More

    ಸಂಭ್ರಮದ ಎಳ್ಳಮವಾಸ್ಯೆ ಆಚರಣೆ, ಹೊಲದಲ್ಲಿ ಚರಗ ಚೆಲ್ಲಿದ ಅನ್ನದಾತರು

    ಕೊಪ್ಪಳ: ಜಿಲ್ಲಾದ್ಯಂತ ಗ್ರಾಮೀಣ ಭಾಗಗಳಲ್ಲಿ ಬುಧವಾರ ಜನರು ಸಂಭ್ರಮದಿಂದ ಎಳ್ಳಮಾವಾಸ್ಯೆ ನಿಮಿತ್ತ ಚರಗ ಚೆಲ್ಲಿ ಹಬ್ಬ ಆಚರಿಸಿದರು.

    ನಗರದ ಹೊರವಲಯ ಸೇರಿ ಗ್ರಾಮೀಣ ಭಾಗಗಳಲ್ಲಿ ಬೆಳಗ್ಗೆಯಿಂದಲೇ ಜನರು ಹಬ್ಬದ ಅಡುಗೆ ಮಾಡಿಕೊಂಡು ಹೊಲಗಳಿಗೆ ತೆರಳಿದರು. ಬಳಿಕ ಭೂತಾಯಿಗೆ ಪೂಜೆ ಸಲ್ಲಿಸಿ ಬೆಳೆಗಳ ರಕ್ಷಣೆಗೆ ಬೇಡಿಕೊಂಡರು. ಮನೆಮಂದಿಯಲ್ಲ ಸೇರಿ ಹೊಲದಲ್ಲಿಯೇ ಎಳ್ಳು, ಶೇಂಗಾ ಹೋಳಿಗೆ, ತುಪ್ಪ ಸೇರಿ ವಿವಿಧ ಖಾದ್ಯಗಳನ್ನು ಸವಿದು ಹರ್ಷಪಟ್ಟರು. ತಮ್ಮ ಬೆಳೆ ಉತ್ತಮವಾಗಿ ಬರಲಿ ಎಂದು ಭೂಮಿತಾಯಿಗೆ ಈ ಅವಧಿಯಲ್ಲಿ ಪೂಜೆ ಸಲ್ಲಿಸುವುದು ಹಿರಿಯರು ರೂಢಿಸಿಕೊಂಡು ಬಂದ ಪದ್ಧತಿ.

    ಇತ್ತೀಚೆಗೆ ಈ ಸಂಪ್ರದಾಯಗಳು ಕಡಿಮೆಯಾಗುತ್ತಿದ್ದರೂ, ಗ್ರಾಮೀಣ ಭಾಗದ ಜನರು ಅನುಸರಿಸಿಕೊಂಡು ಬರುತ್ತಿದ್ದಾರೆ. ವರ್ಷದ ಮೊದಲ ಹಬ್ಬ ಇದಾಗಿದ್ದು, ಕಳೆದ ವರ್ಷ ಕೋವಿಡ್ ಕರಿನೆರಳು ಆವರಿಸಿದ ಕಾರಣ ಸಿಹಿಗಿಂತ ಕಹಿಯನ್ನೇ ಜನರು ಅನುಭವಿಸುವಂತಾಗಿದೆ. ಈ ವರ್ಷವಾದರೂ ಎಲ್ಲರ ಪಾಲಿಗೆ ಸಿಹಿ ದೊರೆಯಲಿ ಎಂದು ಬೇಡಿಕೊಂಡರು. ಕೆಲ ಹೊತ್ತು ಹೊಲದಲ್ಲೇ ಕುಟುಂಬದವರೊಂದಿಗೆ ಕಾಲ ಕಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts