More

    ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವ, ತೈಲಾಭಿಷೇಕ ರದ್ದು: ಉಜ್ಜಿನಿ ಸದ್ಧರ್ಮ ಪೀಠ ಮಾಹಿತಿ

    ಕೊಟ್ಟೂರು: ಕರೊನಾ ಹಿನ್ನೆಲೆಯಲ್ಲಿ ಭಕ್ತರ ಹಿತದೃಷ್ಟಿಯಿಂದ ಉಜ್ಜಿನಿ ಸದ್ಧರ್ಮ ಪೀಠದಲ್ಲಿ ಮೇ 17 ಹಾಗೂ 18ರಂದು ನಡೆಯಬೇಕಿದ್ದ ಮರುಳಸಿದ್ಧೇಶ್ವರ ರಥೋತ್ಸವ ಮತ್ತು ತೈಲಾಭಿಷೇಕವನ್ನು ರದ್ದುಪಡಿಸಲಾಗಿದೆ. ಕರೊನಾ ಎರಡನೇ ಅಲೆ ಭೀಕರವಾಗಿದ್ದು, ಸಾಕಷ್ಟು ಜನರು ಸಾವಿಗೀಡಾಗುತ್ತಿದ್ದಾರೆ, ಬಡ ಜನರ ಬದುಕು ದುಸ್ತರವಾಗಿದೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಹೀಗಾಗಿ ರಥೋತ್ಸವ ಹಾಗೂ ತೈಲಾಭಿಷೇಕ ನಡೆಸುತ್ತಿಲ್ಲ. ಉಜ್ಜಿನಿ ಸದ್ಧರ್ಮ ಪೀಠವು ದಾರುಕಾಚಾರ್ಯರ ಪರಂಪರೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಲಕ್ಷಾಂತರ ಭಕ್ತರು ಶ್ರೀಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ಮತ್ತು ತೈಲಾಭಿಷೇಕಕ್ಕೆ ಆಗಮಿಸುವುದರಿಂದ ದೈಹಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟ. ಆದ್ದರಿಂದ ಶ್ರೀ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮಠದ ವ್ಯವಸ್ಥಾಪಕ ವೀರೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts