More

    ವಿದ್ಯುತ್ ಬೇಲಿಗೆ ಸಿಲುಕಿ ಚಿರತೆ ಸಾವು

    ಹೊಲದಲ್ಲೇ ಪ್ರಾಣಿ ಹೂತಿಟ್ಟಿದ್ದ ಮೂವರ ಬಂಧನ | ಜಮೀನು ಮಾಲೀಕನ ಪತ್ತೆಗೆ ಹುಡುಕಾಟ

    ಕೊಟ್ಟೂರು: ಪಟ್ಟಣ ಸಮೀಪದ ಚಿರಬಿ ಬಳಿಯ ಹೊಲಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿಬೇಲಿ ತಾಗಿ ಸಾವಿಗೀಡಾಗಿದ್ದ ಚಿರತೆಯನ್ನು ಜಮೀನಿನಲ್ಲೇ ಹೂತಿಟ್ಟಿದ್ದ ಪ್ರಕರಣ ತಡವಾಗಿ ಬೆಳಕಿದೆ ಬಂದಿದೆ.

    ಘಟನೆ ಹಿನ್ನೆಲೆ: ವರ್ತಕ ಸುಮರ್ ಮಿಲ್ ತಮ್ಮ ಹೊಲಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿಯಿಂದ ಈಚೆಗೆ ಮರಣ ಹೊಂದಿದ್ದ ಚಿರತೆಯನ್ನು ಸುಮರ್ ಮತ್ತಿತರರು ಹೊಲದಲ್ಲೇ ಹೂತಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿರುವ ಉಪ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಬು ಮೇದ, ಕೂಡ್ಲಿಗಿ ತಾಲೂಕು ವಲಯ ಅರಣ್ಯಾಧಿಕಾರಿ ಬಿ.ಎಸ್. ಮಂಜುನಾಥ, ಉಪವಲಯ ಅರಣ್ಯಾಧಿಕಾರಿ ವೆಂಕಟೇಶ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಬೇರ್, ಶುಕ್ರವಾರ ಚಿರತೆ ಸಮಾಧಿ ಪತ್ತೆ ಹಚ್ಚಿ ಅದನ್ನು ಕುಣಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಪ್ಪ, ಹನುಮಂತ, ಮಲ್ಲೇಶ, ಹೊಲದ ಮಾಲೀಕ ಸುಮರ್ ಮಿಲ್ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಕೇಸ್ ದಾಖಲಿಸಿದ್ದಾರೆ. ಹೊಲದ ಮಾಲೀಕ ಸುಮರ್ ಮಿಲ್ ತಲೆ ಮರೆಸಿಕೊಂಡಿದ್ದು, ರಾಜಪ್ಪ, ಹನುಮಂತ, ಮಲ್ಲೇಶನನ್ನು ಬಂಧಿಸಲಾಗಿದೆ. ಇದೇ ಹೊಲದಲ್ಲಿನ ಮನೆಯಲ್ಲಿ ಮತ್ತೊಂದು ಚಿರತೆ ಚರ್ಮ ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಅರಣ್ಯ ಇಲಾಖೆ ಬಲೆ ಬೀಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts