More

    ನಾಳೆಗೂ ಇಂದೇ ದಂಡ ವಸೂಲಿ ಮಾಡುತ್ತಿರುವ ಕೊಪ್ಪ ಎಸ್​ಐ ಅಯ್ಯನಗೌಡ

    ಮಂಡ್ಯ: ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣಕ್ಕೆ ಮಾ. 8ರಂದು ಸಾರ್ವಜನಿಕರ ಮೇಲೆ ಗೂಂಡಾಗಿರಿ ನಡೆಸಿ ಜನಾಕ್ರೋಶಕ್ಕೆ ತುತ್ತಾಗಿದ್ದ ಕೊಪ್ಪ ಎಸ್​ಐ ಮತ್ತೆ ಕಿರಿಕ್ ಆರಂಭಿಸಿದ್ದಾರೆ.

    ಹೌದು, ಸಾರ್ವಜನಿಕರ ಜತೆ ಗೂಂಡಾ ರೀತಿ ವರ್ತಿಸುವ ಎಸ್​ಐ ಅಯ್ಯನಗೌಡ ಜೂ.6ರಂದು ವ್ಯಕ್ತಿಗತ ಅಂತರ ಕಾಯ್ದುಕೊಂಡಿಲ್ಲ ಎಂದು ಕೌಡ್ಲೆಯ ಓರ್ವ ವ್ಯಕ್ತಿಗೆ 100 ರೂ.ದಂಡ ವಿಧಿಸಿದ್ದಾರೆ. ಜತೆಗೆ ಮತ್ತೊಬ್ಬರಿಗೆ ಸಂಚಾರ ನಿಯಮ ಉಲ್ಲಂಘನೆ ಎಂದು 500 ರೂ. ದಂಡ ವಿಧಿಸಿದ್ದಾರೆ. ಹೀಗೆ ಕ್ಷುಲ್ಲಕ ಕಾರಣಕ್ಕೆ ಹಲವು ಜನರಿಗೆ ದಂಡ ವಿಧಿಸುವ ಮೂಲಕ ಸರ್ಕಾರದ ಬೊಕ್ಕಸ ತುಂಬಿಸಿಕೊಡುತ್ತಿದ್ದಾರೆ.

    ಕರೊನಾ ಹೆಮ್ಮಾರಿಯಿಂದ ರಕ್ಷಣೆಗಾಗಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕಾದುದು ಪ್ರತಿಯೊಬ್ಬರ ಕರ್ತವ್ಯ. ಸರ್ಕಾರದ ಅಣತಿಯಂತೆ ದಂಡ ವಿಧಿಸಬೇಕು. ಆದರೆ, ಇಡೀ ಜಿಲ್ಲೆಯಲ್ಲೇ ಇಲ್ಲದ ಕಾನೂನು ಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಮಾತ್ರ ಏಕೆ ಎಂಬುದು ಅರ್ಥವಾಗದ ಸಂಗತಿಯಾಗಿದೆ. ಅಯ್ಯನಗೌಡ ಶಿಸ್ತಿನ ಅಧಿಕಾರಿಯಾಗಿದ್ದು ಜನರಲ್ಲಿ ಜಾಗೃತಿ ಮೂಡಿಸಲು ದಂಡ ವಿಧಿಸುತ್ತಿದ್ದಾರೆ ಎಂದುಕೊಂಡರೆ ಅದು ತಪ್ಪು!

    ಇದನ್ನೂ ಓದಿ:  ವಿಶ್ವಗುರು: ಚೀನಾದೊಂದಿಗೆ ಯುದ್ಧವಾದ್ರೆ ಯಾರ್ ಗೆಲ್ತಾರೆ?!

    ಆದರೆ, ಎಸ್​ಐ ಆಗಲೇ ಮಂಗಳವಾರದ ಲೆಕ್ಕದಲ್ಲಿ ಅಂದರೆ ಜೂ.16ರಂದು ವ್ಯಕ್ತಿಗತ ಅಂತರ ಕಾಯ್ದುಕೊಂಡಿಲ್ಲ ಎಂದು ದಂಡ ವಿಧಿಸಿ ರಸೀದಿ ನೀಡಿದ್ದಾರೆ. ಅಂತೆಯೇ, ಮತ್ತೊಬ್ಬರು ಸಂಚಾರ ಉಲ್ಲಂಘನೆ ಮಾಡಿರುವುದು ಶನಿವಾರ (ಜೂ.13). ಆದರೆ, ಅವರಿಗೆ ಭಾನುವಾರ (ಜೂ.14) ದ ದಿನಾಂಕದಲ್ಲಿ ದಂಡ ವಿಧಿಸಿ ಹಣ ವಸೂಲಿ ಮಾಡಿದ್ದಾರೆ.

    ಬಾಡಿಗೆಗೂ ಸಿಗಲಿವೆ ಪಠ್ಯಪುಸ್ತಕಗಳು: ಇದು ಟೆಕ್ಕಿಗಳ ಬುಕ್ ರೂಟ್ ನವೋದ್ಯಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts