More

    ನೇಕಾರರ ಹಿತ ಕಾಪಾಡಲು ಮಂಡಳಿ ಬದ್ಧ

    ಕೊಡೇಕಲ್: ಖಾದಿ ಉತ್ಪನ್ನಗಳಿಗೆ ಇತ್ತೀಚೆಗೆ ಮಾರುಕಟ್ಟೆ ದೊರಕುತ್ತಿರುವುದು ಸಂತಸದ ವಿಷಯವಾಗಿದ್ದು, ನೇಕಾರರ ಹಿತ ಕಾಪಾಡಲು ಖಾದಿ ಮಂಡಳಿ ಸದಾ ಬದ್ಧವಾಗಿದೆ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಯಾದಗಿರಿ ಜಿಲ್ಲಾ ಅಧಿಕಾರಿ ಮನಿಶಾ ಸಿ.ಎಚ್.ಹೇಳಿದರು.

    ಗ್ರಾಮದ ಖಾದಿ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ಅವರು, ಕೈಮಗ್ಗ ಮತ್ತು ರೇಷ್ಮೆ ಮಗ್ಗಗಳನ್ನು ವೀಕ್ಷಿಸಿ ಸಿಬ್ಬಂದಿ ಜತೆ ಮಾತನಾಡಿದ ಅವರು, ಮತ್ತೆ ಖಾದಿ ಯುಗ ಆರಂಭವಾಗಿದೆ. ಮಾರುಕಟ್ಟೆಯಲ್ಲಿ ಈ ಬಟ್ಟೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಮಂಡಳಿ ಕೂಡ ನೇಕಾರರಿಗೆ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ ಎಂದರು.

    ನೇಕಾರರು ನೇಯ್ದ ೧ ಮೀಟರ್ ಬಟ್ಟೆಗೆ ೭ ರೂ., ಒಂದು ನೂಲು ಖಾದಿ ಬಳಿಗೆ ೩ ರೂ. ಮತ್ತು ಒಂದು ದಿನಕ್ಕೆ ಕಾಮಗಾರಿಗೆ ೯.೫೦ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ತಿಳಿಸಿದರು.

    ತಾಂತ್ರಿಕ ಮೇಲ್ವಿಚಾರಕ ಓಂಕಾರ ಹಡಪದ, ಕಲಬುರಗಿ ಖಾದಿ ಗ್ರಾಮೋದ್ಯೋಗ ಸಂಘದ ಕರ‍್ಯದರ್ಶಿ ಶಿವಶಂಕರ ಪೂಜಾರಿ, ವ್ಯವಸ್ಥಾಪಕ ಎಸ್.ಎನ್.ಅಡ್ಡಿ., ಎಸ್.ಬಿ.ಅಡ್ಡಿ , ರೂಪೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts