More

    ಪೊಲೀಸರು ಕಾನೂನು ಪರಿಪಾಲನೆ ಮಾಡಲಿ

    ಕುಶಾಲನಗರ: ಪೊಲೀಸರು ಕಾನೂನು ಪರಿಪಾಲನೆ ಮಾಡುವ ಮೂಲಕ ಇಲಾಖೆ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಸಲಹೆ ನೀಡಿದರು.

    ಜೂನಿಯರ್ ಛೇಂಬರ್ ಆಫ್ ಇಂಟರ್‌ನ್ಯಾಷನಲ್ (ಜೆಸಿಐ), ಸುಂಟಿಕೊಪ್ಪ ಜೆಸಿಐ ಹಾಗೂ ಸೋಮವಾರಪೇಟೆ ಪೊಲೀಸ್ ಉಪ ವಿಭಾಗದ ಸಹಯೋಗದಲ್ಲಿ ಭಾನುವಾರ ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿಗೆ ಆಯೋಜಿಸಿದ್ದ ಒತ್ತಡ ನಿರ್ವಹಣೆ ಮತ್ತು ಸಮಯ ಪಾಲನೆ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಿತ್ಯ ಸಾಕಷ್ಟು ಒತ್ತಡ ನಡುವೆ ಕೆಲಸ ಮಡುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನಸ್ಸಿಗೆ ನೆಮ್ಮದಿ ಹೊಂದುವಂತಾಗಬೇಕು ಎಂದರು.

    ಇಂತಹ ತರಬೇತಿ ಕಾರ್ಯಾಗಾರ ಜಂಜಾಟದಿಂದ ಹೊರಬರಲು ಸಹಕಾರಿ. ಜತೆಗೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ಹೇಳಿದರು.
    ಜೆಸಿಐ ಸಂಸ್ಥೆಯ ವಲಯ-14 ರ ಅಧ್ಯಕ್ಷೆ ಆಶಾ ಜೈನ್ ಮಾತನಾಡಿ, ಇಂತಹ ತರಬೇತಿಗಳು ಪೊಲೀಸರ ಕಾರ್ಯಕ್ಷಮತೆ ಹಾಗೂ ವೃತ್ತಿಪರತೆ ಹೆಚ್ಚಿಸಲಿದೆ. ಸಮಾಜ ಹಾಗೂ ಜನರ ರಕ್ಷಣೆಗಾಗಿ ಸದಾ ಕಾರ್ಯ ನಿರ್ವಹಿಸುವ ಪೊಲೀಸರ ಸೇವೆ ಅನನ್ಯ ಎಂದರು.

    ಅಧ್ಯಕ್ಷತೆ ವಹಿಸಿದ್ದ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, ಇಂತಹ ತರಬೇತಿಯಿಂದ ಪೊಲೀಸರು ಮನಸ್ಸಿಗೆ ವಿಶ್ರಾಂತಿ ಪಡೆಯಬಹುದು ಎಂದರು.

    ಜೆಸಿಐ ವಲಯದ ಮಾಜಿ ಅಧ್ಯಕ್ಷ ದೇವಿಪ್ರಸಾದ್, ವಲಯ ಪೂರ್ವ ಉಪಾಧ್ಯಕ್ಷ ಕೆ.ಪ್ರವೀಣ್, ವಲಯ ಸಂಯೋಜಕ ಬಿ.ಕೆ.ಸತೀಶ್ ಕುಮಾರ್, ಜೆಸಿಐನ ನಿಕಟ ಪೂರ್ವ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಕಾರ್ಯದರ್ಶಿ ಮಂಜುನಾಥ್, ಯೋಜನಾ ನಿರ್ದೇಶಕ ನಿರಂಜನ್, ಜೆಸಿಐ ಸದಸ್ಯರಾದ ಡೆನಿಸ್ ಡಿಸೋಜ, ಜಾಯ್ದ ಅಹ್ಮದ್, ಎಸ್.ಮುರುಗೇಶ್, ಫೆಲ್ಸಿ ಡೆನಿಸ್, ಜಿ.ಬಿ.ಹರೀಶ್, ಇನ್‌ಸ್ಪೆಪೆಕ್ಟರ್‌ಗಳಾದ ರಾಜೇಶ್ ಕೊಟ್ಯಾನ್, ವಸಂತಕುಮಾರ್, ಪಿಎಸ್‌ಐಗಳಾದ ಎಂ.ಸಿ.ಶ್ರೀಧರ್, ಮೋಹನ್‌ರಾಜ್, ರವಿಶಂಕರ್, ಎಚ್.ಮಂಜುಳಾ, ಕಾಶೀನಾಥ್ ಬಗಲಿ, ಲೋಹಿತ್, ರಮೇಶ್ ಇತರರಿದ್ದರು.

    ಸನ್ಮಾನ : ಸುಂಟಿಕೊಪ್ಪ ಜೆಸಿಐ ವತಿಯಿಂದ ರಾಷ್ಟ್ರೀಯ ಜೆಸಿಐ ಸಂಸ್ಥೆಯ ಪೂರ್ವಾಧ್ಯಕ್ಷ ಟಿ.ವಿ.ಎನ್.ಮೂರ್ತಿ, ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಜೆಸಿಐ ವಲಯಾಧ್ಯಕ್ಷೆ ಆಶಾಜೈನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts