ಜತೆ ಇವಿ ಫಾಸ್ಟ್​ ಚಾರ್ಜರ್​ ತಯಾರಿಕೆಗೆ ಒಪ್ಪಂದ: ಸರ್ವೋಟೆಕ್ ಪವರ್ ಷೇರು ಬೆಲೆ ಅಪ್ಪರ್​ ಸರ್ಕ್ಯೂಟ್​ ಹಿಟ್​

    ನವದೆಹಲಿ: ಮಂಗಳವಾರ ಸ್ಟಾಕ್ ಮಾರುಕಟ್ಟೆಯ ಕುಸಿತದ ನಡುವೆಯೇ ಸರ್ವೋಟೆಕ್ ಪವರ್ ಸಿಸ್ಟಮ್ಸ್ ಲಿಮಿಟೆಡ್‌ನ (SERVOTECH POWER SYSTEMS LIMITED) ಷೇರುಗಳಲ್ಲಿ ಶೇಕಡಾ 5ರ ಏರಿಕೆಯೊಂದಿಗೆ ಅಪ್ಪರ್ ಸರ್ಕ್ಯೂಟ್ ಹಿಟ್​ ಆಗಿವೆ. ಈ ಷೇರುಗಳ ಬೆಲೆ 85.50 ರೂಪಾಯಿ ತಲುಪಿದೆ. ಇನ್ನೊಂದು ಕಂಪನಿ ಜತೆ ಒಪ್ಪಂದ ಮಾಡಿಕೊಂಡಿರುವುದೇ ಷೇರು ಬೆಲೆ ಏರಿಕೆಗೆ ಕಾರಣವಾಗಿದೆ.

    ಸರ್ವೋಟೆಕ್ ಪವರ್ ಸಿಸ್ಟಮ್ಸ್ ಲಿಮಿಟೆಡ್ ಒಂದು ಮೈಕ್ರೋ ಕ್ಯಾಪ್ ಕಂಪನಿಯಾಗಿದ್ದು, 1850 ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ, ಇದರ ಷೇರುಗಳು 52 ವಾರಗಳ ಗರಿಷ್ಠ ಬೆಲೆ ರೂ. 108.70 ಮತ್ತು ಕನಿಷ್ಠ ಬೆಲೆ ರೂ. 17.52 ಆಗಿದೆ.

    ಸರ್ವೋಟೆಕ್ ಪವರ್ ಸಿಸ್ಟಮ್ಸ್ ಲಿಮಿಟೆಡ್, ಚಾರ್ಜಿಂಗ್ ಘಟಕಗಳ ಪೂರೈಕೆಗಾಗಿ ಎಲೆಕ್ಟ್ರಾ ಇವಿ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ.

    ಸರ್ವೋಟೆಕ್ ಪವರ್ ಸಿಸ್ಟಮ್ ಮತ್ತು ಎಲೆಕ್ಟ್ರಾ ಇವಿ ಕಂಪನಿಗಳ ನಡುವೆ ಇನ್ನೊವೇಟಿವ್​ EV ಚಾರ್ಜಿಂಗ್ ತಂತ್ರಜ್ಞಾನಕ್ಕಾಗಿ ಪಾಲುದಾರಿಕೆ ನಡೆದಿದೆ. ಈ ಒಪ್ಪಂದದ ಅಡಿಯಲ್ಲಿ, ಎರಡೂ ಕಂಪನಿಗಳು ಭಾರತದ ಮೊದಲ ವೇಗದ ಚಾರ್ಜಿಂಗ್ ಇಂಟರ್​ಆಪರೇಬಿಲಿಟಿ ಪರಿಹಾರವನ್ನು ಅಭಿವೃದ್ಧಿಪಡಿಸಲಿವೆ. ಸರ್ವೋಟೆಕ್ ಪವರ್ ಮತ್ತು ಎಲೆಕ್ಟ್ರಾ EV ನಡುವಿನ ಈ ಪಾಲುದಾರಿಕೆಯಿಂದಾಗಿ ರಚಿಸಲಾದ ಪರಿಹಾರವು ccs2 ಚಾರ್ಜರ್ ಮೂಲಕ ವಾಹನವನ್ನು ವೇಗವಾಗಿ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ. ಎಲೆಕ್ಟ್ರಾ EV ದೇಶದ ಪ್ರಮುಖ ಎಲೆಕ್ಟ್ರಿಕ್ ಪವರ್‌ಟ್ರೇನ್ ಪರಿಹಾರಗಳ ಕಂಪನಿಯಾಗಿದೆ. ಇದು ಪ್ರತಿಯೊಂದು ವರ್ಗದ ವಾಹನಗಳಿಗೆ ಸಂಕೀರ್ಣವಾದ ಹೆಚ್ಚಿನ ಮತ್ತು ಕಡಿಮೆ ವೋಲ್ಟೇಜ್ ಪ್ಲಾಟ್‌ಫಾರ್ಮ್‌ಗಳನ್ನು ನೀಡುತ್ತದೆ.

    ಎಲೆಕ್ಟ್ರಾ ಇವಿ ಸ್ಥಾಪಕರು ರತನ್ ಟಾಟಾ:

    ಟಾಟಾ ಗ್ರೂಪ್‌ನ ಮುಖ್ಯಸ್ಥ ರತನ್ ಟಾಟಾ ಸ್ಥಾಪಿಸಿದ ಕಂಪನಿಯಾಗಿದೆ ಎಲೆಕ್ಟ್ರಾ EV. ಇದು ಎಲೆಕ್ಟ್ರಿಕ್ ವೆಹಿಕಲ್ ಪವರ್‌ಟ್ರೇನ್ ಪರಿಹಾರ ಕಂಪನಿಯಾಗಿದೆ. EV ಚಾರ್ಜರ್ ತಂತ್ರಜ್ಞಾನವನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಎರಡೂ ಕಂಪನಿಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಪರಿಹಾರಕ್ಕಾಗಿ ಕಂಪನಿಗಳು ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿವೆ. ಈ ಪರಿಹಾರವು ಎಲೆಕ್ಟ್ರಿಕ್ ವಾಹನಗಳ ಡಿಸಿ ಚಾರ್ಜಿಂಗ್ ಅನ್ನು ವೇಗವಾಗಿ ಮಾಡಲು ಸಹಾಯ ಮಾಡುತ್ತದೆ.

    ಪ್ರತಿ ಕುಸಿತದಲ್ಲಿ ಪಿಎಸ್​ಯು ಷೇರು ಖರೀದಿಸಿ; ಪವರ್, ರಿಯಲ್ ಎಸ್ಟೇಟ್ ಷೇರು ಬೆಳಗಲಿವೆ.. ತಜ್ಞರ ಸಲಹೆ

    ಟ್ಯಾಕ್ಸ್​ ಪಾವತಿದಾರರಿಗೆ ದೊಡ್ಡ ಸುದ್ದಿ… ಬೇಗನೆ ಕೆಲಸ ಮುಗಿಸಿಕೊಳ್ಳಲು 3 ಫಾರ್ಮ್​ಗಳು ಲಭ್ಯ..

    ಈ ಕಣ್ಣುಗಳ ಹೊಳಪಿನ ಮುಂದೆ ಪ್ರಪಂಚದ ಎಲ್ಲಾ ಸಂಪತ್ತು ಮಸುಕಾಗುತ್ತದೆ: ಗೌತಮ್​ ಅದಾನಿ ಭಾವುಕರಾಗಿ ಹೀಗೆ ಹೇಳಿದ್ದು ಯಾರ ಬಗ್ಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts