More

    ನನಗೂ ಓರ್ವ ಆಪ್ತ ಸಹಾಯಕ ಬೇಕು: ಸರ್ಕಾರಕ್ಕೆ ಗ್ರಾಪಂ ಅಧ್ಯಕ್ಷೆ ಮನವಿ

    ಕೊಪ್ಪಳ: ಸಚಿವರು ಮತ್ತು ಶಾಸಕರಿಗೆ ಇರುವಂತೆ ನನಗೂ ಓರ್ವ ಆಪ್ತ ಸಹಾಯಕನನ್ನು ನೇಮಕ ಮಾಡಿಕೊಡಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬಳು ಪತ್ರ ಬರೆದಿರುವ ವಿನೂತನ ಪ್ರಸಂಗ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

    ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿದ್ದರು ನನ್ನಗೆ ಓದಲು, ಬರೆಯಲು ಬರುವುದಿಲ್ಲ. ಸಂಪೂರ್ಣ ಅನಕ್ಷರಸ್ಥೆಯಾಗಿರುವ ಕಾರಣ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನಗೆ ಸರ್ಕಾರದಿಂದ ಓರ್ವ ಆಪ್ತ ಸಹಾಯಕನನ್ನು ನೇಮಕ ಮಾಡಿ ಕೊಡಿ ಎಂದು ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾ ಶರಣು ಹಾವೇರಿ ಅವರು ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಾನಾ ಅಭಿವೃದ್ದಿ ಕಾರ್ಯಕ್ರಮಗಳನ್ನು ಸ್ಥಳೀಯ ಸರ್ಕಾರವಾಗಿರುವ ಗ್ರಾಮ ಪಂಚಾಯತಿ ಮೂಲಕ ಅನುಷ್ಟಾನಗೊಳ್ಳಿಸಬೇಕಾದ ಪ್ರಮುಖ ಜವಬ್ದಾರಿಯು ಗ್ರಾಪಂ ಅಧ್ಯಕ್ಷರ ಮೇಲಿರುತ್ತದೆ. ಆದರೆ ನನಗೆ ಸರ್ಕಾರಿ ಆದೇಶ ಪತ್ರಗಳನ್ನು ಓದಲು, ಬರೆಯಲು ಬರದೇ ಇರುವ ಕಾರಣ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ. ಈ ಕಾರಣದಿಂದ ಸರ್ಕಾರ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಆಡಳಿತ್ಮಾಕ ದೃಷ್ಟಿಯಿಂದ ಓರ್ವ ಆಪ್ತ ಸಹಾಯಕನನ್ನು ನೇಮಕ ಮಾಡುವುದಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ನನ್ನ ಮನವಿಗೆ ಸ್ಪಂದಿಸಬೇಕಾಗಿದೆ ಎಂದು ಶಾಂತಾ ಶರಣು ಕೇಳಿಕೊಂಡಿದ್ದಾರೆ.

    ಗ್ರಾಮ ಪಂಚಾಯತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥ ಹೆಣ್ಣು ಮಕ್ಕಳು ಅಧ್ಯಕ್ಷರಾಗಿದ್ದು, ಅಧಿಕಾರಿಗಳು ಸಭೆಯಲ್ಲಿ ಏನು ಹೇಳುತ್ತಾರೋ ಅದನ್ನು ಕೇಳಿಕೊಂಡು ಬರಬೇಕಾದ ಪರಸ್ಥಿತಿ ಇದೆ. ಕೆಲ ಅಧಿಕಾರಿಗಳು ಅನಕ್ಷರಸ್ಥ ಅಧ್ಯಕ್ಷರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಕೆಲ ಸಮಯದಲ್ಲಿ ಮಾಡದ ತಪ್ಪಿಗೆ ಅಧ್ಯಕ್ಷರು ಹೊಣೆಯನ್ನು ಹೊತ್ತುಕೊಂಡು ಕಾನೂನಿನ ಕ್ರಮ ಎದುರಿಸಬೇಕಾಗುತ್ತದೆ. ವಿವಿಧ ಇಲಾಖೆಯಿಂದ ನಡೆಯುವ ಕಾಮಗಾರಿ ಅಂದಾಜು ಪತ್ರಿಕೆಗಳು ಆಂಗ್ಲಭಾಷೆಯಲ್ಲಿ ಇರುವುದು ಕಂಡು ಬಂದಿದೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಹೇಳಿದ ಹಾಗೇ ಕೇಳಿ ಸಹಿ ಮಾಡುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಈ ಎಲ್ಲ ಕಾರಣದಿಂದ ಅಧ್ಯಕ್ಷರಿಗೆ ಒಬ್ಬ ಆಪ್ತ ಸಹಾಯಕನನ್ನು ನೇಮಕ ಮಾಡುವ ಅವಶ್ಯಕತೆ ಇದೆ ಎನ್ನುವದು ಶಾಂತಾ ಶರಣು ಹಾವೇರಿಯವರ ಅಭಿಪ್ರಾಯವಾಗಿದೆ.

    ಗ್ರಾಪಂ ಅಧ್ಯಕ್ಷರಿಗೆ ಆಪ್ತ ಸಹಾಯಕನನ್ನು ನೇಮಕ ಮಾಡುವುದಕ್ಕೆ ಸದ್ಯದ ಕಾಯಿದೆಯಲ್ಲಿ ಅವಕಾಶ ಇಲ್ಲ. ಆಪ್ತ ಸಹಾಯಕರ ಅವಶ್ಯಕತೆ ಇದ್ದಲ್ಲಿ ಅಧ್ಯಕ್ಷರು ಖಾಸಗಿ ವ್ಯಕ್ತಿಯನ್ನು ತಮ್ಮ ಸ್ವಂತ ಹಣದಲ್ಲಿ ನೇಮಕ ಮಾಡಿಕೊಳ್ಳಬಹುದು. ಸಭೆಯಲ್ಲಿ ಆಪ್ತ ಸಹಾಯಕ ಗ್ರಾಪಂ ಎಲ್ಲ ಸದಸ್ಯರ ಅನುಮತಿ ಪಡೆದುಕೊಂಡು ಭಾಗವಹಿಸಬಹುದು. ಭಾಗವಹಿಸಿದರು ಸಭೆಯಲ್ಲಿ ಮಾತನಾಡುವದಕ್ಕೆ ಅವಕಾಶ ಇಲ್ಲ ಎನ್ನುವದು ಕಾನೂನು ತಜ್ಞರ ಅಭಿಪ್ರಾಯವಾಗಿದೆ. ಈ ಹಿಂದೆಯೂ ಇಂತಹ ಅಭಿಪ್ರಾಯಗಳು ಗ್ರಾಪಂ ಅಧ್ಯಕ್ಷರಿಂದ ಕೇಳಿ ಬಂದರೂ ಸರ್ಕಾರ ಇದರ ಬಗ್ಗೆ ಯಾವುದೇ ಸ್ಪಷ್ಟ ನಿರ್ಣಯ ಇದುವರೆಗೂ ಕೈಗೊಳ್ಳದಿರುವದನ್ನು ಗಮನಿಸಿದರೇ ಅಧ್ಯಕ್ಷರಿಗೆ ಆಪ್ತ ಸಹಾಯಕರ ನೇಮಕ ಅವಶ್ಯಕತೆ ಇಲ್ಲ ಎನ್ನುವ ಸಂದೇಶವನ್ನು ಸರ್ಕಾರ ರವಾನಿಸಿದಂತಾಗಿದೆ.

    ಖಾಸಗಿ ನಿವಾಸದ ಮೇಲೆ ದಾಳಿ ಮಾಡಿ ಹೈಟಿ ದೇಶದ ಅಧ್ಯಕ್ಷ ಜೊವೆನೆಲ್​ ಮೋಯಿಸ್​ ಹತ್ಯೆ

    ಮನ್​ ಕೀ ಬಾತ್ ಬದಲು ‘ಪೆಟ್ರೋಲ್​ ಕೀ ಬಾತ್’ ಮಾಡಿ: ಕೇಂದ್ರದ ವಿರುದ್ಧ ಗುಡುಗಿದ ದೀದಿ

    ಯುರೋಕಪ್‌ನಲ್ಲಿ ಸ್ಪೇನ್-ಇಟಲಿಯ ರೋಚಕ ಹಣಾಹಣಿಗೆ ಸಾಕ್ಷಿಯಾದ ಬುಮ್ರಾ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts