More

    ಆಸ್ತಿ ತೆರಿಗೆ ಲೆಕ್ಕಾಚಾರದಲ್ಲಿ ತಪ್ಪು ಸರಿಪಡಿಸಬೇಕು

    ರಾಯಚೂರು: ಆಸ್ತಿ ತೆರಿಗೆ ಲೆಕ್ಕಾಚಾರದಲ್ಲಿ ಕೆಲವು ತಪ್ಪುಗಳಿದ್ದು, ಉದ್ಯಮ ವಾಣಿಜ್ಯೇತರ ದರದಲ್ಲಿ ತೆರಿಗೆಯನ್ನು ಪಾವತಿಸಬೇಕು. ಅದನ್ನು ನಗರಸಭೆ ಪರಿಗಣಿಸಬೇಕು ಎಂದು ತೆರಿಗೆ ಸಲಹೆಗಾರ ವಾಸುದೇವ ಸಾಚಾರ್ ಹೇಳಿದರು.
    ಸ್ಥಳೀಯ ಆಶಾಪುರ ಂಕ್ಷನ್ ಹಾಲ್‌ನಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಘದಿಂದ ಗುರುವಾರ ಸಂಜೆ ಏರ್ಪಡಿಸಿದ್ದ ತೆರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಗರಸಭೆಯ ತೆರಿಗೆ ಲೆಕ್ಕಾಚಾರದಲ್ಲಿ ಸಾಕಷ್ಟು ತಪ್ಪುಗಳು ನಡೆದಿದ್ದು, ಅದನ್ನು ಸರಿಪಡಿಸಬೇಕಾಗಿದೆ ಎಂದರು.
    ಆಸ್ತಿ ತೆರಿಗೆದಾರರ ಸಮಿತಿ ಅಧ್ಯಕ್ಷ ರಾಮಚಂದ್ರ ಪ್ರಭು ಮಾತನಾಡಿ, ಸೆಕ್ಷನ್ 45ರ ಅಡಿಯಲ್ಲಿ ತೆರಿಗೆ ವೌಲ್ಯಮಾಪನವನ್ನು ಪ್ರಶ್ನಿಸಬೇಕು. ಸರಿಯಾದ ತೆರಿಗೆ ದರವನ್ನು ಪಡೆಯಬೇಕು. ತೆರಿಗೆ ಲೆಕ್ಕಾಚಾರದಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
    ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಎಸ್.ಕಮಲಕುಮಾರ ಮಾತನಾಡಿ, ಜೆಸ್ಕಾಂ ವಿದ್ಯುತ್ ಶುಲ್ಕದಲ್ಲಿ ಅಸಹಜ ಹೆಚ್ಚಳ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಜತೆಗೆ ವ್ಯಾಪಾರಿಗಳಿಗೆ ಸಂಬಂಸಿದ ಸಮಸ್ಯೆಗಳು, ಪರವಾನಗಿ ಸೇರಿದಂತೆ ಅನೇಕ ಸಮಸ್ಯೆಗಳ ನಿವಾರಣೆಗೆ ಸಂಘ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಸಂಸ್ಥೆ ಉಪಾಧ್ಯಕ್ಷ ಯಶವಂತರಾಜ್, ಕಾರ್ಯದರ್ಶಿ ವೈ.ಜಂಬಣ್ಣ ಹಾಗೂ ನಗರದ ಉದ್ಯಮಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts