More

    ಹಣ ದೋಚಿ ಪರಾರಿಯಾಗಿದ್ದವ ಪೊಲೀಸ್ ಬಲೆಗೆ

    ಕೊಪ್ಪಳ: ಕಡಿಮೆ ಬೆಲೆಗೆ ಭೂಮಿ ಕೊಡಿಸುವುದಾಗಿ ದಂಪತಿಯನ್ನು ನಂಬಿಸಿ 8.5 ಲಕ್ಷ ರೂ.ದೋಚಿ ಪರಾರಿಯಾಗಿದ್ದ ಕಳ್ಳನನ್ನು ಅಳವಂಡಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದು, 6,97,800 ರೂ. ನಗದು ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆದಿದ್ದಾರೆ.

    ಹರಪನಳ್ಳಿ ಮೂಲದ ಕೆ.ಮಲ್ಲಿಕಾರ್ಜುನ ಬಂಧಿತ. ಇ.ರವಿ ಹಾಗೂ ಇತರ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆಂಧ್ರ ಮೂಲದ ವಂಜಗಲಿ ಅಂಜಿ ಎಂಬುವರೊಂದಿಗೆ ಸ್ನೇಹ ಬೆಳಸಿದ್ದ ಇ.ರವಿ ತಾನು ಶಿವಮೊಗ್ಗದವನೆಂದು ಪರಿಚಯಿಸಿಕೊಂಡಿದ್ದಾನೆ. ಶಿವಮೊಗ್ಗದಲ್ಲಿ ಕಡಿಮೆ ಬೆಲೆಗೆ ಭೂಮಿ ದೊರೆಯುತ್ತಿದ್ದು, ನರ್ಸರಿ ಮಾಡಿದರೆ ಲಾಭ ಮಾಡಬಹುದು. ನೀವು ಹಣ ನೀಡಿ ಖರೀದಿಸಿ. ನಾನೇ ನರ್ಸರಿ ನೋಡಿಕೊಳ್ಳುತ್ತೇನೆಂದು ಸುಳ್ಳು ಹೇಳಿ ನಂಬಿಸಿದ್ದಾನೆ. ಕಳೆದ ಜ.30ರಂದು ವಂಜಗಲಿ ಅಂಜಿ ಹಾಗೂ ಆತನ ಪತ್ನಿಯನ್ನು ಕೊಪ್ಪಳಕ್ಕೆ ಕರೆಸಿಕೊಂಡು ಮಾತನಾಡಿದ್ದಾನೆ. ದಂಪತಿ ಕಾರಿನಲ್ಲಿ ವಾಪಸ್ ಹಣವಾಳ ಗ್ರಾಮಕ್ಕೆ ತೆರಳುವಾಗ ಕೆ.ಮಲ್ಲಿಕಾರ್ಜುನ, ಇ.ರವಿ ಹಾಗೂ ಇತರ ನಾಲ್ವರೊಂದಿಗೆ ಕಾರ್ ಅಡ್ಡಗಟ್ಟಿ, ಹಲ್ಲೆ ನಡೆಸಿ ಅವರ ಬಳಿ ಇದ್ದ 8.5 ಲಕ್ಷ ರೂ. ನಗದು ಹಾಗೂ 2 ಮೊಬೈಲ್ ಕಸಿದುಕೊಂಡು ಓಡಿ ಹೋಗಿದ್ದರು.

    ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಅಳವಂಡಿ ಠಾಣೆ ಪೊಲೀಸರು ವಂಚಕರಿಗಾಗಿ ಬಲೆ ಬೀಸಿದ್ದರು. ಕೆ. ಮಲ್ಲಿಕಾರ್ಜುನ ಹರಪನಳ್ಳಿ ತಾಲೂಕು ಯಲ್ಲಾಪುರ ಗ್ರಾಮದಲ್ಲಿರುವ ಸುಳಿವು ಅರಿತು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts