More

    ಸಿಂಧನೂರಿಗೆ ಶೀಘ್ರವೇ ರೈಲು ಸಂಚಾರ

    ಸಿಂಧನೂರು: ನಗರದಲ್ಲಿ ಆದಷ್ಟು ಶೀಘ್ರವೇ ರೈಲು ಸಂಚಾರ ಆರಂಭಿಸುವ ನಿಟ್ಟಿನಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.

    ತುರ್ತು ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ

    ತಾಲೂಕಿನ ಸಾಸಲಮರಿಕ್ಯಾಂಪ್ ಬಳಿ ಭಾನುವಾರ ರೈಲ್ವೆ ಯೋಜನೆಯ ಸೇತುವೆ ನಿರ್ಮಾಣ ಕಾಮಗಾರಿಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಚಾಲನೆ ನೀಡಿದರು. ರೈಲು ಕಾಮಗಾರಿ ನಿರೀಕ್ಷೆಯಂತೆ ಆಗಿಲ್ಲ. ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿ ಮುಗಿಯಲಿದೆ. 2024ರ ಜನವರಿಯಲ್ಲಿ ರೈಲು ಸಂಚಾರ ಆರಂಭಿಸಲಾಗುವುದು ಎಂದರು.

    ಇದನ್ನೂ ಓದಿ:

    ಸ್ಥಳದಲ್ಲಿ ಕಾಮಗಾರಿ ವಿಳಂಬ, ರೈಲ್ವೆ ಹಳಿ ಪಕ್ಕದಲ್ಲಿ ಮರಂ ಹಾಕುವುದು ಸೇರಿದಂತೆ ಇತರ ಕೆಲಸಗಳಲ್ಲಿನ ಲೋಪವನ್ನು ಪತ್ರಕರ್ತರು ಪ್ರಶ್ನಿಸುತ್ತಿದ್ದಂತೆ ಅಧಿಕಾರಿಗಳು ಎಲ್ಲ ಮಾಡಿದ್ದೇವೆಂದು ತಪ್ಪು ಮಾಹಿತಿ ನೀಡಿದರು. ಇದಕ್ಕೆ ಸಂಸದರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಸರಿಯಾದ ಮಾಹಿತಿ ನೀಡಬೇಕು. ಯೋಜನೆ ವಿಳಂಬಕ್ಕೆ ಅವಕಾಶ ನೀಡುವುದಿಲ್ಲ ಎಂದರು.

    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನುಮತಿ ನೀಡಿದ ದೆಹಲಿ ಕೋರ್ಟ್; ದುಬೈಗೆ ಹಾರಲು ಡಿಕೆಶಿ ಸಜ್ಜು

    ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ವೀರಪ್ಪ ಕೆಸರಟ್ಟಿ, ಜಿಪಂ ಮಾಜಿ ಸದಸ್ಯ ಅಮರೇಗೌಡ ವಿರೂಪಾಪುರ, ಮಾಜಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಉದ್ಯಮಿ ರಾಜೇಶ ಹಿರೇಮಠ, ರೈಲ್ವೆ ಯೋಜನೆಯ ಸಿಇ ವೆಂಕಟೇಶ್ವರ, ಎಇಇ ಉಮಾಮಹೇಶ್ವರ, ಬಿಜೆಪಿ ಮಂಡಲ ಅಧ್ಯಕ್ಷ ಹನುಮೇಶ ಸಾಲಗುಂದ, ನಗರ ಮಂಡಲ ಅಧ್ಯಕ್ಷ ನಿರುಪಾದಿ ಜೋಳದರಾಶಿ, ಪ್ರಮುಖರಾದ ಮಲ್ಲಿಕಾರ್ಜುನ ಜೀನೂರು, ಬಸವರಾಜ ಹರಸೂರು, ಜಡಿಯಪ್ಪ ವಕೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts