More

    ಬರೋಬ್ಬರಿ ನಾಲ್ಕೂವರೆ ಕೋಟಿ ಮೌಲ್ಯದ ವಸ್ತುಗಳನ್ನು ಮರಳಿಸಿದ ಪೊಲೀಸರು

    ಕೋಲಾರ: ಕಳವು, ಸುಲಿಗೆ ಮುಂತಾದ ಅಪರಾಧ ಕೃತ್ಯಗಳ ಸಂಬಂಧವಾಗಿ ಸುಮಾರು ನಾಲ್ಕುವರೆ ಕೋಟಿ ರೂಪಾಯಿ ಮೌಲ್ಯದ ನಗದು, ವಸ್ತುಗಳನ್ನು ಕೋಲಾರ‌ ಮತ್ತು ಕೆಜಿಎಫ್ ಪೊಲೀಸರು ವಶಪಡಿಸಿಕೊಂಡಿದ್ದರು. ಹೀಗೆ ಕಳ್ಳಕಾಕರಿಂದ ಜಪ್ತಿಪಡಿಸಿಕೊಳ್ಳಲಾಗಿದ್ದ ವಸ್ತುಗಳನ್ನು ಅವುಗಳ ವಾರಸುದಾರರಿಗೆ ವಿತರಣೆ ಮಾಡುವ ಕಾರ್ಯಕ್ರಮವನ್ನು ಇಂದು ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.

    ಕೋಲಾರ ಪೊಲೀಸರ ಕಾರ್ಯಾಚರಣೆಯಲ್ಲಿ 3.58 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವುಗಳಲ್ಲಿ 76 ದ್ವಿಚಕ್ರ ವಾಹನಗಳು, 4 ಕಾರು, 1 ಜೆಸಿಬಿ, 1 ಆಟೋ, 1 ಟ್ರ್ಯಾಕ್ಟರ್, ಬಂಗಾರ, ಬೆಳ್ಳಿ, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದ್ದವು. ಕೆಜಿಎಫ್ ಪೊಲೀಸರು 45 ದ್ವಿಚಕ್ರ‌ ವಾಹನಗಳು, 4 ಕಾರು, ಚಿನ್ನಬೆಳ್ಳಿ ಸೇರಿದಂತೆ 77.53 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

    ಇದನ್ನೂ ಓದಿ: ಆರ್‌ಟಿಪಿಎಸ್‌ನ 6 ಘಟಕಗಳಿಗೆ ರೆಸ್ಟ್; ರಾಜ್ಯದ ವಿದ್ಯುತ್ ಬೇಡಿಕೆ ಇಳಿಕೆ

    ಇಂದು ಕೋಲಾರದ‌ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಕೇಂದ್ರ ವಲಯದ‌ ಐಜಿಪಿ ಚಂದ್ರಶೇಖರ್ ಸಮ್ಮುಖದಲ್ಲಿ ಈ ವಸ್ತುಗಳನ್ನು ವಾರಸುದಾರರಿಗೆ ವಿತರಿಸಲಾಯಿತು. ಕೋಲಾರ ಎಸ್ಪಿ ಕಿಶೋರ ಬಾಬು ಮತ್ತಿತರ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

    Big Bossಗೆ ಮತ್ತೆ ಎಂಟ್ರಿ ಕೊಡಲಿದ್ದಾರೆ ರಾಖಿ ಸಾವಂತ್; ಈ ಬಾರಿ ಜೋಡಿಯಾಗಿ!

    ಕಾಂಗ್ರೆಸ್​ ನಾಯಕ ಸಲ್ಮಾನ್​ ಖುರ್ಷಿದ್​ ಪುಸ್ತಕದ ನಿಷೇಧ ಕೋರಿದ್ದ ಅರ್ಜಿ ವಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts