More

    ಹಿತಾಸಕ್ತಿ ಅಡಕತ್ತರಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ

    ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಹಿತಾಸಕ್ತಿಯ ಅಡಕತ್ತರಿಗೆ ಸಿಲುಕಿಕೊಂಡಿದ್ದಾರೆ. ಮಧ್ಯಪ್ರದೇಶ ರಾಜ್ಯ ಕ್ರಿಕೆಟ್​ ಸಂಸ್ಥೆಯ ಸಂಜೀವ್​ ಗುಪ್ತಾ ವಿರಾಟ್​ ಕೊಹ್ಲಿ ವಿರುದ್ಧ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ನೈತಿಕ ಸಮಿತಿ ಅಧಿಕಾರಿ ಡಿ.ಕೆ. ಜೈನ್​ಗೆ ದೂರು ಕೊಟ್ಟಿದ್ದಾರೆ.

    ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾದ ನಾಯಕರಾಗಿರುವ ಹೊರತಾಗಿಯೂ ಕೆಲವೊಂದು ವಾಣಿಜ್ಯ ಸಂಸ್ಥೆಗಳನ್ನು ಹೊಂದಿದ್ದಾರೆ. ಲೋಧಾ ಸಮಿತಿಯ ಶಿಫಾರಸಿನ ಅನ್ವಯ ಇದು ಹಿತಾಸಕ್ತಿಗೆ ಎಡೆಮಾಡಿಕೊಡುತ್ತದೆ. ಬಿಸಿಸಿಐನ ನಿಯಮ 38(1)(iii)ನಂತೆ ಓದಲಾಗಿರುವ 38(4)(ಎ)-ಆಟಗಾರ ಮತ್ತು 38(4)(o) ಗುತ್ತಿಗೆಯ ವ್ಯಾಪ್ತಿಗೆ ಅವರು ಒಳಪಡುತ್ತಾರೆ. ವಾಣಿಜ್ಯ ಸಂಸ್ಥೆಗಳನ್ನು ಹೊಂದಿರುವ ಕಾರಣ ಅದು ಸುಪ್ರೀಂಕೋರ್ಟ್​ ಪ್ರತಿಪಾದಿಸಿರುವ ಬಿಸಿಸಿಐನ ನಿಯಮ 38(4) ಅನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಅವರು ಯಾವುದಾದರೂ ಒಂದು ಹುದ್ದೆಯನ್ನು ತೊರೆಯಬೇಕಾಗುತ್ತದೆ ಎಂದು ನೈತಿಕ ಸಮಿತಿಗೆ ರವಾನಿಸಿರುವ ಮೇಲ್​ನಲ್ಲಿ ಅವರು ಆರೋಪಿಸಿದ್ದಾರೆ.

    ಇವರ ಪ್ರಕಾರ ಟೀಂ ಇಂಡಿಯಾದ ನಾಯಕನಾಗಿರುವ ವಿರಾಟ್​ ಕೊಹ್ಲಿ ಅವರು ವಿರಾಟ್​ ಕೊಹ್ಲಿ ಸ್ಪೋರ್ಟ್ಸ್​ ಎಲ್​ಎಲ್​ಪಿ ಕಂಪನಿಯಲ್ಲಿ ನಿರ್ದೇಶಕರಾಗಿದ್ದಅರೆ. ಅಮಿತ್​ ಅರ್ಜುನ್​ ಸಜ್ದೇಹ್​ ಇದರ ಮಾಲೀಕರಾಗಿದ್ದಾರೆ. ಕಾರ್ನರ್​ಸ್ಟೋನ್​ ವೆಂಚರ್​ ಪಾರ್ಟನರ್ಸ್​ ಎಲ್​ಎಲ್​ಪಿ ಎಂಬ ಸಂಸ್ಥೆಯಲ್ಲಿ ವಿರಾಟ್​ ಕೊಹ್ಲಿ ನಿರ್ದೇಶಕರಾಗಿದ್ದರೆ ಅಮಿತ್​ ಅರುಣ್​ ಸಜ್ದೇಹ್​ ಮತ್ತು ಬಿನಯ್​ ಭರತ್​ ಖೀಂಜಿ ಮಾಲೀಕರಾಗಿದ್ದಾರೆ ಎಂಬುದು ಸಂಜೀವ್​ ಗುಪ್ತಾ ಅವರ ಆರೋಪವಾಗಿದೆ.

    ಇದನ್ನೂ ಓದಿ: 25ನೇ ಜನ್ಮದಿನದ ಸಂಭ್ರಮದಲ್ಲಿ ಪಿವಿ ಸಿಂಧು, ಬ್ಯಾಡ್ಮಿಂಟನ್​ ತಾರೆಯ ಈ 25 ಸಾಧನೆಗಳ ಬಗ್ಗೆ ನಿಮಗೆ ಗೊತ್ತೇ?

    ಲೋಧಾ ಸಮಿತಿಯ ಶಿಫಾರಸುಗಳು ಮತ್ತು ಸುಪ್ರೀಂಕೋರ್ಟ್​ ಮಾನ್ಯ ಮಾಡಿರುವ ಬಿಸಿಸಿಐನ ಸಂವಿಧಾನವನ್ನು ಎಲ್ಲರೂ ನೂರಕ್ಕೆ ನೂರು ಪಾಲನೆಯಾಗಬೇಕು ಎಂಬುದಷ್ಟೇ ನನ್ನ ಉದ್ದೇಶ. ಯಾರು ಅದೆಷ್ಟೇ ಶ್ರೀಮಂತರು, ದೊಡ್ಡವರು, ಪ್ರಭಾವಿಗಳು ಆಗಿದ್ದರೂ ನಾನು ಅದನ್ನು ಕೇರ್​ ಮಾಡುವುದಿಲ್ಲ. ಏಕೆಂದರೆ ಯಾರೂ ಕೂಡ ಈ ನೆಲದ ಕಾನೂನಿಗಿಂತ ದೊಡ್ಡವರಲ್ಲ ಎಂದು ಸಂಜೀವ್​ ಗುಪ್ತಾ ಹೇಳಿದ್ದಾರೆ.

    ಇದಕ್ಕೂ ಮುನ್ನು ಸಂಜೀವ್​ ಗುಪ್ತಾ ಅವರು ಈಗ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್​ ಗಂಗೂಲಿ, ರಾಹುಲ್​ ದ್ರಾವಿಡ್​ ಸೇರಿ ಹಲವರ ವಿರುದ್ಧ ಹಿತಾಸಕ್ತಿಯ ದೂರು ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ಅವರೆಲ್ಲರೂ ತಮ್ಮ ಹೆಚ್ಚುವರಿ ಹುದ್ದೆಗಳನ್ನು ಬಿಟ್ಟು ಕೆಳಗಿಳಿದಿದ್ದರು.

    ‘ಅಲ್ಹಾನ ಸಂತೃಪ್ತಿಗಾಗಿ ದೇವಾಲಯದ ಗೋಡೆ ಕೆಡವಿದ್ದೇನೆ- ತುಂಬಾ ಖುಷಿಯಾಗುತ್ತಿದೆ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts