More

    ಬಿಜೆಪಿ ಶೋಷಿತರಿಗೆ ನ್ಯಾಯ ನೀಡಿಲ್ಲ

    ಕೊಪ್ಪಳ: ಹತ್ತು ವರ್ಷದಿಂದ ದೇಶದಲ್ಲಿ ಆಡಳಿತ ನಡೆಸಿದ ಬಿಜೆಪಿ ಶೋಷಿತರಿಗೆ ನ್ಯಾಯ ನೀಡಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಶೋಷಿತ ಸಮುದಾಯಗಳು ಬಿಜೆಪಿ ತಿರಸ್ಕರಿಸಬೇಕೆಂದು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಅಧ್ಯಕ್ಷ ಕರಿಯಪ್ಪ ಗುಡಿಮನಿ ಹೇಳಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

    ನಮ್ಮ ಪಾಲಿನ ಹಕ್ಕಿಗಾಗಿ ಮಾದಿಗ ಸಮುದಾಯ ಹತ್ತಾರು ವರ್ಷಗಳಿಂದ ಹೋರಾಡುತ್ತಿದೆ. ಒಳ ಮೀಸಲು ಜಾರಿ ಮಾಡಬೇಕೆಂಬುದು ನಮ್ಮ ಬಹುದಿನದ ಬೇಡಿಕೆ. ಇದಕ್ಕೆ ಆಳುವ ಸರ್ಕಾರಗಳು ಸ್ಪಂದಿಸಿಲ್ಲ. ರಾಜ್ಯದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿ ಮೀಸಲು ಹಂಚಿಕೆ ಮಾಡಿ ಕೇಂದ್ರಕ್ಕೆ ಶಿಾರಸ್ಸು ಮಾಡಿದೆ. ಈ ಸಂಬಂಧ ಸುಪ್ರೀಂ ಕೋರ್ಟ್​ನಲ್ಲಿ ದಾವೆ ಇದ್ದು, ಇನ್ನು ತೀರ್ಪು ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಶೋಷಿತರ ಏಳ್ಗೆಗಾಗಿ ಯಾವೊಂದು ಯೋಜನೆ ರೂಪಿಲಿಲ್ಲ. ಬದಲಿಗೆ ಕೋಮುವಾದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪಿಸಿದರು.

    ದೇಶದ ತಳಹದಿ ಸಂವಿಧಾನ. ಬಿಜೆಪಿಗರು ಅದನ್ನೇ ಬದಲಾವಣೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ಅಂಥವರ ಕೈಗೆ ಅಧಿಕಾರ ನೀಡಬಾರದು. ಜನತೆಗೆ ಅನುಕೂಲಕರ ಯೋಜನೆ, ಕಾಯ್ದೆ ತರಲು ಸಂವಿಧಾನಕ್ಕೆ ತಿದ್ದುಪಡಿ ತರಬಹುದು. ಆದರೆ, ಸಂಪೂರ್ಣ ಬದಲಾವಣೆ ಮಾಡುವುದು ಸರಿಯಲ್ಲ. ಇದನ್ನು ಶೋಷಿತ ಸಮುದಾಯಗಳು ಒಪು$್ಪವುದಿಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಬಿಜೆಪಿಯನ್ನು ತಿರಸ್ಕರಿಸುವಂತೆ ಕರೆ ನೀಡುತ್ತಿದ್ದೇವೆ. ಬದಲಾಗಿ ಕಾಂಗ್ರೆಸ್​ ಅಭ್ಯರ್ಥಿ ಬೆಂಬಲಿಸಲು ಮನವಿ ಮಾಡುತ್ತಿದ್ದೇವೆ. ಕೊಪ್ಪಳದಲ್ಲೂ ಕಾಂಗ್ರೆಸ್​ ಅಭ್ಯರ್ಥಿ ರಾಜಶೇಖರ ಹಿಟ್ನಾಳಗೆ ಮತ ಹಾಕುವಂತೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

    ಸಂಚಾಲಕರಾದ ದುರ್ಗೇಶ ಬರಗೂರು, ಯಮನೂರಪ್ಪ ಈಳಿಗನೂರು, ಧರ್ಮರಾಜ ಹಾಲವರ್ತಿ, ಶರಣಪ್ಪ ಈಳಿಗನೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts