More

    ರೈಲಿನಲ್ಲಿ ಪ್ರಯಾಣಿಸುವಾಗ ಇಲಿ ಕಡಿತ: ಸಂತ್ರಸ್ತೆಗೆ 20 ಸಾವಿರ ರೂ. ಪರಿಹಾರ ನೀಡಲು ಆದೇಶ

    ಕೊಯಿಕ್ಕೋಡ್​: ರೈಲಿನಲ್ಲಿ ಪ್ರಯಾಣಿಸುವಾಗ ಇಲಿಯ ಕಡಿತದಿಂದ ಬಳಲಿದ ಪ್ರಯಾಣಿಕಳಿಗೆ 20 ಸಾವಿರ ರೂ. ಪರಿಹಾರ ನೀಡುವಂತೆ ಕೊಯಿಕ್ಕೋಡ್ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಭಾರತೀಯ ರೈಲ್ವೆ ಇಲಾಖೆಗೆ ಆದೇಶಿಸಿದೆ.

    ದೂರು ನೀಡಿದ ಸಂತ್ರಸ್ತ ಮಹಿಳೆಯನ್ನು ಛರೋಡ್​ ನಿವಾಸಿ ಸಲೇ ಜೇಮ್ಸ್​ ಎಂದು ಗುರುತಿಸಲಾಗಿದೆ. ಹೈದರಬಾದ್​ನ ಕಾಚಿಗುಡದಿಂದ ಕೇರಳದ ವಡಕರಕ್ಕೆ 2016ರಲ್ಲಿ ಪ್ರಯಾಣಿಸಿದ್ದಳು. ರೈಲಿನಲ್ಲಿ ಮಲಗಿದ್ದ ಸಮಯದಲ್ಲಿ ಬೆಳಗಿನ ಜಾವ ಸುಮಾರು 3 ಗಂಟೆಯ ಸಮಯದಲ್ಲಿ ಇಲಿಯೊಂದು ಆಕೆಯ ಎಡಗೈ ಕಚ್ಚಿತ್ತು. ರೈಲು ಶೊರ್ನೂರ್​ ನಿಲ್ದಾಣದಲ್ಲಿ ನಿಲ್ಲಿಸಿದಾಗ ಈ ಸಂಗತಿಯನ್ನು ಟಿಟಿಇ (ಪ್ರಯಾಣ ಟಿಕೆಟ್ ಪರೀಕ್ಷಕ) ಬಳಿ ಹೇಳಿದ್ದರು. ರೈಲ್ವೆ ಡಾಕ್ಟರ್​ ಬಂದಾಗ ಅವರು ಇಂಟ್ರಾಡರ್ಮಲ್ ರೇಬೀಸ್ ಲಸಿಕೆ ಪಡೆಯುವಂತೆ ಸೂಚನೆ ನೀಡಿದ್ದರು. ಬಳಿಕ ವಡಕರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪೆದುಕೊಂಡಿದ್ದಳು.

    ದೂರುದಾರರು ಪ್ರಯಾಣಿಸಿದ ಎರಡನೇ ಎಸಿ ಕೋಚ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ ಮತ್ತು ಇಲಿ ಹೊರಗಿನಿಂದ ಲಗೇಜ್‌ ಮೂಲಕ ಪ್ರವೇಶಿಸಿರಬಹುದು ಎಂದು ರೈಲ್ವೆ ಇಲಾಖೆ ವಾದಿಸಿತ್ತು. ಆದರೆ, ರೈಲ್ವೆಯ ನಿರ್ಲಕ್ಷ್ಯ ಮತ್ತು ಗುಣಮಟ್ಟವಿಲ್ಲದ ಸೇವೆಯಿಂದ ದೂರುದಾರರು ಇಲಿ ಕಡಿತಕ್ಕೆ ಒಳಗಾಗಿದ್ದಾರೆ ಎಂಬುದನ್ನು ಆಯೋಗ ಗಮನಿಸಿತ್ತು.

    20,000 ರೂ. ಪರಿಹಾರದ ಜೊತೆಗೆ ಆಯೋಗವು ಆಕೆಯ ಚಿಕಿತ್ಸೆಯ ವೆಚ್ಚಕ್ಕೆ 1,000 ರೂ. ಮತ್ತು ಕಮಿಷನ್ ವೆಚ್ಚಕ್ಕಾಗಿ ರೂ. 2,000 ನೀಡುವಂತೆ ರೈಲ್ವೆಗೆ ನಿರ್ದೇಶನ ನೀಡಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. (ಏಜೆನ್ಸೀಸ್​)

    ವಿಜಯ್​ ಜತೆ ಮಾಡಲು ಬಯಸುತ್ತೇನೆ! ಬೋಲ್ಡ್​ ಹೇಳಿಕೆ ನೀಡಿದ ತಮಿಳು ನಟಿ ರೇಷ್ಮಾ ಪಸುಪುಲೇತಿ

    ಬಸ್ ನಿಲ್ಲಿಸುವ ವಿಚಾರದಲ್ಲಿ ಕಿತ್ತಾಟ… ಕಿರಿಕ್ ಮಾಡಿದ್ದಾತ ಪೊಲೀಸರ ಅತಿಥಿಯಾದ! ಏನಿದು ಪ್ರಕರಣ?

    ಹಿಂದುಗಳಿಗೆ ಮಾತ್ರ ಪ್ರವೇಶ! ದೇವರ ದರ್ಶನ ಸಿಗದಿದ್ದಕ್ಕೆ ಎಂಟ್ರಿ ಬುಕ್​ನಲ್ಲಿ ಖಡಕ್​ ಪ್ರತಿಕ್ರಿಯೆ ಕೊಟ್ಟ ಅಮಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts