More

    ಭೂ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ

    ಶೃಂಗೇರಿ: ಭೂ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಮಲೆನಾಡು ಹಕ್ಕುಗಳ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ಗೆ ಮನವಿ ಸಲ್ಲಿಸಿದರು.

    ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಮಾತನಾಡಿ, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಜನ ಸಾಮಾನ್ಯರು ಹಾಗೂ ರೈತರ ಬದುಕು ತಾಲೂಕಿನಲ್ಲಿ ಅತಂತ್ರಸ್ಥಿತಿಯಲ್ಲಿದೆ. 2005ರಲ್ಲಿ ಅಂದಿನ ಸರ್ಕಾರ ಮೀಸಲು ಅರಣ್ಯ ಎಂದು ಘೋಷಿಸಲಾದ ಸುಮಾರು 55,000 ಹೆಕ್ಟೇರ್‌ನ ಒಟ್ಟು ಪ್ರದೇಶಗಳಲ್ಲಿ 10,000 ಹೆಕ್ಟೇರ್ ವ್ಯಾಪ್ತಿಯನ್ನು ಹೊರತು ಪಡಿಸಿ ಪರಿಷ್ಕೃತ ಆದೇಶ ಹೊರಡಿಸಲು ಅಂದಿನ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಈ ಕುರಿತು ಮತ್ತೊಮ್ಮೆ ತಾವು ಪರಿಶೀಲನೆ ಮಾಡಿ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.
    ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪ್ರತಿಕ್ರಿಯಿಸಿ, ಈ ಹಿಂದೆ ಟಾಸ್ಕ್‌ಪೋರ್ಸ್ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿತ್ತು. ಈ ಸಂಬಂಧ ಸೂಕ್ತ ಕ್ರಮವನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು. ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಈಗಾಗಲೇ ಉಸ್ತುವಾರಿ ಸಚಿವ ಕೆ.ಕೆ.ಜಾರ್ಜ್ ಬಳಿ ಈ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ಒಂದು ವಾರದೊಳಗೆ ಶೃಂಗೇರಿಯಲ್ಲಿ ಡಿಎಫ್‌ಓ ಹಾಗೂ ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳ ಸಭೆ ಕರೆದು ರೈತರಿಗೆ ಹಾಗೂ ವಾಸದ ಮನೆ ಹೊಂದಿದವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಭರವಸೆ ನೀಡಿದರು.
    ಸಮಿತಿ ಪದಾಧಿಕಾರಿಗಳಾದ ಎಚ್.ಟಿ.ಮಂಜುನಾಥ್ ನಾಯ್ಕ, ಅಂಗುರ್ಡಿ ದಿನೇಶ್, ಎಚ್.ಎಸ್.ಸುಬ್ರಹ್ಮಣ್ಯ, ಬೆಳಂದೂರು ನಾಗೇಂದ್ರ, ಗಿರೀಶ್ ಹುಕ್ಕಳಿ, ಮಹಾಬಲ ಭೀಡೆ, ಕೋಟೆ ವೆಂಕಟೇಶ್, ಸದಾನಂದ ಇದ್ದರು.

    ಮಲೆನಾಡಿನ ಜನಸಾಮಾನ್ಯರನ್ನು ಹಾಗೂ ಸಣ್ಣ ಹಿಡುವಳಿದಾರರನ್ನು ಮಾತ್ರ ಇಲಾಖೆಗಳು ಟಾರ್ಗೆಟ್ ಮಾಡುತ್ತಿದ್ದು, ತೊಂದರೆ ನೀಡುತ್ತಿವೆ. ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ಹತ್ತು ಸಾವಿರ ಹೆಕ್ಟೇರ್ ಜತೆಗೆ ಅಗತ್ತ್ಯಾನುಸಾರ ಹೆಚ್ಚುವರಿ ಪ್ರದೇಶವನ್ನು ಮೀಸಲು ಅರಣ್ಯದಿಂದ ಹೊರತು ಪಡಿಸಲು ಅವಕಾಶವಿದೆ. ಸರ್ಕಾರ ಜನಸಾಮಾನ್ಯರ ಮತ್ತು ರೈತರ ಬದುಕಿನ ಕುರಿತು ಗಂಭೀರವಾಗಿ ಚಿಂತನೆ ಮಾಡಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು.
    ಅಂಬ್ಲೂರು ರಾಮಕೃಷ್ಣ,
    ಮಲೆನಾಡು ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts