More

    ಖಾಸಗಿ ನಿವಾಸದ ಮೇಲೆ ದಾಳಿ ಮಾಡಿ ಹೈಟಿ ದೇಶದ ಅಧ್ಯಕ್ಷ ಜೊವೆನೆಲ್​ ಮೋಯಿಸ್​ ಹತ್ಯೆ

    ಪೋರ್ಟ್​ ಔ ಪ್ರಿನ್ಸ್​ (ಹೈಟಿ): ಅಪರಿಚಿತ ಗುಂಪೊಂದು ಹೈಟಿಯನ್​ ಅಧ್ಯಕ್ಷ ಜೊವೆನೆಲ್​ ಮೋಯಿಸ್​ ಅವರ ಖಾಸಗಿ ನಿವಾಸದ ಮೇಲೆ ದಾಳಿ ಮಾಡಿ ಮೋಯಿಸ್​ ಅವರನ್ನು ಹತ್ಯೆ ಮಾಡಿರುವುದಾಗಿ ದೇಶದ ಹಂಗಾಮಿ ಪ್ರಧಾನಿ ಪತ್ರಿಕಾ ಹೇಳಿಕೆಯಲ್ಲಿ ಬುಧವಾರ ತಿಳಿಸಿದ್ದಾರೆ.

    ದಾಳಿಯಲ್ಲಿ ಹೈಟಿಯನ್​ ಪ್ರಥಮ ಮಹಿಳೆ ಮಾರ್ಟಿನ್​ ಮೋಯಿಸ್​ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳವಾರ ತಡರಾತ್ರಿ ನಿವಾಸದ ಮೇಲೆ ದಾಳಿ ನಡೆದಿದೆ ಎಂದು ಹಂಗಾಮಿ ಪ್ರಧಾನಿ ಕ್ಲೌಡ್​ ಜೋಸೆಫ್​ ಹೇಳಿದ್ದಾರೆ.

    ದುಷ್ಕೃತ್ಯವನ್ನು ಖಂಡಿಸಿರುವ ಜೋಸೆಫ್​ ಇದೊಂದು ದ್ವೇಷಪೂರಿತ, ಅಮಾನವೀಯ ಮತ್ತು ಅನಾಗರಿಕ ಕೃತ್ಯ ಎಂದಿದ್ದಾರೆ. ಹೈಟಿಯ ರಾಷ್ಟ್ರೀಯ ಪೊಲೀಸ್ ಮತ್ತು ಇತರ ಅಧಿಕಾರಿಗಳು ತೀವ್ರ ನಿಗಾವಹಿಸಿದ್ದು ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆಂದು ತಿಳಿಸಿದ್ದಾರೆ.

    11 ದಶಲಕ್ಷಕ್ಕೂ ಹೆಚ್ಚು ಜನರಿರುವ ರಾಷ್ಟ್ರವು ಮೋಯಿಸ್ ಆಳ್ವಿಕೆಯಲ್ಲಿ ಹೆಚ್ಚು ಅಸ್ಥಿರವಾಗಿ ಮತ್ತು ಅಸಮಾಧಾನಗೊಂಡಿದೆ ಎಂದು ತಿಳಿದುಬಂದಿದೆ. ಪೋರ್ಟ್ ಔ ಪ್ರಿನ್ಸ್‌ನ ರಾಜಧಾನಿಯಲ್ಲಿ ಸಾಮೂಹಿಕ ಹಿಂಸಾಚಾರವು ಹೆಚ್ಚಾಗುತ್ತಿರುವುದರಿಂದ, ಹಣದುಬ್ಬರ ಮತ್ತು ಆಹಾರ ಹಾಗೂ ಇಂಧನವು ವಿರಳವಾಗುತ್ತಿದೆ. ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳು ತೀವ್ರವಾಗಿದೆ ಎಂದು ವರದಿಯಾಗಿವೆ. (ಏಜೆನ್ಸೀಸ್​)

    ಮನ್​ ಕೀ ಬಾತ್ ಬದಲು ‘ಪೆಟ್ರೋಲ್​ ಕೀ ಬಾತ್’ ಮಾಡಿ: ಕೇಂದ್ರದ ವಿರುದ್ಧ ಗುಡುಗಿದ ದೀದಿ

    ಪ್ರಧಾನಿ ಮೋದಿ ನೂತನ ಸಚಿವ ಸಂಪುಟದಲ್ಲಿ 27 ಒಬಿಸಿ ಮಂತ್ರಿಗಳು

    ಮಂಚದ ಹಾಸಿಗೆ ಕೆಳಗೆ ಸುರಂಗ! ರಾತ್ರಿ ಎಸ್ಕೇಪ್‌ ಆಗಿ ಬೆಳಗ್ಗೆ ಬಂದ್ರೂ ಗೊತ್ತಾಗಲ್ಲ- ಇಲ್ಲಿದೆ ನೋಡಿ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts