More

    ಮಹಾಮಾರಿ ಕರೊನಾ ನಿರ್ನಾಮವಾಗುತ್ತಾ? ಕೋಡಿಮಠ ಶ್ರೀಗಳು ನುಡಿದ ಭವಿಷ್ಯವೇನು?

    ಹಾಸನ: ಜಗತ್ತಿನಾದ್ಯಂತ ಪ್ರಸಾರವಾಗಿರುವ ಮಹಾಮಾರಿ ಕರೊನಾ ವೈರಸ್​ ಸೋಂಕು ಮನುಕುಲಕ್ಕೆ ಕಂಟಕ ಪ್ರಾಯವಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಶೋಚನೀಯ ಸಂಗಿತ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಹೇಳಿದರು.

    ಅರಸೀಕೆರೆ ತಾಲ್ಲೂಕಿನ ಕೋಡಿ ಮಠದಲ್ಲಿಂದು ಮಾತನಾಡಿದ ಅವರು ಕರೊನಾ ವೈರಸ್​ ಕೇವಲ ಮನುಕುಲ ಅಲ್ಲದೆ, ಪ್ರಾಣಿ, ಪಕ್ಷಿ, ವೃಕ್ಷಗಳ ಮೇಲೆಯೂ ಬರುವ ಸಾಧ್ಯತೆ ಇದೆ. ಕರೊನಾವನ್ನು ಮನುಷ್ಯ ಕೇವಲ ಸ್ವಾರ್ಥದಿಂದ ತಂದುಕೊಳ್ಳುತ್ತಾ ಇದ್ದಾನೆ. ವಿಶಾಲಬುದ್ಧಿಯಿಂದ ಮನುಷ್ಯರಿಂದಲೇ ರೋಗ ಹುಷಾರಾಗುವ ಲಕ್ಷಣ ಇದೆ ಎಂದು ಭವಿಷ್ಯ ನುಡಿದರು.

    ಇದನ್ನೂ ಓದಿ: 7ನೇ ಜೈನಮುನಿಯಾಗಿ ದೀಕ್ಷೆ ಪಡೆದ ಹಾರ್ದಿಕ್; ಹೇಮಚಂದ್ರ ವಿಜಯ ಮಹರಾಜ್ ಜೀ ಎಂದು ನಾಮಕರಣ

    ಸ್ವಚ್ಚತೆ ಬಹಳ ಮುಖ್ಯವಾಗಿದೆ. ಸ್ವಚ್ಚತೆ ಅನುಸರಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ. ನಮ್ಮಲ್ಲಿ ಅನೇಕ ಮದ್ದು ಹಾಗೂ ಸಾಕಷ್ಟು ವೈದ್ಯರಿದ್ದಾರೆ. ಹೀಗಾಗಿ ಕರೊನಾ ಎಂತಹ ಮಟ್ಟಕ್ಕೆ ಹೋದರು ಹೆದರುವ ಅವಶ್ಯಕತೆ ಇಲ್ಲ ಎಂದು ಧೈರ್ಯ ತುಂಬಿದರು.

    ಇತ್ತೀಚೆಗೆ ಕೋಡಿಮಠದ ಒಬ್ಬ ಶಾಸ್ತ್ರಿಗಳಿಗೆ ರೋಗ ಹರಡಿದೆ ಎಂಬ ಸುದ್ದಿ ನಾವು ಕೇಳಿದ್ದೇವೆ. ಆ ಶಾಸ್ತ್ರಿ ಎಂಬ ಹುಡುಗ ನಮ್ಮ ಮಠದ ಶಿಷ್ಯನೇ. ಇಲ್ಲೇ ಪಕ್ಕದ ಜಾವಗಲ್ ಗ್ರಾಮದವನು. ಸದ್ಯ ಆತ ಮಠದಲ್ಲಿ ಇಲ್ಲ. ಬೆಂಗಳೂರಿನಲ್ಲಿ ಇದ್ದಾನೆ. ಅಲ್ಲಿಯೇ ಇದ್ದುಕೊಂಡು ಹೋಮ ಹಾಗೂ ಪೂಜೆ ಮಾಡುತ್ತಿದ್ದಾನೆ ಎಂದು ಸ್ಪಷ್ಟನೆ ನೀಡಿದರು.

    ಇದನ್ನೂ ಓದಿ: ಪರೀಕ್ಷಾ ಕೇಂದ್ರದಿಂದ ಸೋಂಕು ಹರಡಿಲ್ಲ: ಸಚಿವ ಸುರೇಶ್ ಕುಮಾರ್

    ಈ ಹಿಂದೆ ರೋಗದ ಬಗ್ಗೆ ಎಲ್ಲ ಹೇಳಿದ್ದೇವೆ. ಬರುವ ಹುಣ್ಣಿಮೆ ಕಳೆದ ತಕ್ಷಣ ಇದರ ಬಗ್ಗೆ ವಿಸ್ತಾರವಾಗಿ ಹೇಳುತ್ತೇನೆ. ಮುಂದೆ ಯುದ್ಧದಂತಹ ದುರ್ಘಟನೆಗಳು ಜರುಗಲ್ಲ, ಯಾರೂ ಕೂಡ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಬಯಲು ಚಿತ್ರಮಂದಿರಗಳಾಗುತ್ತಿವೆ ಸೂಪರ್​ ಮಾರ್ಕೆಟ್​ನ ಪಾರ್ಕಿಂಗ್​ ತಾಣಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts