More

    “ಮಾನವಕುಲ ಎದುರಿಸುತ್ತಿರುವ ತೊಂದರೆಗಿಂತ ಇದೇನು ದೊಡ್ಡ ಟ್ರಬಲ್ ಅಲ್ಲ’; ಹೀಗೆಂದು ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು ಏಕೆ ಗೊತ್ತಾ..!

    ಬೆಂಗಳೂರು: ಕಿಚ್ಚ ಸುದೀಪ್​ ನಟನೆಯ ಚಿತ್ರ ಕೋಟಿಗೊಬ್ಬ 3 ಟೀಸರ್ ಯೂಟ್ಯೂಬ್​ನಿಂದ ತೆಗೆಯಲಾಗಿದೆ. ನಿರ್ಮಾಪಕ ಸೂರಪ್ಪ ಬಾಬು ಹಾಗೂ ಸಂಜಯ್ ಪೌಲ್ ನಡುವಿನ ಗಲಾಟೆಯಿಂದ ಟ್ರೇಲರ್​ ಎತ್ತಂಗಡಿಯಾಗಿದೆ.

    ಇತ್ತೀಚೆಗಷ್ಟೆ ಟೀಸರ್ ಬಿಡುಗಡೆ ಆಗಿದ್ದು. ಯೂಟ್ಯೂಬ್​ನಲ್ಲಿ ಸಖತ್ ಸೌಂಡ್ ಮಾಡಿತ್ತು. ಆದರೆ, ಸಂಜಯ್ ಕುಮಾರ್​ ಪೌಲ್ ಎಂಬುವವರು ಕೋಟಿಗೊಬ್ಬ 3 ಟೀಸರ್ ಕಾಪೀ ರೈಟ್ಸ್ ಬಗ್ಗೆ ದೂರು ನೀಡಿದ್ದಾರೆ. ಹೀಗಾಗಿ ಯುಟ್ಯೂಬ್​ನಿಂದ ಲೇಟೆಸ್ಟ್ ಟೀಸರ್ ಕಾಣೆಯಾಗಿದೆ.

    ಯುಟ್ಯೂಬ್​ನಿಂದ ಕೋಟಿಗೊಬ್ಬ 3 ಟೀಸರ್ ತೆಗೆದಿರುವ ಬಗ್ಗೆ ಸುದೀಪ್ ಟ್ವೀಟರ್​ನಲ್ಲಿ ಪ್ರತಿಕ್ರಿಯಿಸಿದ್ದಾರೆ. “ಸದ್ಯ ಮಾನವಕುಲ ಎದುರಿಸುತ್ತಿರುವ ತೊಂದರೆಗಿಂತ ಇದೇನು ದೊಡ್ಡ ಟ್ರಬಲ್ ಅಲ್ಲ. ಟೀಸರ್ ಆದಷ್ಟು ಬೇಗ ಮತ್ತೆ ಯುಟ್ಯೂಬ್​ನಲ್ಲಿ ಅಪ್​ಲೋಡ್ ಆಗುತ್ತೆ. ರಿಲೀಸ್ ಕೂಡ ಸಮಯ ಬಂದಾಗ ಅಗುತ್ತೆ” ಎಂದಿದ್ದಾರೆ.

    ಟೀಸರ್ ಯೂಟ್ಯೂಬ್​ನಿಂದ ತೆಗೆದ ಬಗ್ಗೆ ಸುದೀಪ್ ಇಂಗ್ಲಿಷ್​ನಲ್ಲಿ ಟ್ವಿಟ್ ಮಾಡಿರುವ ಬಗ್ಗೆ ಸಂಜಯ್ ಎಸ್.ಕೆ, ಎನ್ನುವವರು ಕೆಟ್ಟದಾಗಿ ಬರೆದಿದ್ದಾರೆ. ಇದಕ್ಕೆ ಸುದೀಪ್ ರೀಟ್ವೀಟ್ ಮಾಡಿ “ಯಾರಾದ್ರು ಈ ವ್ಯಕ್ತಿಯನ್ನು ಹುಡುಕಿಕೊಡಿ, ಅವರ ಜತೆ ಮೀಟ್ ಅಂಡ್ ಗ್ರೀಟ್ ಮಾಡಿ ಹೇಗೆ ಮಾತನಾಡಬೇಕು ಎನ್ನುವುದನ್ನು ಹೇಳಿಕೊಡ್ತಿನಿ” ಎಂದು ನಯವಾಗಿಯೇ ಪ್ರತ್ಯುತ್ತರ ನೀಡಿದ್ದಾರೆ.

    ಸುದೀಪ್​ಗೆ ಚಂದನ್ ಹೇರ್ ಕಟ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts